ಹೆದ್ದಾರಿ ಪ್ರಾಧಿಕಾರ ಎಡವಟ್ಟು: ಕಡೂರಿನಿಂದ ಬೆಂಗಳೂರಿಗೆ 992 ಕಿ.ಮೀ! ಬೋರ್ಡ್ ನೋಡಿ ವಾಹನ ಸವಾರರು ಗಾಬರಿ!

By Ravi JanekalFirst Published Apr 4, 2024, 8:02 PM IST
Highlights

ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ನಡುವೆ ಟೋಲ್ ಗಳ ಹಾವಳಿಯೂ ವಿಪರೀತಗೊಂಡಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಕಿರುವ ನಾಮಫಲಕ ಗೊಂದಲ ಹುಟ್ಟುಹಾಕಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು-ತರೀಕೆರೆ ಮಧ್ಯೆ ಹಾಕಿರುವ ಬೋರ್ಡ್ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
 
ಚಿಕ್ಕಮಗಳೂರು (ಏ.4) : ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ನಡುವೆ ಟೋಲ್ ಗಳ ಹಾವಳಿಯೂ ವಿಪರೀತಗೊಂಡಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಕಿರುವ ನಾಮಫಲಕ ಗೊಂದಲ ಹುಟ್ಟುಹಾಕಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು-ತರೀಕೆರೆ ಮಧ್ಯೆ ಹಾಕಿರುವ ಬೋರ್ಡ್ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. 

ಪ್ರಯಾಣಿಸುವ ಪ್ರಯಾಣಿಕರು ಗಲಿ-ಬಿಲಿ 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಎಡವಟ್ಟಿನಿಂದ ರಾಷ್ಟ್ರೀಯ ಹೆದ್ದಾರಿ 206ರ ಬೆಂಗಳೂರು-ಹೊನ್ನಾವರ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಗಲಿ-ಬಿಲಿಗೊಂಡಿದ್ದಾರೆ. ಕಡೂರಿನಿಂದ ಬೆಂಗಳೂರಿಗೆ 992 ಕಿ.ಮೀ. ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾಮಫಲಕ ಹಾಕಿರೋದ ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ ಬೆಂಗಳೂರಿಗೆ 992 ಕಿ.ಮೀ. ಎಂದು ಬೋರ್ಡ್ ಹಾಕಿದ್ದಾರೆ. ಕಡೂರಿನಿಂದ ದಾಬಸ್ ಪೇಟೆ 167 ಕಿ.ಮೀ, ಬೇಲೂರಿಗೆ 105 ಕಿ.ಮೀ. ಎಂದು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 

 

ಚಿಕ್ಕಮಗಳೂರು: ಬಿಸಿಲು ಝಳ, ಚುನಾವಣಾ ಕಾವು ಜನರು ಸುಸ್ತೋ ಸುಸ್ತು!

ಗೂಗಲ್ ಮ್ಯಾಪ್ ಹಾಕಿ ಬಂದವರು ಹೆದ್ದಾರಿ ಪ್ರಾಧಿಕಾರ ಬೋರ್ಡ್ ನೋಡಿ ಅಯ್ಯೋ ದೇವ್ರೆ ಎನ್ನುವಂತಾಗಿದೆ. ಕಡೂರಿನಿಂದ ಬೆಂಗಳೂರು 186 ಕಿ.ಮೀ. ಇದ್ದು 992 ಕಿ.ಮೀ ಎಂದು ನಮೂದು ಮಾಡಿದ್ದಾರೆ. 85 ಕಿ.ಮೀ. ದೂರದ ಹಾಸನ 65 ಕಿ.ಮೀ. ಎಂದು ತೋರಿಸಿದ್ದಾರೆ. ಬಹುತೇಕ ಊರುಗಳ ದೂರದ ಅಂತರದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೆ ಬೋರ್ಡ್ ನಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಹಾಕಿದ್ದಾರೆ. ಆದ್ರೆ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗ ಜಿಲ್ಲೆ ಶಂಕರಘಟ್ಟದಲ್ಲಿದೆ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರು ಕೂಡಲೇ ಇದನ್ನ  ಸರಿಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಆಗ್ರಹಿಸಿದ್ದಾರೆ.

click me!