ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದ್ದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಲ್ಲಿ ಕೂಡ ನೀರು ಜಿನುಗಿತು.!
ಹುಬ್ಬಳ್ಳಿ (ಏ.15) : ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದ್ದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಲ್ಲಿ ಕೂಡ ನೀರು ಜಿನುಗಿತು.!
ಇಂತಹ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದು ಕಲಘಟಗಿ ತಾಲೂಕಿನ ಮಿಶ್ರಿಕೋಟೆ ಗ್ರಾಮ. ಮಿಶ್ರಿಕೋಟೆ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮಂಗಗಳ ಹಿಂಡು ಪರಸ್ಪರ ಚಿನ್ನಾಟ ಆಡುತ್ತಾ ಗೋಡೆ ಗೋಡೆಯಿಂದ ಜಿಗಿಯುತ್ತಿದ್ದವು ಈ ವೇಳೆ ಮರಿ ಮಂಗವೊಂದು ಗೋಡೆಯಿಂದ ಗೋಡೆಗೆ ಜಿಗಿಯಲು ಹೋಗಿ ವಿದ್ಯುತ್ ಕಂಬದ ತಂತಿಗೆ ಸ್ಪರ್ಶವಾಗಿದೆ. ಇದರಿಂದ ಕ್ಷಣಾರ್ಧದಲ್ಲೇ ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿತು.
ಇದನ್ನು ನೋಡಿ ಗ್ರಾಮಸ್ಥರೆಲ್ಲರೂ ಮಮ್ಮಲ ಮರಗಿದರು. ಸತ್ತ ಮಂಗವನ್ನು ವಿಧಿ ಪ್ರಕಾರ ಶವ ಸಂಸ್ಕಾರ ಮಾಡಿದರಾಯಿತು ಎಂದುಕೊಂಡು ಗ್ರಾಮದ ಯುವಕರ ತಂಡ ಅದನ್ನು ತಳ್ಳುಗಾಡಿಯಲ್ಲಿ ಹಾಕಿತು. ಆದರೆ, ತನ್ನ ಮಗು ಸತ್ತು ಬಿದ್ದಿರುವುದನ್ನ ನೋಡಿದ ತಾಯಿ ಮಂಗಕ್ಕೆ ದುಃಖ ತಡೆದುಕೊಳ್ಳಲು ಆಗದೇ ಮೃತ ಶರೀರದ ಬಳಿ ಬಂದು ರೋಧಿಸಲು ಪ್ರಾರಂಭಿಸಿತು. ಅದರ ಬಳಿ ಯಾರೂ ಬರದಂತೆ ಯುವಕರ ತಂಡಕ್ಕೂ ಹೆದರಿಸಿ ಕಳುಹಿಸುತ್ತಿತ್ತು. ಅಲ್ಲದೇ, ಸತ್ತು ಬಿದ್ದಿದ್ದ ಮಂಗನ ಶರೀರ ಅಲುಗಾಡಿಸಿ, ಬಡಿದು ಎಚ್ಚರಿಸುವ ಪ್ರಯತ್ನವನ್ನೂ ಮಾಡುತ್ತಿತ್ತು. ಹೀಗೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ತನ್ನ ಮಗುವನ್ನು ಎಚ್ಚರಿಸುವ ಪ್ರಯತ್ನ ಮುಂದುವರಿಸಿತು. ಆದರೆ, ಮರಿ ಏಳಲೇ ಇಲ್ಲ. ಕೊನೆಗೆ ಇದು ಏಳುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ರೋಧಿಸುತ್ತಲೇ ಸಮೀಪದ ಗೋಡೆ ಏರಿ ಕುಳಿತಿತು.
ಚೀನಾಕ್ಕೆ 1 ಲಕ್ಷ ಮಂಗಗಳನ್ನು ಮಾರಾಟ ಮಾಡಲಿರುವ ಶ್ರೀಲಂಕಾ, ಕಾರಣವೇನು?
ಬಳಿಕಷ್ಟೇ ಯುವಕರ ತಂಡ, ಸತ್ತು ಬಿದ್ದಿದ್ದ ಮಂಗವನ್ನು ಗ್ರಾಮದ ಕಿಲ್ಲೆ ಓಣಿಯಲ್ಲಿನ ದೊಡ್ಡ ಮಾರುತಿ ಮಂದಿರದ ಬಳಿಗೆ ತೆಗೆದುಕೊಂಡು ಪೂಜೆ ಸಲ್ಲಿಸಿದರು. ಬಳಿಕ ಮಂದಿರದ ಪ್ರಾಂಗಣದಲ್ಲಿ ಮರಿಮಂಗದ ಶವಸಂಸ್ಕಾರವನ್ನು ವಿಧಿಪ್ರಕಾರ ನೆರವೇರಿದರು. ಇದೆಲ್ಲವನ್ನೂ ದೂರದಿಂದಲೇ ಕುಳಿತು ನೋಡುತ್ತಿದ್ದ ತಾಯಿ ಮಂಗ ಸೇರಿದಂತೆ ಮಂಗಗಳ ಹಿಂಡು ಕೂಡ ಕಣ್ಣೀರು ಸುರಿಸುತ್ತಿದ್ದವು.
ಮಂಗಗಳ ಈ ರೋಧನೆ ದೃಶ್ಯ ಕಂಡು ಗ್ರಾಮಸ್ಥರು ಮಮ್ಮಲ ಮರುಗುವುದರ ಜೊತೆಗೆ ಕಣ್ಣೀರು ತಂದುಕೊಂಡರು. ಶವಸಂಸ್ಕಾರ ಮುಗಿದು ಯುವಕರ ತಂಡವೆಲ್ಲ ಅಲ್ಲಿಂದ ತೆರಳಿದ ಮೇಲೆ ಮತ್ತೆ ತಾಯಿ ಮಂಗ ಬಂದು ಶವಸಂಸ್ಕಾರ ಮಾಡಿದ ಸ್ಥಳದಲ್ಲೇ ಕೆಲಹೊತು್ತ ಕುಳಿತು ರೋದಿಸುತಿ್ತದ್ದ ದೃಶ್ಯ ಕಾಣುತಿ್ತತು್ತ. ಇದಕೆ್ಕ ಉಳಿದ ಮಂಗಗಳು ಸಹ ಜೊತೆಗೂಡಿದ್ದವು.
ಮನೆಯಲ್ಲಿ ಸಾಕಿದ್ದ ನಾಯಿ, ಬೆಕ್ಕುಗಳನ್ನೇ ಕೊಲ್ಲುವ ವಾನರ ಸೇನೆ: ಮಂಗಗಳ ದಾಳಿಗೆ ಜನರೇ ಹೈರಾಣ