ನನ್ನ ಮತ್ತು ಹುಲಿನಾಯ್ಕರ್‌ ಅವರ ಸ್ನೇಹ ರಾಜಕಾರಣ ಮೀರಿದ್ದು: ಬಿ.ಎಸ್.ಯಡಿಯೂರಪ್ಪ

Published : Nov 26, 2023, 08:55 PM IST
ನನ್ನ ಮತ್ತು ಹುಲಿನಾಯ್ಕರ್‌ ಅವರ ಸ್ನೇಹ ರಾಜಕಾರಣ ಮೀರಿದ್ದು: ಬಿ.ಎಸ್.ಯಡಿಯೂರಪ್ಪ

ಸಾರಾಂಶ

ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ಇಷ್ಟು ಎತ್ತರಕ್ಕೆ ಬೆಳೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಹುಲಿನಾಯ್ಕರ್‌ ಅವರ ಬಳಗ ಬಹಳ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಂಸಿಸಿದರು.

ತುಮಕೂರು (ನ.26): ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ಇಷ್ಟು ಎತ್ತರಕ್ಕೆ ಬೆಳೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಹುಲಿನಾಯ್ಕರ್‌ ಅವರ ಬಳಗ ಬಹಳ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಂಸಿಸಿದರು. ನಗರದ ಸಿರಾ ರಸ್ತೆಯಲ್ಲಿರುವ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಾ. ಎಂ.ಆರ್. ಹುಲಿನಾಯ್ಕರ್‌ ಅಮೃತ ಮಹೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ಎಂ.ಆರ್ ಹುಲಿನಾಯ್ಕರ್‌ ಅವರ ಆತ್ಮಕಥನ ಅಂತರಂಗದ ಅವಲೋಕನ ಗ್ರಂಥ ಲೋಕಾರ್ಪಣೆ ಹಾಗೂ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದ ಅವರು ನನ್ನ ಮತ್ತು ಹುಲಿನಾಯ್ಕರ್‌ಅವರ ಸ್ನೇಹ ರಾಜಕಾರಣ ಮೀರಿದ್ದು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಬದುಕಿನಲ್ಲಿ ಸಂಯಮ, ಪ್ರಾಮಾಣಿಕತೆಯಿಂದ ಕಷ್ಟಪಟ್ಟು ದುಡಿದರೆ ಸಾಧನೆ ಮಾಡಬಹುದು ಎಂಬುದಕ್ಕೆ ಡಾ. ಎಂ.ಆರ್. ಹುಲಿನಾಯ್ಕರ್ ನಿದರ್ಶನವಾಗಿದ್ದಾರೆ ಎಂದರು. ಜೀವನದಲ್ಲಿ 2 ದಾರಿಗಳಿರುತ್ತವೆ. ಒಂದು ಸಂಘರ್ಷದ ಹಾದಿ, ಮತ್ತೊಂದು ಸಂಯಮದ ಹಾದಿ. ಈ ಎರಡರಲ್ಲಿ ಹುಲಿನಾಯ್ಕರ್‌ ಅವರು ಸಂಯಮದ ಹಾದಿಯಲ್ಲಿ ಸಾಗಿ ಇಂದು ಸಾಧಕರಾಗಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಬೆಳೆ ವಿಮೆ ಮಾಡಿಸಲು ರೈತರು ಹಿಂದೇಟು: ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?

ತುಮಕೂರಿನ ಇತಿಹಾಸದಲ್ಲಿ ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಆಂದಲೋನ ಮಾಡಿದರು. ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ವಿಶ್ವದೆಲ್ಲೆಡೆ ವಿವಿಧ ಹುದ್ದೆಗಳಲ್ಲಿ ಅಲಂಕರಿಸುವಂತೆ ಮಾಡಿದರು. ಶ್ರೀಮಠ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ದೇಶಕ್ಕೆಕೊಡುಗೆ ನೀಡಿದೆ. ಹೆಚ್.ಎಂ.ಗಂಗಾಧರಯ್ಯನವರು ಸಹ ಸಾಮಾನ್ಯ ಡ್ರಾಯಿಂಗ್‌ ಟೀಚರ್ ಆಗಿ ಶ್ರೀಗಳಿಂದ ಪ್ರೇರಣೆ ಪಡೆದು ಶಿಕ್ಷಣ ಸಂಸ್ಥೆಯನ್ನುಕಟ್ಟಿ ಬಡಮಕ್ಕಳಿಗೆ ಶಿಕ್ಷಣ ನೀಡಿದರು. ಡಾ.ಎಂ.ಆರ್. ಹುಲಿನಾಯ್ಕರ್‌ ಅವರು ಸಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ಗುಣಗಾನ ಮಾಡಿದರು.

ತುಮಕೂರು ಶಿಕ್ಷಣ ಕ್ಷೇತ್ರದಿಂದಾಗಿ ಇಡೀ ದೇಶದಲ್ಲಿ ಗುರುತಿಸುವಂತಾಗಿದೆ. ಇಡೀ ವಿಶ್ವದಾದ್ಯಂತ ವೈದ್ಯರು, ಇಂಜಿನಿಯರ್‌ಗಳು ಸೇವೆ ಸಲ್ಲಿಸುತ್ತಾ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿನ ಶಿಕ್ಷಣ ಕ್ರಾಂತಿಯೇ ಕಾರಣ ಎಂದರು. ಡಾ. ಎಂ.ಆರ್. ಹುಲಿನಾಯ್ಕರ್‌ ಅವರು ಕಟ್ಟಿ ಬೆಳೆಸಿರುವ ಶಿಕ್ಷಣ ಸಂಸ್ಥೆ ಮುಂದಿನ ದಿನಗಳಲ್ಲಿ ಒಂದು ವಿಶ್ವವಿದ್ಯಾನಿಲಯವಾಗಲಿ ಎಂದು ಅವರು ಆಶಿಸಿದರು. ಅಭಿನಂದನಾ ನುಡಿಗಳನ್ನಾಡಿದ ಸಹಕಾರ ಸಚಿವಕೆ.ಎನ್. ರಾಜಣ್ಣಅವರು, ಯಾವ ಮನುಷ್ಯನಿಗೆ ಉಪಕಾರದ ಸ್ಮರಣೆ ಇರುತ್ತದೆಯೋ ಅಂತಹವರಿಗೆ ಶ್ರೇಯಸ್ಸು ಲಭಿಸುತ್ತದೆ. 

ಈ ರೀತಿಯ ಉಪಕಾರ ಸ್ಮರಣೆ ಡಾ.ಎಂ.ಆರ್. ಹುಲಿನಾಯ್ಕರ್‌ ಅವರಿಗೆ ಇದೆ. ಹಾಗಾಗಿಯೇ ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆಯನ್ನುಕಟ್ಟಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ಎಂತಹ ಪರಿಸ್ಥಿತಿ ಬಂದರೂಜಗ್ಗದೆ, ಕುಗ್ಗದೆ ಮುನ್ನಡೆದಾಗ ಮಾತ್ರ ಸಾಧನೆ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಹುಲಿನಾಯ್ಕರ್‌ ಅವರು ನಡೆಯುವ ಮೂಲಕ ಸಾಧಕರಾಗಿ ಹೊರ ಹೊಮ್ಮಿದ್ದಾರೆ ಎಂದರು. ಕಾಗಿನೆಲೆ ಕನಕಗುರು ಪೀಠದಅಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಧಾರವಾಡ ಜಿಲ್ಲೆಯ ಕುಗ್ರಾಮ ನವಲಗುಂದದಲ್ಲಿ ಜನಿಸಿದ ಹುಲಿನಾಯ್ಕರ್‌ ಅವರು ಇಂತಹ ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವ ಮೂಲಕ ನಮ್ಮ ಸಮುದಾಯದಲ್ಲಿ ದಾರ್ಶನಿಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದರು.

ಗ್ರಂಥದ ಮೊದಲ ಪ್ರತಿ ಬಿಡುಗಡೆ ಮಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಯಾವುದೇ ಕಷ್ಟ ಬಂದರೂ ಅದನ್ನು ನಗುನಗುತ್ತಲೇ ಎದುರಿಸಿ ಹುಲಿ ನಾಯ್ಕರ್‌ ಅವರು ಸಾಧನೆಯ ಮೆಟ್ಟಿಲೇರಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು. ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಶ್ರೀದೇವಿ ಅಂತರಂಗ ೨ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಡಾ.ಎಂ.ಆರ್. ಹುಲಿನಾಯ್ಕರ್ ಹಾಗೂ ಶಾಂತಾದುರ್ಗದೇವಿ ಹುಲಿನಾಯ್ಕರ್‌ ಅವರಿಗೆ ನಾಗರಿಕ ಸನ್ಮಾನ ಮಾಡಲಾಯಿತು.

ಡಿಕೆಶಿ ಸಿಬಿಐ ತನಿಖೆ ವಾಪಸ್‌, ಜಾತಿ ಗಣತಿ ವಿವಾದ ಸರ್ಕಾರ ಪತನದ ಹೆಜ್ಜೆ: ಈಶ್ವರಪ್ಪ

ಸಾಹಿತಿ ಡಾ.ಕಬ್ಬಿನೆಲೆ ವಸಂತ ಭಾರಧ್ವಾಜ್, ಟಿ.ಆರ್.ಆಂಜಿನಪ್ಪ, ಡಾ.ಎಂ.ಆರ್. ಹುಲಿನಾಯ್ಕರ್ ದಂಪತಿ, ಡಾ.ರಮಣ್ ಹುಲಿನಾಯ್ಕರ್, ಅಂಬಿಕಾ ಹುಲಿನಾಯ್ಕರ್, ಎಂ.ಎಸ್. ಪಾಟೀಲ್, ಮಧುಕರ್ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಹಾಗೂ ಸಮಿತಿಯ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಎಸ್. ನಾಗಣ್ಣ ಸ್ವಾಗತಿಸಿದರು.

PREV
Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ