ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವೈದ್ಯರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಗೆ ತೆಗೆದುಕೊಳ್ಳುತ್ತಿದ್ದ 6 ರಿಂದ 1 ವರ್ಷದ ಅವಧಿ ಕಡಿಮೆಯಾಗಲಿದ್ದು, ಮೂರ್ನಾಲ್ಕು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಮೈಸೂರು(ಜ.24): ಮೂರ್ನಾಲ್ಕು ತಿಂಗಳೊಳಗೆ 3,500 ಮಂದಿ ವೈದ್ಯರನ್ನು ನೇರ ನೇಮಕಾತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ನಗರದ ಇಡಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಜಿಲ್ಲಾ ಆಸ್ಪತ್ರೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ್ದಾರೆ.
ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಸೇವೆ ಕಲ್ಪಿಸುವ ಮೂಲಕ ಜನ ಸೇವೆ ಆರಂಭಿಸಿದ ನನಗೆ ಮತ್ತೊಮ್ಮೆ ಅದೇ ಖಾತೆ ನೀಡಿರುವುದು ನನ್ನ ಪುಣ್ಯ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂಬ ಆರೋಪವಿದೆ. ಇದರ ಜೊತೆಗೆ ವೈದ್ಯರು ಮತ್ತು ನರ್ಸ್ ಕೊರತೆಯೂ ಇದೆ. ಆದರೆ ಇನ್ನು ಮುಂದೆ ಆತಂಕಪಡುವ ಅಗತ್ಯವಿಲ್ಲ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವೈದ್ಯರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಗೆ ತೆಗೆದುಕೊಳ್ಳುತ್ತಿದ್ದ 6 ರಿಂದ 1 ವರ್ಷದ ಅವಧಿ ಕಡಿಮೆಯಾಗಲಿದ್ದು, ಮೂರ್ನಾಲ್ಕು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ಮುಖಾಮುಖಿಯಾದ ಲಾರಿ, ಭೀಕರ ಅಪಘಾತದಲ್ಲಿ ಚಾಲಕ ಸಾವು
ಇಂದು ಉದ್ಘಾಟನೆಗೊಂಡ ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಪೀಠೋಪಕರಣ ಮತ್ತು ಇತರೆ ವೈದ್ಯಕೀಯ ಉಪಕರಣ ಖರೀದಿ ಪ್ರಕ್ರಿಯೆ ನಾಳೆಯಿಂದಲೇ ಆರಂಭಗೊಳ್ಳಲಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಗುತ್ತಿಗೆದಾರರ ಮೇಲೆ ಡಿಎಚ್‌ಒಗಳು ಗಮನ ನೀಡಬೇಕು. ಯಾರು ಗುತ್ತಿಗೆದಾರ ಒಂದಷ್ಟುಮಂದಿ ನೌಕರರನ್ನು ಪೂರೈಸುತ್ತಾನೆ. ಸರ್ಕಾರ ಅವರಿಗೆ 15 ಸಾವಿರ ವೇತನ ನೀಡಿದರೆ, ಗುತ್ತಿಗೆದಾರ ಕೇವಲ 6 ಅಥವಾ 7 ಸಾವಿರ ಮಾತ್ರ ನೀಡುತ್ತಾನೆ. ಇಂತಹ ಘಟನೆ ನಡೆಯಬಾರದು. ಇಂದು ಉದ್ಘಾಟನೆಗೊಂಡ ಸಂದರ್ಭದಲ್ಲಿ ಆಸ್ಪತ್ರೆ ಹೇಗಿದೆಯೋ ಅಂತೆಯೇ ಆಸ್ಪತ್ರೆ ಎಂದೆಂದಿಗೂ ಇರಬೇಕು. ಇದು ಡಿ ಗ್ರೂಪ್ ನೌಕರರ ಜವಾಬ್ದಾರಿ. ಅವರಿಗೆ ಅಗತ್ಯ ಸೌಲಭ್ಯದ ತೊಜೆಗೆ ಅವರ ವೇತನವೂ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಜಿಲ್ಲಾ ಆಸ್ಪತ್ರೆಗೆ ಜನರಿಕ್ ಔಷಧ ಕೇಂದ್ರ ಮತ್ತು ರಕ್ತನಿಧಿ ಕೇಂದ್ರ ತೆರೆಯುವ ಅಗತ್ಯವಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ನೀಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮತ್ತು ಸ್ಕಾ್ಯನಿಂಗ್ ಸೆಂಟರ್ ತೆರೆಯುವವರಿಗೆ ಡಿಎಚ್‌ಒಗಳು ಅವಕಾಶ ಕಲ್ಪಿಸಿಕೊಡಬೇಕು. ಅವರಿಗೆ ಎನ್‌ಆರ್‌ಎಚ್‌ಎಂ ಅಡಿ ಹಣ ನೀಡಲಾಗುವುದು. ಅವರು ಬಡವರಿಗೆ ಉಚಿತ ಸೇವೆ ಕಲ್ಪಿಸಿಕೊಡಬೇಕು. ಬಿಪಿಎಲ್ ಕುಟುಂಬಗಳಿಗೆ ರೆಫರಲ್ ತೆಗೆಯಬೇಕು ಎಂಬ ಕುರಿತು ತೀರ್ಮಾನಿಸಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ನಗರ ಪ್ರದೇಶದ ವೈದ್ಯರಿಗಿಂತ ಹೆಚ್ಚು ವೇತನ ನೀಡಲು ಉದ್ದೇಶಿಸಲಾಗಿದೆ ಎಂದರು.
ರೆಫರಲ್ ಪದ್ಧತಿ ರದ್ದುಪಡಿಸಿ
ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ ಸಿಂಹ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯನ್ನಿಟ್ಟುಕೊಂಡು ಮತ್ತು ಬಡವರಿಗಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದರು. ಇದು ಇಡೀ ದೇಶದಲ್ಲಿ ಅನುಷ್ಠಾನಗೊಂಡಿತು. ಆದರೆ ಕರ್ನಾಟಕದಲ್ಲಿ ಒಂದು ಸಮಸ್ಯೆ ತಲೆದೂರಿದೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ರಮೇಶ್‌ಕುಮಾರ್ ಅವರು, ತಮ್ಮ ವೇದನೆಯ ಮಾತಿನೊಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂದು ಸೇರಿಸಿದರು. ಈ ನಿಯಮದಂತೆ ನೇರವಾಗಿ ಯಾರೂ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದಾಖಲಾಗುವಂತಿಲ್ಲ. ಬದಲಿಗೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ರೆಫರ್ ಮಾಡಿದಾಗ ಮಾತ್ರ ಈ ಸೌಲಭ್ಯ ಖಾಸಗಿ ಆಸ್ಪತ್ರೆಯಲ್ಲಿ ದೊರೆಯಲು ಸಾಧ್ಯ. ಈ ನಿಯಮದಿಂದಾಗಿ ಬಡವರಿಗೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ರೆಫರಲ್ ಪದ್ಧತಿಯನ್ನು ತೆಗೆದುಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಕಾಲು ಕೆಜಿ ಬೇಳೆಯಲ್ಲಿ ತಿಂಗಳು ಪೂರ್ತಿ ಸಾಂಬಾರು, ಹುಳ ತುಂಬಿದ ಅಕ್ಕಿ, ಬೆಳೆಯಲ್ಲೇ ಅಡುಗೆ
ಬೇಕಿದ್ದರೆ ಆರೋಗ್ಯ ಕರ್ನಾಟಕ ಎಂಬ ಹೆಸರು ಇರಲಿ. ರೆಫರಲ್ ಕೇಂದ್ರ ತೆಗೆಯಿರಿ. ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ವಾಹನದ ಕ್ರಾಂತಿ ಮಾಡಿದ್ದು ಶ್ರೀರಾಮುಲು ಅವರು. ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜನರ ಮನೆ ಮಾತಾದರು. ಈಗ ಅವರು ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಾವು ಹಣ ನೀಡುತ್ತೇವೆ. ಅಗತ್ಯ ಸಲಕರಣೆ ಪೂರೈಸಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಲಿ. ಅಂತೆಯೇ ಮುಂದಿನ ದಿನಗಳಲ್ಲಿ ನಗರದ ಕೆ.ಆರ್. ಆಸ್ಪತ್ರೆಗೆ ಒಂದು ಕಾಯಕಲ್ಪ ನೀಡಬೇಕು. ಇಂದು ಉದ್ಘಾಟನೆಗೊಂಡ ಈ ಆಸ್ಪತ್ರೆ ಸುಂದರವಾಗಿ ನಿರ್ಮಾಣವಾಗಲು ಮಾಜಿ ಶಾಸಕ ವಾಸು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರಣ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಶಾಸಕರಾದ ಜಿ.ಟಿ. ದೇವೇಗೌಡ, ಎಲ್. ನಾಗೇಂದ್ರ, ಉಪ ಮೇಯರ್ ಸಿ. ಶ್ರೀಧರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಡಿ. ಮಾದೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ನಗರ ಪಾಲಿಕೆ ಸದಸ್ಯ ಶ್ರೀನಿವಾಸ್, ಆರೋಗ್ಯಇಲಾಖೆ ಮುಖ್ಯ ಎಂಜಿನಿಯರ್ ಎಂ. ಗಣೇಶ್ ಇದ್ದರು.