ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ರಕ್ಷಣಾ ಸಿಬ್ಬಂದಿ ಮಗುವನ್ನು ಎತ್ತಿಕೊಮಡು ಬಂದು ಚಿಕಿತ್ಸೆಗೆ ಕಳಿಸಿದ್ದಾರೆ.
ವಿಜಯಪುರ (ಏ.4): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ರಕ್ಷಣಾ ಸಿಬ್ಬಂದಿ ಮಗುವನ್ನು ಎತ್ತಿಕೊಂಡು ಬಂದು ಚಿಕಿತ್ಸೆಗೆ ಕಳಿಸಿದ್ದಾರೆ.
ಮಗುವನ್ನು ಮಾಡುವ ಕಾರ್ಯ ನಿನ್ನೆ ಸಂಜೆಯಿಂದ ಸತತವಾಗಿ 19 ಗಂಟೆಗಳ ಕಾಲ ಕರ್ನಾಟಕ ಎಸ್‌ಡಿಆರ್‌ಎಫ್ ಹಾಗೂ ಕೇಂದ್ರದ ಎನ್‌ಡಿಆರ್‌ಎಫ್ ತಂಡದಿಂದ ಕಾರ್ಯಾಚರಣೆ ಮಾಡಲಾಗಿತ್ತು. ಈ ವೇಳೆ ಕ್ಷಣ ಕ್ಷಣಕ್ಕೂ ಮಗುವಿನ ರಕ್ಷಣೆಗೆ ಉಂಟಾಗುತ್ತಿದ್ದ ಎಲ್ಲ ಅವಘಡಗಳನ್ನು ಮೀರಿ ಮಗುವಿನ ರಕ್ಷಣೆ ಮಾಡಲಾಗಿದೆ. ಇನ್ನು ಮಗು ಬದುಕಿ ಬರಲಿ ಎಂದು ವಿಜಯಪುರ ಮಾತ್ರವಲ್ಲದೇ ಇಡೀ ಕರುನಾಡಿನ ಜನತೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದರು. ಇದರೆಲ್ಲರ ಫಲದಿಂದ ಪುಟ್ಟ ಮಗು ಬದುಕಿ ಬಂದಿದೆ.
ಇನ್ನು ರಕ್ಷಣಾ ತಂಡದಿಂದ ಮಗುವನ್ನು ರಕ್ಷಣೆ ಮಾಡಿ ಹೊರೆ ತಂದ ನಂತರ ಅಲ್ಲಿ ನೆರೆದಿದ್ದ ಸಾವಿರಾರು ಜನರು ಸಿಳ್ಳೆ ಕೇಕೆಯನ್ನು ಹಾಕಿ ವಿಜಯೋತ್ಸವ ಹಾಗೂ ಸಂಸತವನ್ನು ಹಂಚಿಕೊಂಡಿದ್ದಾರೆ. ಇಡೀ ರಕ್ಷಣಾ ಕಾರ್ಯಾಚರಣೆ ತಂಡಕ್ಕೆ, ಪೊಲೀಸರಿಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಮಗುವನ್ನು ರಕ್ಷಣೆ ಮಾಡಿದ ನಂತರ ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಈವರೆಗಿನ ಕೊಳವೆಬಾವಿ ದುರಂತದಲ್ಲಿ ವಿಜಯಪುರವೇ ಟಾಪ್, ಬದುಕಿ ಬಂದಿದ್ದು ಒಬ್ಬಾಕೆ ಮಾತ್ರ!
ಮಗುವಿನ ಆರೋಗ್ಯ ಸ್ಥಿರ: ಯಾವುದೇ ಒಂದು ಮಗುವನ್ನು ಕೇವಲ 1 ಗಂಟೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದರೆ ಮಗು ಅಳುತ್ತಲೇ ಪ್ರಜ್ಞೆ ತಪ್ಪಿ ಬೀಳುತ್ತದೆ ಎಂಬ ಆತಂಕ ಇರುತ್ತದೆ. ಆದರೆ, ಬೋರ್‌ವೆಲ್‌ಗೆ ಬಿದ್ದ ಮಗು ಸಾತ್ವಿಕ್‌ನನ್ನು ರಕ್ಷಣೆ ಮಾಡಿ ಸ್ಟ್ರೆಚರ್ ಮೇಲೆ ಹೊರಗೆ ತರುವ ವೇಳೆ ಮಗು ಆರೋಗ್ಯವಾಗಿರುವುದು ಕಂಡುಬಂದಿದೆ. ಸ್ಟ್ರೆಚರ್ ಮೇಲೆ ಮಗುವನ್ನು ತೆಗೆದುಕೊಂಡು ಬರುವಾಗ ತಾನು ಮತ್ತೆಲ್ಲಿ ಬಿದ್ದುಬಿಡುತ್ತೇನೋ ಎಂಬಂತೆ ಸ್ಟ್ರೆಷರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಅಮ್ಮಾ ಎಂದು ಅಳುವ ದೃಶ್ಯವನ್ನು ಕಣ್ಣಾರೆ ಕಂಡಿದ್ದೇವೆ. ಇನ್ನು ವಿಜಯಪುರದ ಈ ಮಗು ಸಾತ್ವಿಕ್ ಗಟ್ಟಿ ಜೀವವೆಂದೇ ಹೇಳಬಹುದು. 19 ಗಂಟೆಗಳ ಕಾಲ ಮಗು ಬೋರ್‌ವೆಲ್‌ನಲ್ಲಿ ಸಿಲುಕಿದ್ದರೂ ಹೆಚ್ಚು ಆತಂಕಕ್ಕೆ ಒಳಗಾಗೇ ಮಗುವನ್ನು ಕರೆದಾಗಲೆಲ್ಲಾ ಆ.. ಎನ್ನುತ್ತಾ ಹಾಗೂ ಅಳುತ್ತಾ ಪ್ರತಿಕ್ರಿಯೆ ನೀಡುತ್ತಿತ್ತು.
ಕೊಳವೆಬಾವಿಯಲ್ಲಿ ಸಿಲುಕಿರುವ ಮಗು ರಕ್ಷಣೆಗೆ ಕೇವಲ ಅರ್ಧ ಅಡಿ ಬಾಕಿ, ಕಲ್ಲು ಬಂಡೆಗಳೇ ಅಡ್ಡಿ!
ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. 2000ನೇ ಇಸವಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ , ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ಪ್ರಕರಣಗಳು ನಡೆದಿದೆ. ಆದರೆ ಬದುಕಿ ಬಂದಿದ್ದು ಮಾತ್ರ ಕೇವಲ ಒಂದು ಘಟನೆ, 2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲೂ ಕೊಳವೆಬಾವಿ ದುರಂತದಲ್ಲಿ 20 ವರ್ಷದ ಕಲ್ಲವ್ವ ಎಂಬುವವರು ಬದುಕಿ ಬಂದಿದ್ದರು. ಆಗ ಅವಳಿಗೆ ಬದುಕಿ ಬಂದ ಫ್ರಿನ್ಸ್ ಅಂತ ಹೆಸರು ಕೊಡಲಾಗಿತ್ತು. ಇದಾದ ಬಳಿಕ ಈಗ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ಬದುಕಿ ಬಂದಿದ್ದಾನೆ.