ಕಾಂಗ್ರೆಸ್ ನಿಂದ ಪೇ ಸಿಎಂ ಅಭಿಯಾನಕ್ಕೆ ಹಾವೇರಿ ಜಿಲ್ಲೆಯ ಮಠಾಧೀಶರ ಒಕ್ಕೂಟ ಖಂಡನೆ ವ್ಯಕ್ತ ಪಡಸಿದೆ. ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಾವೇರಿ (ಸೆ 30): ಕಾಂಗ್ರೆಸ್ ನಿಂದ ಪೇ ಸಿಎಂ ಅಭಿಯಾನಕ್ಕೆ ಹಾವೇರಿ ಜಿಲ್ಲೆಯ ಮಠಾಧೀಶರ ಒಕ್ಕೂಟ ಖಂಡನೆ ವ್ಯಕ್ತ ಪಡಸಿದೆ. ಹಾವೇರಿಯಲ್ಲಿ ಜಿಲ್ಲಾ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಇಂದು ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಸ್ವಾಮಿಜಿಗಳು, ಪೇ ಸಿಎಂ ಅಭಿಯಾನದ ವಿರುದ್ದ ಮಠಾಧೀಶರ ಅಸಮಾಧಾನ ಹೊರಹಾಕಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಸ್ವಾಮಿಜಿ, ವೈಯಕ್ತಿಕವಾಗಿ ಮುಖ್ಯಮಂತ್ರಿ ಯನ್ನ ಟಾರ್ಗೆಟ್ ಮಾಡಿದ ಹುನ್ನಾರ ಇದು. ಹಿಂದೆ ಕಾನೂನು ಬದ್ದವಾಗಿ ಹೋರಾಟ ನಡೆಯುತ್ತಿತ್ತು. ಆದರೆ ಈಗ ಸಣ್ಣತನವನ್ನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಮುತ್ಸದ್ಧಿ ರಾಜಕಾರಣಿಗಳು ಸಣ್ಣತನದ ರಾಜಕಾರಣ ಮಾಡೋದು ನೋಡಿ ಜನರು ಅವಹೇಳನ ಮಾಡುವ ಸ್ಥಿತಿ ಬರಬಾರದು.ಬೊಮ್ಮಾಯಿಯವರು ಅತ್ಯಲ್ಪ ಅವಧಿಯಲ್ಲಿ ಸಮಾಜಕ್ಕೆ ಬೇಕಾದ ಕೇಲಸ ಮಾಡುತ್ತಿದ್ದಾರೆ. ಅವರ ತೇಜೋವದೆ ಮಾಡಬಾರದು ಎಂದರು. ಇತ್ತ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಕೂಡಾ ಮಾತನಾಡಿ, ಸಿಎಂ ವಿರುದ್ದ ನಡೆಯುತ್ತಿರುವ ಪೇ ಸಿಎಂ ಅಭಿಯಾನ ಖಂಡಿಸಿದರು. ಸ್ವಾಮೀಜಿಗಳು ರಾಜಕಾರಣದ ಹಾದಿ ಯಾಕೆ ಹಿಡಿದಿದ್ದೀರಿ ಎಂದು ಪತ್ರಕರ್ತರು ಪ್ರಶ್ನೆ ಮಾಡುತ್ತಲೇ ಸ್ವಾಮೀಜಿಗಳು ಗಲಿಬಿಲಿಗೊಂಡರು.
ನಾವು ಯಾವದೇ ರಾಜಕಾರಣಿಯನ್ನು ಸಮರ್ಥನೆ ಮಾಡಿಕೊಂಡು ಮಾತನಾಡುತ್ತಿಲ್ಲ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪೇ ಸಿಎಂ ಮೂಲಕ ಸಿಎಂ ಬೊಮ್ಮಾಯಿಯವರ ಒಯಕ್ತಿಕ ತೇಜೋವಧೆ ಮಾಡುವುದಕ್ಕಿಂತ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರೆಸಲಿ ಎಂದು ಸಲಹೆ ನೀಡುತ್ತಿದ್ದೇವೆ ಎಂದು ಸಮಜಾಯಿಷಿ ಕೂಡಾ ನೀಡಿದರು.
undefined
ಅಕ್ಕಿ ಆಲೂರಿನ ಶಿವಬಸವ ಮಹಾ ಸ್ವಾಮಿಜಿ, ಅಗಡಿ ಅಕ್ಕಿಮಠ ಗುರುಲಿಂಗ ಸ್ವಾಮಿಜಿ, ತಿಳವಳ್ಳಿಯ ಮುರುಘಾಮಠದ ನಿರಂಜನ ಸ್ವಾಮಿಜಿ,ಬ್ಯಾಡಗಿಯ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಜಿ, ತಿಪ್ಪಾಯಿಕೊಪ್ಪದ ಮೂಕಪ್ಪಸ್ವಾಮಿ ಮಠದ ಮಹಾಂತ ಸ್ವಾಮಿಜಿ,ಗಂಜಿಗಟ್ಟಿಯ ವೈಜನಾಥ ಶಿವಾಚಾರ್ಯ ಸ್ವಾಮಿಜಿ,ಹಿರೇಮಣಕಟ್ಟಿಯ ವಿಶ್ವರಾಧ್ಯ ಶಿವಚಾರ್ಯ ಸ್ವಾಮಿಜಿ ಸೇರಿದಂತೆ ಹಲವು ಸ್ವಾಮೀಜಿಗಳು ಸುದ್ದಿಗೋಷ್ಟಿಯಲ್ಲಿ ಸಿಎಂ ಬೊಮ್ಮಾಯಿಯವರ ಪರ ಬ್ಯಾಟ್ ಬೀಸಿದರು.
ಪೇ ಸಿಎಂ ಪೋಸ್ಟ್ ಮಾಡುವಷ್ಟು ಕಾಂಗ್ರೆಸ್ ನೀಚಮಟ್ಟಕ್ಕೆ ಇಳಿಬಾರದಿತ್ತು: ಈಶ್ವರಪ್ಪ
ಪೇ ಸಿಎಂ ಕಾಂಗ್ರೆಸ್‌ಗೆ ತಿರುಗುಬಾಣ: ಪೇ ಸಿಎಂ ನಿಂದ ಕಾಂಗ್ರೆಸ್‌ಗೆ ದೊಡ್ಡ ಪ್ರಚಾರ ಸಿಕ್ಕಿದೆ ಅನಕೊಂಡಿದ್ದಾರೆ. ಪೇ ಸಿಎಂ ಕಾಂಗ್ರೆಸ್ ಪಕ್ಷಕ್ಕೆ ತಿರುಗಯಬಾಣವಾಗಲಿದೆ, ಬರುವ ಚುನಾವಣೆಯಲ್ಲಿ ಪೇ ಸಿಎಂ ಅಪ್ರಚಾರಕ್ಕೆ ಜನ ಉತ್ತರಸಲಿದ್ದಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬೇಕಿದ್ದರೆ ರಾಜ್ಯಾದ್ಯಂತ ‘ಪೇಸಿಎಂ’ ಮಾಡಿ: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬೊಮ್ಮಾಯಿ
ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಬಿಎಸ್ವೈ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡ್ತಿದಾರೆ. ಬಿಎಸ್ವೈರನ್ನ ರಾಷ್ಟ್ರೀಯ ನಾಯಕರು ಕಡೆಗಣಿಸಿಲ್ಲ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಬಲಪಡಿಸಲಿದ್ದಾರೆ. ಯಡಿಯೂರಪ್ಪರಿಗೆ ಯಾವುದೇ ಸ್ಥಾನಮಾನದ ಅವಶ್ಯಕತೆ ಇಲ್ಲ. ಯಾರ ನೇತೃತ್ವದಲ್ಲಿ ಚುನಾವಣೆ ಹೋಗಬೇಕು ಅನ್ನೊದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು ಎಂದ ಅವರು ಯಾವುದೇ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದರೂ ಕಾರ್ಯಕರ್ತರು ತಮ್ಮನ್ನು ಗೆಲ್ಲಿಸುತ್ತಾರೆಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.