6ನೇ ದಿನ ದಾಖಲೆಯ 9 ಕೋಟಿ ಟ್ರಾಫಿಕ್‌ ದಂಡ; ಈವರೆಗೆ 18 ಲಕ್ಷ ಪ್ರಕರಣ ಇತ್ಯರ್ಥ

By Kannadaprabha News  |  First Published Feb 9, 2023, 9:10 AM IST

ಸಂಚಾರ ಉಲ್ಲಂಘನೆ ಸಂಬಂಧ ಹಳೇ ಪ್ರಕರಣಗಳಲ್ಲಿ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಿ ಸಾರಿಗೆ ಇಲಾಖೆಗೆ ಆದೇಶಿಸಿತ್ತು. ಇದಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಕನ್ನಡಪ್ರಭ ವಾರ್ತೆ ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇಕಡ 50ರಷ್ಟುರಿಯಾಯಿತಿ ಅವಧಿ ಮುಕ್ತಾಯಕ್ಕೆ ಮೂರು ದಿನಗಳು ಮಾತ್ರ ಬಾಕಿ ಇದ್ದು, ಬುಧವಾರ .9.06 ಕೋಟಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಆರು ದಿನಗಳಲ್ಲಿ 18 ಲಕ್ಷ ಪ್ರಕರಣಗಳು ಇತ್ಯರ್ಥವಾಗಿ 51 ಕೋಟಿ ದಂಡ ಸಂಗ್ರಹವಾಗಿದೆ.
ಸಂಚಾರ ಉಲ್ಲಂಘನೆ ಸಂಬಂಧ ಹಳೇ ಪ್ರಕರಣಗಳಲ್ಲಿ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಿ ಸಾರಿಗೆ ಇಲಾಖೆಗೆ ಆದೇಶಿಸಿತ್ತು. ಇದಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆ.3ರಂದು 2.24 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡು .7 ಕೋಟಿ ದಂಡ ಸಂಗ್ರಹವಾಗಿತ್ತು. ಇದಾದ ಬಳಿಕ ದಂಡ ಸಂಗ್ರಹ ಏರುಗತಿಯಲ್ಲೇ ಸಾಗಿದ್ದು, ಬುಧವಾರ ಕೂಡ 3.23 ಲಕ್ಷ ಪ್ರಕರಣಗಳ ಸಂಬಂಧ ಸರ್ಕಾರದ ಖಜಾನೆಗೆ .9.06 ಕೋಟಿ ಪಾವತಿಯಾಗಿದೆ.

ವಿಸ್ತರಣೆ ಪ್ರಸ್ತಾಪ ಇಲ್ಲ
ದಂಡ ವಿನಾಯಿತಿ ಅವಧಿ ವಿಸ್ತರಣೆ ಸಂಬಂಧ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ವಿಶೇಷ ಆಯುಕ್ತ (ಸಂಚಾರ) ಡಾ ಎಂ.ಎ.ಸಲೀಂ ತಿಳಿಸಿದ್ದಾರೆ.
ಸಂಚಾರ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಫೆ.3ರಿಂದ 11 ರವರೆಗೆ ಶೇ.50ರಷ್ಟುರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದೆ. ನಿರೀಕ್ಷೆಗೂ ಮೀರಿ ದಂಡ ಸಂಗ್ರಹವಾಗಿದೆ. ಆದರೆ ರಿಯಾಯಿತಿ ಅವಧಿ ಮುಕ್ತಾಯಕ್ಕೆ ಮೂರು ದಿನಗಳು ಬಾಕಿ ಇವೆ. ಅಷ್ಟರಲ್ಲಿ ಉಳಿಕೆ ಪ್ರಕರಣಗಳಲ್ಲೂ ಜನರು ದಂಡ ಪಾವತಿಸಬಹುದು. ಆದರೆ ರಿಯಾಯಿತಿ ಅವಧಿ ವಿಸ್ತಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಸಲೀಂ ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ನಕಲಿ ನಂಬರ್‌ ಪ್ಲೇಟ್‌ ಗೋಲ್ಮಾಲ್: ಟ್ರಾಫಿಕ್‌ ದಂಡ ಪಾವತಿಗೆ ಬಂದವರಿಗೆ ಶಾಕ್

ದಂಡದ ಮೊತ್ತ ಸಂಗ್ರಹ
ದಿನ ಪ್ರಕರಣ ಒಟ್ಟು ದಂಡ (ಕೋಟಿ .)
ಫೆ.3 2,24,778 7,00,41,121
ಫೆ.4 3,09,944 9,00,28,620
ಫೆ.5 2,87,826 7,49,94,870
ಫೆ.6 3,34,760 9,57,12,420
ಫೆ.7 3,45,123 9,70,68,700
ಫೆ.8 3,23,629 9,06,94,800
ಒಟ್ಟು 18,26,060 51,85,40,531

ಇದನ್ನೂ ಓದಿ: ಶೇ.50ರಷ್ಟು ರಿಯಾಯಿತಿ: ಬೆಂಗಳೂರಿನಲ್ಲಿ 2ನೇ ದಿನ 6.8 ಕೋಟಿ ಟ್ರಾಫಿಕ್‌ ದಂಡ ಸಂಗ್ರಹ

click me!