ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಿರಾಳಕೊಪ್ಪ ಮತ್ತು ಶಿಕಾರಿಪುರ ಪಟ್ಟಣಗಳನ್ನು ಎರಡು ಕಣ್ಣುಗಳಂತೆ ಸಮನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿರಾಳಕೊಪ್ಪ (ಫೆ.08): ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಶಿರಾಳಕೊಪ್ಪ ಮತ್ತು ಶಿಕಾರಿಪುರ ಪಟ್ಟಣಗಳನ್ನು ಎರಡು ಕಣ್ಣುಗಳಂತೆ ಸಮನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದ ಕಾಮಗಾರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಪುರಸಭೆ ಆಗಿ ಮೇಲ್ದರ್ಜೆಗೇರಿಸುವ ವೇಳೆ ಕೆಲವು ಕಾಣದ ಕೈಗಳು ಈ ಕ್ರಮವನ್ನು ವಿರೋಧಿಸಿದ್ದರು.
ಅನಂತರ ಪುರಸಭೆಗೆ ಚುನಾವಣೆ ನಡೆದಾಗ ಬಿಜೆಪಿಗೆ ಅಧಿಕಾರ ನಡೆಸಲು ಬೆಂಬಲ ಇರಲಿಲ್ಲ. ಟಿ.ರಾಜು ಮತ್ತು ಅವರ ಬೆಂಬಲಿಗರಿಂದ ಬಿಜೆಪಿ ಅಧಿಕಾರ ನಡೆಸುತ್ತಿದೆ. ಅನಂತರ ಪುರಸಭೆಗೆ ಸಾಕಷ್ಟುಅನುದಾನ ಹರಿದುಬಂದು ಸಮರ್ಪಕ ಬಳಿಕೆಯಿಂದ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಪಟ್ಟಣದಲ್ಲಿ ರಸ್ತೆ, ಚರಂಡಿ, ಶಾಲಾ- ಕಾಲೇಜುಗಳ ನೂತನ ಕಟ್ಟಡ ಸೇರಿದಂತೆ ಸೊರಬ ರಸ್ತೆಯನ್ನು 4 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ.
ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲಿಕ್ಕೆ: ಸಚಿವ ಎಂಟಿಬಿ ನಾಗರಾಜ್
ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 195 ಕೋಟಿ ಚುಚ್ಚುಮದ್ದುಗಳನ್ನು ಜನತೆಗೆ ಉಚಿತವಾಗಿ ನೀಡಿದರು. ಪಡಿತರ ವ್ಯವಸ್ಥೆ ಈ ಹಿಂದಿನಂತೆ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ವಿತರರಿಸುವ ಯೋಜನೆ ಪ್ರಾರಂಭವಾಗಲಿದೆ ಎಂದರು. ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಶಿರಾಳಕೊಪ್ಪ ಪಟ್ಟಣಕ್ಕೆ ಇಷ್ಟೊಂದು ಕೆಲಸ, ಕಾರ್ಯ ಮಾಡಿಕೊಟ್ಟರೂ ಇಲ್ಲಿ ನಮಗೆ ಬಹುಮತ ದೊರಕಿಸಿಕೊಟ್ಟಿಲ್ಲ. ನಮಗೆ ಹಾರ, ಶಾಲು ಹಾಕಿ ಸನ್ಮಾನಿಸುವ ಬದಲು ನಮ್ಮನ್ನು ಬೆಂಬಲಿಸಿ. ನಿಮ್ಮ ಸೇವೆಯನ್ನು ಮತ್ತಷ್ಟುಹೆಚ್ಚಿನ ರೀತಿಯಲ್ಲಿ ಮಾಡಲು ಸಿದ್ಧ ಎಂದರು.
ಪುರಸಭೆ ಸದಸ್ಯ ಟಿ.ರಾಜು ಮಾತನಾಡಿ, ಪಟ್ಟಣದ ವಿವಿಧ ಅಭಿವೃದ್ಧಿಗೆ ಸಂಸದರು .30 ಕೋಟಿ ಅನುದಾನ ನೀಡಿ, ಸಹಕಾರ ನೀಡಿದ್ದಾರೆ. ಇದಲ್ಲದೇ ಸಮುದಾಯ ಭವನ, ರಸ್ತೆಗಳು, ವಾಣಿಜ್ಯ ಸಂಕೀರ್ಣ, ಶಾಲೆ -ಕಾಲೇಜುಗಳು, ಇಂದಿರಾ ಗಾಂಧಿ ಕ್ರೀಡಾಂಗಣ ಸೇರಿದಂತೆ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ. ಪಟ್ಟಣದಲ್ಲಿ ಬೀದಿ ವ್ಯಾಪಾರಿಗಳಿಗೆ ಫುಡ್ ಕೋರ್ಚ್, ಹೂವು ಹಾಗೂ ಹಣ್ಣು ವ್ಯಾಪಾರಿಗಳಿಗೆ ಶಾಶ್ವತ ಸ್ಥಳ ಕಲ್ಪಿಸಿ, ಹಲವಾರು ಜನೋಪಯೋಗಿ ಕೆಲಸ ಮಾಡಿ, ಉಪಕಾರ ಮಾಡಿರುವ ಅವರಿಗೆ ಕಾಲ ಬಂದಾಗ ಋುಣ ತೀರಿಸಿ ಎಂದು ಕರೆ ನೀಡಿದರು. ಹೂವು, ಹಣ್ಣು ಮತ್ತು ಬೀದಿಬದಿ ವ್ಯಾಪಾರಿಗಳು ಹಾಗೂ ಪುರಸಭೆ ವತಿಯಿಂದ ಸಂಸದ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ: ಸಂಸದ ಮುನಿಸ್ವಾಮಿ
ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ.ಬಳಿಗಾರ್, ಅಗಡಿ ಅಶೋಕ್, ಕೆಎಸ್‌ಡಿಎಲ್ ನಿರ್ದೇಶಕಿ ನಿವೇದಿತಾ ರಾಜು, ಪುರಸಭೆ ಅಧ್ಯಕ್ಷೆ ಮಂಜುಳಾ ಟಿ.ರಾಜು, ಉಪಾಧ್ಯಕ್ಷೆ ವಿಜಯಲಕ್ಷ್ಮೇ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಸುರಹೊನ್ನೆ, ಸದಸ್ಯರಾದ ರಾಜೇಶ್ವರಿ ವಸಂತಕುಮಾರ್, ಲಲಿತಮ್ಮ, ಮಕ್ಬುಲ್ ಸಾಬ್, ರವಿ ಶಾನುಭೋಗ್, ತಡಗಣಿ ಮಂಜಣ್ಣ, ಮಂಚಿ ಶಿವಾನಂದ, ಇಂದುಧರ ಟಿ., ಪವನ್ ಕಲಾಲ್ ಹಲವಾರು ಪ್ರಮುಖರು ಹಾಜರಿದ್ದರು. ಶಿರಾಳಕೊಪ್ಪಕ್ಕೆ ಬರುವ ಮೊದಲು ಪುರಸಭೆ ವ್ಯಾಪ್ತಿಯ ತಡಗಣಿ ವ್ರತ್ತದ ಬಳಿ ಸಂಸದ ರಾಘವೇಂದ್ರ ಅವರು ಅಂಬಿಗರ ಚೌಡಯ್ಯ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.