ಅಯೋಧ್ಯೆಯಲ್ಲಿ ನಿರ್ಮಾಣವಾಗ್ತಿರೋ ಪ್ರಭು ಶ್ರೀರಾಮಚಂದ್ರನ ದೇವಾಲಯ ನಿರ್ಮಾಣಕ್ಕಾಗಿ ಈಗಾಗಲೇ ದೇಶಾದ್ಯಂತ ದೇಣಿಗೆ ಸಂಗ್ರವಾಗಿದೆ. ಸದ್ಯ ಶ್ರೀರಾಮ ಚಂದ್ರನ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಕರ್ನಾಟಕದಿಂದ ಬಹು ಅಪರೂಪದ ಮೂರ್ತಿ ಒಂದನ್ನ ನೀಡಲಾಗ್ತಿದೆ.
ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕೋಡಿ
ಚಿಕ್ಕೋಡಿ (ಫೆ.08): ಅಯೋಧ್ಯೆಯಲ್ಲಿ ನಿರ್ಮಾಣವಾಗ್ತಿರೋ ಪ್ರಭು ಶ್ರೀರಾಮಚಂದ್ರನ ದೇವಾಲಯ ನಿರ್ಮಾಣಕ್ಕಾಗಿ ಈಗಾಗಲೇ ದೇಶಾದ್ಯಂತ ದೇಣಿಗೆ ಸಂಗ್ರವಾಗಿದೆ. ಸದ್ಯ ಶ್ರೀರಾಮ ಚಂದ್ರನ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಕರ್ನಾಟಕದಿಂದ ಬಹು ಅಪರೂಪದ ಮೂರ್ತಿ ಒಂದನ್ನ ನೀಡಲಾಗ್ತಿದೆ. ಅದರೊಂದಿಗೆ ಪುಣ್ಯ ಜಲವನ್ನೂ ಸಹ ಕಳಿಸಲಾಗ್ತಿದೆ. ಅಷ್ಟಕ್ಕೂ ಏನಿದು ವಿಶೇಷ ಅಂತೀರಾ ಈ ಸುದ್ದಿ ನೋಡಿ. ತಲೆಯ ಮೇಲೆ ಕುಂಭ ಗೊತ್ತು ಸಾಗುತ್ತಿರುವ ಮಹಿಳೆಯರು, ವಿವಿಧ ಊರಿನಿಂದ ಪುಣ್ಯ ಜಲ ತಂದು ಸಂಗ್ರಹ ಮಾಡ್ತಿರೋ ಭಕ್ತರು.
ಎಲ್ಲರ ಬಾಯಲ್ಲೂ ಸಹ ಜೈ ಶ್ರೀರಾಮ ಘೋಷಣೆ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿಯಲ್ಲಿ. ವಿಶ್ವಹಿಂದೂ ಪರಿಷತ್ ಬಜರಂಗದಳದಿಂದ ತೋರಣಹಳ್ಳಿಯಲ್ಲಿ ಚಿಕ್ಕೋಡಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಬೈಠಕ್ ನಡೆಸಲಾಯ್ತು. ಬೈಠಕ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ರಾಷ್ಟ್ರೀಯ ಸಹ ಮಂತ್ರಿ ಗೋಪಾಲ್‌ಜೀ ಹಾಗೂ ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಚಿಕ್ಕೋಡಿ ವಿಭಾಗದ ಹಳ್ಳಿಗಳಲ್ಲಿನ ಹನುಮ ದೇವರಿಗೆ ಜಲಾಭಿಷೇಕ ಮಾಡಿ ಆ ಪುಣ್ಯ ಜಲವನ್ನು ತೋರಣಹಳ್ಳಿಯ ಹನುಮ ದೇವಸ್ಥಾನದಲ್ಲಿ ಸಂಗ್ರಹಿಸಲಾಯ್ತು.
ಪಿಎಫ್ಐ ಸಂಘಟನೆಯಿಂದ ಜೀವ ಬೆದರಿಕೆ: ಮೇಲುಕೋಟೆ ಯತಿರಾಜ ಜೀಯರ್‌ಗೆ ವೈ ಮಾದರಿ ಭದ್ರತೆ
ಬಳಿಕ ಆ ಪುಣ್ಯ ಜಲವನ್ನು ಅಯೋಧ್ಯೆಯಲ್ಲಿರುವ ಶ್ರೀರಾಮಚಂದ್ರನಿಗೆ ಅಭಿಷೇಕ ಮಾಡಲು ಬಳಸಲಾಗುತ್ತೆ ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಹ ಮಂತ್ರಿ ಗೋಪಾಲ್ ಜೀ ಹೇಳಿದ್ದಾರೆ. ಇನ್ನು ಬೈಠಕ್‌ನಲ್ಲಿ ಗೋಪಾಲ್ ಜೀ ಅವರಿಗೆ ಚಿಕ್ಕೋಡಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಹಾಗೂ ತೋರಣಹಳ್ಳಿ ಗ್ರಾಮಸ್ಥರಿಂದ ಬೆಳ್ಳಿಯ ವಾಲ್ಮೀಕಿ ಮೂರ್ತಿಯನ್ನು ನೀಡಲಾಯಿತು. ಇದನ್ನ ಅಯೋದ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಪ್ರಭು ಶ್ರೀರಾಮಚಂದ್ರನ ದೇವಾಲಯದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎನ್ನುವುದು ಹೆಮ್ಮೆಯ ಸಂಗತಿಯಾದರೆ ಇನ್ನು ಬೈಠಕ್ ಗೆ ಕೇವಲ ಕಾರ್ಯಕರ್ತರು ಭಾಗಿಯಾಗದೆ ಜನಪ್ರತಿನಿಧಿಗಳು ಸಹ ಭಾಗವಹಿಸಿದ್ಧರು.
ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ: ಸಂಸದ ಮುನಿಸ್ವಾಮಿ
ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ, ಮಹೇಶ ಕುಮಟಳ್ಳಿ, ಮಾಜಿ ಸಂಸದ ರಮೇಶ್ ಕತ್ತಿ, ಅಂಬಿರಾವ್ ಪಾಟೀಲ್ ಸೇರಿದಂತೆ ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗಿದ್ದರು ಇನ್ನು ಕಾರ್ಯಕ್ರಮ ಹಾಗೂ ಪುಣ್ಯ ಜಲ, ವಾಲ್ಮೀಕಿ ಮೂರ್ತಿ ಅಯೋದ್ಯೆಗೆ ಹೋಗುತ್ತಿರುವ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಒಟ್ಟಿನಲ್ಲಿ ರಾಮ ಎಲ್ಲರಿಗೂ ಆದರ್ಶವಾದರೆ ರಾಮನಿಗೆ ಸ್ಪೂರ್ತಿಯಾಗಿರುವ ಮಹಾಕವಿ ಶ್ರೀ ವಾಲ್ಮೀಕಿಯವರ ಮೂರ್ತಿ ಕರ್ನಾಟಕದಿಂದ ಅಯೋಧ್ಯೆಗೆ ಹೊರಟಿರುವುದು ಕನ್ನಡಿಗರಿಗೂ ಸಹ ಹೆಮ್ಮೆಯ ಸಂಗತಿ.