Kolara; ಡಿಸಿಸಿ ಬ್ಯಾಂಕಿನಲ್ಲಿ ಅವ್ಯವಹಾರ, ಕೇಂದ್ರ ವಿತ್ತ ಸಚಿವೆಗೆ ಸಂಸದ ಮುನಿಸ್ವಾಮಿ ದೂರು

By Suvarna News  |  First Published Sep 30, 2022, 11:56 PM IST

ಡಿಸಿಸಿ ಬ್ಯಾಂಕಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ  ಸಂಸದ ಎಸ್.ಮುನಿಸ್ವಾಮಿ ದುರು ನೀಡಿದ್ದಾರೆ.


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,

ಕೋಲಾರ (ಸೆ.30): ಡಿಸಿಸಿ ಬ್ಯಾಂಕಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ದೂರು ನೀಡಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಬಾರ್ಡ್ ನಿಂದ ಬರುವ ಹಣವನ್ನು ಒಂದು ಪಕ್ಷಕ್ಕೋಸ್ಕರ ಶಾಸಕರು ಮತ್ತಿತರರು ಉಪಯೋಗಿಸಿಕೊಂಡು ಸ್ವಂತ ಕೈಯಿಂದ ಹಣ ನೀಡುವಂತೆ ಮತಗಳಿಗಾಗಿ ಹಣ ವಿತರಣೆ ಮಾಡಲಾಗುತ್ತಿದ್ದು,ಅದಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಪರವಾಗಿ ದೂರು ನೀಡಲಾಗಿದೆ.ಮುಂದಿನ ದಿನಗಳಲ್ಲಿ ಅದರ ವಿಚಾರ ಹೊರಬರಲಿದೆ ಎಂದು ತಿಳಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸಭಾ ಸದಸ್ಯರಾಗಿದ್ದಾನಿಂದಲೂ ಕೋಲಾರ ಜಿಲ್ಲೆಯ ಬಗ್ಗೆ ಹೆಚ್ಚಿನ ಒಲವಿದೆ ಹಿಂದೆ ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯದ ವಿಚಾರವಾಗಿ 2.5 ಕೋಟಿರ ರುಪಾಯಿ ಹಣವನ್ನು ನೀಡಿದ್ದರು. ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು, ಮಂತ್ರಿಗಳು ತಲಾ 75 ಕೆರೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕನಸು ಹೊಂದಿದ್ದು,ಅಂತೆಯೇ ನಮ್ಮ ಜಿಲ್ಲೆಯಲ್ಲಿ ನಿರ್ಮಲಾ ಸೀತಾರಾಮನ್ 75 ಕೆರೆಗಳ ಅಭಿವೃದ್ಧಿಗೆ ತಮ್ಮ ಅನುದಾನದಲ್ಲಿ ಸುಮಾರು 1.83 ಕೋಟಿರೂ ಜತೆಗೆ ಸಿಎಸ್‌ಆರ್ ಸೇರಿದಂತೆ ಇನ್ನಿತರೆ ಅನುದಾನದಡಿ 38 ಕೋಟಿ ರೂಗಳನ್ನು ನೀಡಿದ್ದರು. 

Tap to resize

Latest Videos

ಮೊದಲ ಹಂತದಲ್ಲಿ ಯಾವ ಕೆಲಸಗಳಾಗುತ್ತಿವೆ ಎನ್ನುವುದನ್ನು ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸಿದ್ದರು. ಈಗಾಗಲೇ ಫೋಟೋಗಳ ಮೂಲಕ ನೋಡಿದ್ದರು. ಪ್ರತ್ಯಕ್ಷವಾಗಿ ನೋಡಲು ಆಗಮಿಸಿದ್ದು, ಸಣ್ಣಪುಟ್ಟ ಬದಲಾವಣೆಗಳನ್ನು ಸೂಚಿಸಿದ್ದಾರೆ. 

ಕೆರೆಗಳ ವಿಚಾರವಾಗಿ ಅವರು ಅಸಮಧಾನ ವ್ಯಕ್ತಪಡಿಸಿಲ್ಲ. ಕಾಮಗಾರಿ ಆರಂಭಿಸಿದ ಬಳಿಕ ಜಿಲ್ಲೆಯಲ್ಲಿ ಮಳೆಯಾಗಿತ್ತು. ಕೆರೆಗಳಲ್ಲಿ ಗಿಡಗಳನ್ನು ನೆಡಬೇಡಿ. ಬೌಂಡರಿ ನಿಗಧಿಪಡಿಸಿ ಅದಕ್ಕಿಂತ ಹೊರಗೆ ಗಿಡಗಳನ್ನು ನೆಡಬೇಕು. ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಿ ಎಂದು ಸೂಚಿಸಿದ್ದಾರೆ. 

ಮಾಡುವ ಕೆಲಸವನ್ನು ಸಮರ್ಪಕವಾಗಿ ಮಾಡಿ, ಅನುದಾನ ಎಷ್ಟು ಬೇಕಾದರೂ ನೀಡಲಾಗುವುದಾಗಿ ಹೇಳಿದ್ದಾರೆ ಹೊರತು ಕೋಪ ಮಾಡಿಕೊಂಡು ಹೋಗಿರುವ ಪ್ರಮೇಯವೇ ಇಲ್ಲ.  ಕಾಮಗಾರಿ ಈಗ ಆರಂಭವಷ್ಟೇ, ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಜಿಲ್ಲೆಗೆ ಬರಲಿದ್ದಾರೆ ಎಂದು ಹೇಳಿದರು. 

‘ಡಿಸಿಸಿ’ ಸಾಲ ವಿತರಣೆ ವೇಳೆ ಕಾಂಗ್ರೆಸ್‌ ಶಾಸಕರನ್ನು ದೂರವಿಡಿ: ಬಿಜೆಪಿ ನಾಯಕರು

ನಾನೂ ಸಹ 75 ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಕೋಲಾರಮ್ಮ ಕೆರೆ ಮೊದಲು ಯಾವ ರೀತಿ ಇತ್ತು, ಈಗ ಯಾವ ರೀತಿ ಇದೆ ಎನ್ನುವುದನ್ನು ನೋಡಬಹುದಾಗಿದೆ. ಸ್ವಂತವಾಗಿ 8 ಕೋಟಿರೂಗಳನ್ನು ಖರ್ಚು ಮಾಡಿ ಹಲವು ಕೆಲಸಗಳನ್ನು ಮಾಡಲಾಗುತ್ತಿದ್ದು, ವರ್ಷದ ಒಳಗಾಗಿ ಪೂರ್ಣಗೊಳ್ಳಲಿವೆ ಎಂದರು.ಅಲ್ಲದೆ ಜಿಲ್ಲೆಯಲ್ಲಿ ಶಿಥಿಲಗೊಂಡಿರುವ 500 ಶಾಲೆಗಳನ್ನು ಪಟ್ಟಿ ಮಾಡಲಾಗಿದ್ದು,ಸಿಎಸ್‌ಆರ್ ಅನುದಾನ ಸೇರಿದಂತೆ ಮತ್ತಿತರ ಅನುದಾನಗಳನ್ನು ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಒಟ್ಟಾರೆಯಾಗಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ.

ಕೋಲಾರ ಡಿಸಿಸಿ ಬ್ಯಾಂಕ್​ನ ವಹಿವಾಟಿನಲ್ಲಿ‌ ಅವ್ಯವಹಾರ: ತನಿಖೆಗೆ ಆದೇಶ

ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ನಡುವೆ ಯಾವುದೇ ಮುಸುಕಿನ ಗುದ್ದಾಟವೇನು ಇಲ್ಲ. ಹೊಂದಾಣಿಕೆಯಿಂದಲೇ ಇದ್ದೇವೆ. ಇಷ್ಟೊತ್ತೂ ಜತೆಯಲ್ಲೇ ಮಾತನಾಡಿಕೊಂಡು ಇದ್ದೆವು. ನೀವು ಹೇಳಿದ್ದರೆ ಹಗ್ ಮಾಡಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದೆವು ಎಂದು ಹಾಸ್ಯವಾಗಿ ನುಡಿದರು.

click me!