ಬೆಂಗ್ಳೂರಲ್ಲಿ ಕಾಲರಾ ರೋಗ ಪತ್ತೆ?

By Kannadaprabha News  |  First Published Apr 4, 2024, 9:26 AM IST

ಮುನ್ನೆಚ್ಚರಿಕೆ ಕ್ರಮವಾಗಿ ಯುವತಿ ವಾಸ ಇರುವ ಪ್ರದೇಶದ ಸುಮಾರು 100 ಮನೆಗಳನ್ನು ಸರ್ವೇ ಮಾಡಲಾಗಿದೆ. ಕಾಲರಾ ರೋಗದ ಲಕ್ಷಣ ಇರುವ ರೋಗಿಗಳು ಪತ್ತೆಯಾಗಿಲ್ಲ: ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ 


ಬೆಂಗಳೂರು(ಏ.04):  ಬೆಂಗಳೂರಿನ ಪಿಜಿಯಲ್ಲಿ ಇರುವ ಖಾಸಗಿ ಕಂಪನಿಯ ಉದ್ಯೋಗಿ ಯುವತಿಯಲ್ಲಿ ಕಾಲರಾ ರೋಗದ ಶಂಕೆ ವ್ಯಕ್ತವಾಗಿದೆ.

ನಗರದ ಮಲ್ಲೇಶ್ವರದ ಗಾಂಧಿ ಗ್ರಾಮ ಪ್ರದೇಶದ ಪಿಜಿಯಲ್ಲಿ ವಾಸವಿದ್ದು, ಬೆಳ್ಳಂದೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 27 ವರ್ಷ ಯುವತಿಯಲ್ಲಿ ಕಾಲರಾ ರೋಗ ಶಂಕೆ ವ್ಯಕ್ತವಾಗಿದೆ. ಯುವತಿಯು ಮಾ.30 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಏ.3 ರಂದು ಗುಣಮುಖರಾಗಿ ಮನೆ ತೆರಳಿದ್ದಾರೆ. ಮತ್ತೊಂದು ಬಗೆಯ ಪರೀಕ್ಷೆಗೆ ಯುವತಿಯ ಮಲದ ಮಾದರಿಯನ್ನು ಕಳುಹಿಸಿಕೊಡಲಾಗಿದೆ. ಈ ವರದಿ ಬಂದ ಬಳಿಕ ದೃಢಪಡಿಸಲಾಗುವುದು ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Latest Videos

undefined

ಚಿತ್ರದುರ್ಗ ಕಲುಷಿತ ನೀರಲ್ಲಿ ಕಾಲರಾ ಅಂಶ: ಲ್ಯಾಬ್‌ ವರದಿ

ಮುನ್ನೆಚ್ಚರಿಕೆ ಕ್ರಮವಾಗಿ ಯುವತಿ ವಾಸ ಇರುವ ಪ್ರದೇಶದ ಸುಮಾರು 100 ಮನೆಗಳನ್ನು ಸರ್ವೇ ಮಾಡಲಾಗಿದೆ. ಕಾಲರಾ ರೋಗದ ಲಕ್ಷಣ ಇರುವ ರೋಗಿಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

click me!