ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಒತ್ತು: ಸಚಿವ ಡಿ.ಸುಧಾಕರ್

Published : Nov 26, 2023, 10:03 PM IST
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಒತ್ತು: ಸಚಿವ ಡಿ.ಸುಧಾಕರ್

ಸಾರಾಂಶ

ಸಾವಿರಾರು ಕೋಟಿ ಹಣವನ್ನು ನಮ್ಮ ಸರ್ಕಾರ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು. ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ 2023-24 ನೇ ಸಾಲಿನ ಐ ಕ್ಯೂ ಎಸಿ ಕ್ರೀಡೆ,ಸಾಂಸ್ಕೃತಿಕ,ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಉದ್ಘಾಟನಾ ಸಮಾರoಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.  

ಹಿರಿಯೂರು (ನ.26): ಸಾವಿರಾರು ಕೋಟಿ ಹಣವನ್ನು ನಮ್ಮ ಸರ್ಕಾರ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು. ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ 2023-24 ನೇ ಸಾಲಿನ ಐ ಕ್ಯೂ ಎಸಿ ಕ್ರೀಡೆ,ಸಾಂಸ್ಕೃತಿಕ,ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಉದ್ಘಾಟನಾ ಸಮಾರoಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಬದುಕಿನ ಅತೀ ಮುಖ್ಯ ಘಟ್ಟವಾಗಿದ್ದು ಒಂದೊಂದು ನಿಮಿಷವು ಸಹ ಮೌಲ್ಯಯುತವಾಗಿರುತ್ತದೆ. ಬಹುದೊಡ್ಡ ಜವಾಬ್ದಾರಿಯಿರುವ ವಿದ್ಯಾರ್ಥಿ ಬದುಕಿನನ್ನು ವ್ಯರ್ಥ ಮಾಡಬೇಡಿ.ನಿಮ್ಮ ತೆರಿಗೆ ದುಡ್ಡನ್ನೇ ನಿಮ್ಮ ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತಿದ್ದು ಎಚ್ಚರಿಕೆಯಿಂದ ಓದುವ ಕಡೆ ಉತ್ತಮ ಅಂಕ ಗಳಿಸುವ ಕಡೆ ಒತ್ತುಕೊಡಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದೇ ಒಂದು ಹೆಜ್ಜೆ ಹಿಂದೆ ಬಿದ್ದರೂ ಮತ್ತೊಬ್ಬರು ಗುರಿ ಮುಟ್ಟುತ್ತಾರೆ. ಪರಿಶ್ರಮ ಮತ್ತು ಬದ್ಧತೆಯಿಟ್ಟುಕೊಂಡು ಒದಲು ತೊಡಗಿ.ನಿಮ್ಮ ಜ್ಞಾನಾರ್ಜನೆಯೇ ನಿಮ್ಮ ಶಕ್ತಿಯಾಗಿದ್ದು ಪುಸ್ತಕದ ಜೊತೆಗೆ ಹೊರ ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ ಎಂದರು.

ಕಾಂಗ್ರೆಸ್‌ಗೆ ಅಧಿಕಾರ, ವಿಪಕ್ಷಗಳಿಗೆ ಹೊಟ್ಟೆ ಉರಿ: ಸಚಿವ ಚಲುವರಾಯಸ್ವಾಮಿ

ಕನ್ನಡ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. 2008 ರಲ್ಲಿ ನಾನು ಶಾಸಕನಾದಾಗ ಕಾಲೇಜ್ ಇಷ್ಟು ಅಭಿವೃದ್ಧಿ ಹೊಂದಿರಲಿಲ್ಲ. ಆನಂತರ ಹಂತ ಹಂತವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬಿಎ, ಬಿಬಿಎಂನಲ್ಲಿ ಶೇ.90ಕ್ಕೂ ಹೆಚ್ಚು ಫಲಿತಾಂಶ ಬಂದಿರುವುದು ಸಂತೋಷ. ಆದರೆ ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕು. ಆ ದಿಸೆಯಲ್ಲಿ ಪ್ರಯತ್ನ ಪಡಿ ಎಂದರು. ನಿಮ್ಮ ಕಾಲೇಜಿಗೆ ಬೇಕಾದ ಸೌಲಭ್ಯಗಳನ್ನು ಹಂತ,ಹಂತವಾಗಿ ಈಡೇರಿಸಲಾಗುವುದು. ಉತ್ತಮ ಫಲಿತಾಂಶಕ್ಕೆ ಪ್ರಯತ್ನ ಪಡುವುದು ನಿಮ್ಮ ಕರ್ತವ್ಯವಾಗಿದೆ ಎಂದರು.

ವಾಣಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್ ಮಹೇಶ್ ಮಾತನಾಡಿ, ನಮ್ಮ ಕಾಲೇಜಿನ ಬೆಳವಣಿಗೆಗೆ ಸಚಿವರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರು ಬೆನ್ನೆಲುಬಾಗಿ ನಿಂತಿದ್ದಾರೆ. ಕುಡಿಯುವ ನೀರಿನ, ಬೀದಿ ದೀಪದ ವ್ಯವಸ್ಥೆ ಮಾಡಿಕೊ ಡಲು ಮನವಿ ಮಾಡಿದ್ದೇವೆ ಎಂದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದ್ದು ಕಾಲೇಜಿನ ಹಿರಿಮೆ ಹೆಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಡಿ.ಧರಣೇಂದ್ರಯ್ಯ, ಪ್ರಾಂಶುಪಾಲ ಎಂ.ಶಿವಲಿಂಗಪ್ಪ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್, ಎನ್ ಎಸ್‌ಎಸ್ ಘಟಕದ ಮಹಂತೇಶ್, ಮೂರ್ತಿ, ಜನಾರ್ಧನ್, ಜಗನ್ನಾಥ್, ಪುಷ್ಪಲತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಅಶೋಕ್ ಗಿಡ್ಡೋಬನಹಳ್ಳಿ, ಲೋಕೇಶ್, ರಮ್ಯಾ, ಚಂದ್ರಶೇಖ ರ್, ಪ್ರೇಮ್ ಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಮ್ಮದ್ ಫಕೃದ್ದೀನ್, ಶಿವಕುಮಾರ್, ವಿ ಶಿವಕುಮಾರ್, ತಿಮ್ಮರಾಜು ಮುಂತಾದವರು ಉಪಸ್ಥಿತರಿದ್ದರು.

ಡಿಕೆಶಿ ಸಿಬಿಐ ತನಿಖೆ ವಾಪಸ್‌, ಜಾತಿ ಗಣತಿ ವಿವಾದ ಸರ್ಕಾರ ಪತನದ ಹೆಜ್ಜೆ: ಈಶ್ವರಪ್ಪ

ನಮ್ಮ ಸರ್ಕಾರ ಮಹಿಳೆಯರಿಗೆ ಆದ್ಯತೆ ನೀಡಿ ಹಲವು ಯೋಜನೆ ಜಾರಿ ಮಾಡಿದೆ. ಸುಮಾರು ನೂರು ಕೋಟಿ ನಲ್ವತ್ತು ಲಕ್ಷ ಮಹಿಳೆಯರು ಉಚಿತ ಬಸ್ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ. ಕಡು ಬಡವ ಮಹಿಳೆಯರಿಗೆ ನೀಡಲಾಗುವ 2 ಸಾವಿರ ಹಣ ಬಡವರ ಬದುಕಿಗೆ ಒಂದಿಷ್ಟು ಆಸರೆಯಾಗಿದೆ. ಅದೇ ರೀತಿ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತದೆ.
- ಡಿ.ಸುಧಾಕರ್‌ ಜಿಲ್ಲಾ ಉಸ್ತುವಾರಿ ಸಚಿವ

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು