ಅಂಬೇಡ್ಕರ್ ಜಯಂತಿಗೆ ಪಿಡಿಒ ಗೈರು; ಪಂಚಾಯಿತಿ ಬಾಗಿಲಿಗೆ ಕಳ್ಳಿ ಹಾಕಿ ಗ್ರಾಮಸ್ಥರ ಪ್ರತಿಭಟನೆ

By Kannadaprabha News  |  First Published Apr 15, 2023, 9:17 AM IST

ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ವೇಳೆ ಗ್ರಾಮ ಪಂಚಾಯಿತಿ ಪಿಡಿಒ ಭಾಗಿಯಾಗದೆ ಬಾಬಾ ಸಾಹೇಬರಿಗೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಬಾಗಿಲಿಗೆ ಕಳ್ಳೆಯನ್ನು ಹಾಕಿ ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.


ಮೊಳಕಾಲ್ಮುರು (ಏ.15) : ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ವೇಳೆ ಗ್ರಾಮ ಪಂಚಾಯಿತಿ ಪಿಡಿಒ ಭಾಗಿಯಾಗದೆ ಬಾಬಾ ಸಾಹೇಬರಿಗೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಬಾಗಿಲಿಗೆ ಕಳ್ಳೆಯನ್ನು ಹಾಕಿ ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ(PDO Mallikarjun) ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಯುವ ಅಂಬೇಡ್ಕರ್‌ ಜಯಂತಿಯಲ್ಲಿ ಭಾಗಿಯಾಗಿಲ್ಲ. ಕೇವಲ ಪಂಚಾಯಿತಿ ಸಿಬ್ಬಂದಿಗಳೊಬ್ಬರಿಂದಲೇ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲಿ ಅಥವಾ ಕಾರ್ಯದರ್ಶಿಯಾಗಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಇದು ಡಾ. ಬಾಬಾ ಸಾಹಬೇಬರಿಗೆ ಮಾಡಿರುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿ ಸದಸ್ಯ ಮಹೇಶ ಸೇರಿದಂತೆ ಕೆಲ ಯುವಕರು ಪಂಚಾಯಿತಿ ಬಾಗಿಲಿಗೆ ಮುಳ್ಳನ್ನು ಹಾಕಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

Latest Videos

undefined

 

ಪಾರ್ಲಿಮೆಂಟ್ ಮಾದರಿ ಅಂಬೇಡ್ಕರ್ ಕಂಚಿನ ಭವ್ಯ ಪ್ರತಿಮೆ ಅನಾವರಣಗೊಳಿಸಿದ ಸಚಿವ ಆನಂದ್ ಸಿಂಗ್!

ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ನನಗೆ ಬಿಜೆಕೆರೆ ಮತ್ತು ಕೊಂಡ್ಲಹಳ್ಳಿ ಪಂಚಾಯಿತಿಗಳ ಜವಾಬ್ದಾರಿ ಇದ್ದು, ನಾನು ಕೊಂಡ್ಲಹಳ್ಳಿಯಲ್ಲಿ ಆಚರಿಸಿಕೊಂಡು ಬರುತ್ತೇನೆ, ಇಲ್ಲಿ ಕಾರ್ಯದರ್ಶಿಯರೇ ಆಚರಿಸಿ ಎಂದು ಸೂಚಿಸಿದ್ದೆ. ಕಾರ್ಯದರ್ಶಿ ಬರುವುದು ಸ್ವಲ್ಪ ತಡವಾಗಿದ್ದು, ಇದರಲ್ಲಿ ಯಾವುದೇ ಲೋಪ ಎಸಗಿಲ್ಲ ಎಂದು ಸಮಜಾಯಿಷಿ ನೀಡಿ ಸಮಾಧಾನ ಪಡಿಸಿ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯ ಮಹೇಶ, ಮುಖಂಡ ಕೆ. ಕೊಲ್ಲಣ್ಣ, ರಾಜ, ತಿಪ್ಪೇಶ ಇನ್ನಿತರರು ಇದ್ದರು.

click me!