41ನೇ ವರ್ಷದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಹಿನ್ನೆಲೆಯಲ್ಲಿ ಅ.5 ನಗರದ ಶ್ರೀ ವೆಂಕಟೇಶ್ವರ ವೃತ್ತದಿಂದ ಬೆಳಗ್ಗೆ 11-30ಕ್ಕೆ ಬೃಹತ್ ಶೋಭಾಯಾತ್ರೆ
ವರದಿ: ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ(ಸೆ.30): ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ದಸರಾ ಹಬ್ಬದ ಹಿನ್ನೆಲೆಯಲ್ಲಿ ಅ. 5 ರಂದು ಬೆಳಗ್ಗೆ 11.30 ಕ್ಕೆ ವೆಂಕಟೇಶ್ವರ ವೃತ್ತದಿಂದ ಬೃಹತ್ ಶೋಭಾಯಾತ್ರೆ ಆರಂಭಗೊಳ್ಳಲಿದೆ ಎಂದು ಸಮಿತಿ ಸಂಚಾಲಕ ಸತೀಶ್ ಪೂಜಾರಿ ಹೇಳಿದರು. ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ.26 ರಂದು ದೇವಿಯ ಘಟಸ್ಥಾಪನೆಯೊಂದಿಗೆ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲಾಗಿದೆ ಈಗಾಗಲೇ ಮಹಿಳಾ ಬೈಕ್ ಜಾಥಾ, ಪೂರ್ಣಕುಂಭ ಮೆರವಣಿಗೆ ಮಾಡಲಾಗಿದೆ.ನಾಳೆ ಬೆಳಗ್ಗೆ 10.30 ಕ್ಕೆ ರಾಂ ಅಂಡ್ ಕೋ ವೃತ್ತದಲ್ಲಿ ಸಮಿತಿಯ ನೇತೃತ್ವದಲ್ಲಿ ಯುವಕ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಅ.3 ರಂದು ಬೆಳಗ್ಗೆ 10.30 ಕ್ಕೆ ನಗರದ ಹೈಸ್ಕೂಲ್ ಮೈದಾನದಿಂದ ಪ್ರಮುಖ ರಸ್ತೆಗಳಲ್ಲಿ ಆಟೋ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅ 4 ರಂದು ಬೆಳಗ್ಗೆ 10 ಕ್ಕೆ ನಗರದೇವತೆ ದುರ್ಗಾಂಭಿಕಾ ದೇವಸ್ಥಾನದಿಂದ ಸಮಿತಿಯ ನೇತೃತ್ವದಲ್ಲಿ ದುರ್ಗಾದೌಡ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
41ನೇ ವರ್ಷದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಹಿನ್ನೆಲೆಯಲ್ಲಿ ಅ.5 ನಗರದ ಶ್ರೀ ವೆಂಕಟೇಶ್ವರ ವೃತ್ತದಿಂದ ಬೆಳಗ್ಗೆ 11-30ಕ್ಕೆ ಬೃಹತ್ ಶೋಭಾಯಾತ್ರೆ ಆರಂಭಗೊಳ್ಳಲಿದೆ ಶ್ರೀ ಬಾಲಯೋಗಿ ಜಗದೀಶ್ವರ ಮಹಾಸ್ವಾಮೀಜಿ, ಶ್ರೀ ಅಭಿನವ ಹಾಲ ಸ್ವಾಮೀಜಿ, ಶ್ರೀ ಶಿವಾನಂದ ಮಹಾಸ್ವಾಮಿಜಿ ನೇತೃತ್ವದಲ್ಲಿ ಶೋಭಾಯಾತ್ರೆ ಉದ್ಘಾಟನೆಗೊಳ್ಳಲಿದೆ, ನಗರದ ಪ್ರಮುಖ ಗಣ್ಯರು ಕಾರ್ಯಕ್ರಮದ ಭಾಗವಹಿಸಲಿದ್ದಾರೆಂದರು.
ದಾವಣಗೆರೆ: ಪಾಲಿಕೆಯಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ವಾಗ್ದಾಳಿ
ನಾಳೆ ಸಂಜೆ 5 ಕ್ಕೆ ಧಾತ್ರಿ ಕಲಾಶಾಲೆ ಅವರಿಂದ ದಾಂಡಿಯಾ ಹಾಗೂ ಕೋಲಾಟ,ಅ 2 ಕ್ಕೆ ಶ್ರೀ ನಿಮಿಷಾಂಬ ಮಹಿಳಾ ಸಂಘದಿಂದ ನೃತ್ಯರೂಪಕ ನಡೆಯಲಿದೆ.ಅ.3 ರಂದು ವೀರಶೈವ ನಗರ ಘಟಕದಿಂದ ನವದುರ್ಗೆಯರಿಗೆ ಕುಂಬಾರತಿಯರೂಪಕ,ಅ 4 ರಂದು ವಿವಿಧತೆಯಲ್ಲಿ ಏಕತೆಯ ಪೌರಾಣಿಕ ವೇಷಭೂಷಣ ಸ್ಪರ್ಧೆ ಜರುಗಲಿದೆ.ಈ ಎಲ್ಲಾ ಕಾರ್ಯಕ್ರಮ ಸಂಜೆ 5 ಕ್ಕೆ ನಡೆಯಲಿದೆ ಎಂದರು.ಅ.5 ರಂದು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಅಂದು ಸಂಜೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಂಬುಛೇದನ ಮಾಡಲಿದ್ದಾರೆ ನಂತರ ಬನ್ನಿ ಮುಡಿಯಲಾಗುವುದು.ಇದೇ ವೇಳೆ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ್ಯ ಸಮಿತಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಉಪನ್ಯಾಸ ನೀಡಲಿದ್ದಾರೆ ಎಂದರು.
ಈ ಬಾರಿ ಶೋಭಾಯಾತ್ರೆಯ ವಿಶೇಷತೆಗಳು
ಶೋಭಾಯಾತ್ರೆಯಲ್ಲಿ ಅನೇಕ ತಂಡಗಳು, ಸಮಾಳ, ನಂದಿಕೋಲು, ವೀರಗಾಸೆ, ಕೊಂಬು ಕಹಳೆ, ಡೊಳ್ಳು ಇತ್ಯಾದಿ ಅನೇಕ ವಿಶೇಷವಾಗಿ ಸಾಂಪ್ರದಾಯಕ ವಾದ್ಯಗಳು,ಸ್ಥಬ್ದಚಿತ್ರಗಳು,ಕೋಲಾಟ ಇತ್ಯಾದಿಗಳೊಂದಿಗೆ ವೆಂಕಟೇಶ್ವರ ವೃತ್ತದಿಂದ ಮೆರವಣಿಗೆ ಹೊರಟು ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಬೀರಲಿಂಗೇಶ್ವರ ಮೈದಾನಕ್ಕೆ ಬಂದು ಸೇರಲಾಗುವುದು.ಸಂಜೆ ಅಂಬುಛೇದನ ನಂತರ ಸಾರ್ವಜನಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.