ತಾಯಿ ಕಾವೇರಿ, ತಂದೆ ಭರತ್ ಝೀಬ್ರಾಗಳು 10 ವಷರ್ದ ವಯೋಮಾನದವರು. ಹುಟ್ಟಿದ ಮರಿ ನೋಡಲು ತುಂಬಾ ಮುದ್ದಾಗಿದ್ದು, ಕಂದು ಬಣ್ಣದ ಪಟ್ಟಿ ಮೈಮೇಲೆ ಕಂಡುಬಂದಿದೆ. ವಯಸ್ಸಾದಂತೆ ಕಂದು ಪಟ್ಟಿ ಕಪ್ಪು ವರ್ಣಕ್ಕೆ ಸಹಜವಾಗಿ ಬದಲಾಗುತ್ತದೆ: ಸುನಿಲ್ ಪನ್ವಾರ್
ಆನೇಕಲ್(ಏ.15): ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶುಕ್ರವಾರ ಮುಂಜಾನೆ ಝೀಬ್ರಾವೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ತಾಯಿ ಕಾವೇರಿ, ತಂದೆ ಭರತ್ ಝೀಬ್ರಾಗಳು 10 ವಷರ್ದ ವಯೋಮಾನದವರು. ಹುಟ್ಟಿದ ಮರಿ ನೋಡಲು ತುಂಬಾ ಮುದ್ದಾಗಿದ್ದು, ಕಂದು ಬಣ್ಣದ ಪಟ್ಟಿ ಮೈಮೇಲೆ ಕಂಡುಬಂದಿದೆ. ವಯಸ್ಸಾದಂತೆ ಕಂದು ಪಟ್ಟಿ ಕಪ್ಪು ವರ್ಣಕ್ಕೆ ಸಹಜವಾಗಿ ಬದಲಾಗುತ್ತದೆ ಎಂದು ಇಡಿ ಸುನಿಲ್ ಪನ್ವಾರ್ ತಿಳಿಸಿದರು.
ಶುಕ್ರವಾರ ಜನಿಸಿದ ಮರಿಯು ಸೇರಿದಂತೆ ಪಾಕಿರ್ನಲ್ಲಿ 6 ಝೀಬ್ರಾ ಸಂತತಿಗಳಿವೆ. ಮರಿಯ ಲಿಂಗವನ್ನು ಕೆಲ ದಿನಗಳ ನಂತರ ತಿಳಿಯಲು ಸಾಧ್ಯವಾಗುತ್ತದೆ. ಸಾಧಾರಣವಾಗಿ ಝೀಬ್ರಾ 1 ವಷರ್ ಕಾಲ ಗರ್ಭ ಧರಿಸುತ್ತದೆ ಎಂದ ವೈದ್ಯಾಧಿಕಾರಿ ಡಾ. ಕೆ.ಎಸ್.ಉಮಾಶಂಕರ್, ಹೊಸ ಮರಿ ಆರೋಗ್ಯದಿಂದಿದೆ. ವೀಕ್ಷಕರಿಗೆ ಲಭ್ಯವಿದೆ ಎಂದರು.
undefined
ಪುನೀತ ಪಯಣ: ಅಪ್ಪು ಹೆಸರಿನ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಬನ್ನೇರುಘಟ್ಟ ದೋಣಿ ವಿಹಾರ ಕೇಂದ್ರದಲ್ಲಿ ಮೊಸಳೆ ಪ್ರತ್ಯಕ್ಷ
ಆನೇಕಲ್: ಬಬನ್ನೇರುಘಟ್ಟ ಪಾರ್ಕಿನ ದೋಣಿ ವಿಹಾರ ಕೇಂದ್ರದಲ್ಲಿ ಸಾಧಾರಣ ಗಾತ್ರದ ಜೋಡಿ ಮೊಸಳೆಗಳು ಕಾಣಿಸಿಕೊಂಡಿದ್ದು, ಪ್ರವಾಸಿಗರಲ್ಲಿ ಭಯದ ವಾತಾವರಣ ಮೂಡಿತ್ತು. ಇದನ್ನು ಮನಗಂಡ ಅಧಿಕಾರಿಗಳು ಬಲೆ ಬೀಸಿ ಎರಡೂ ಮೊಸಳೆಗಳನ್ನು ಹಿಡಿದು ದೂರದ ನೀರಿನ ತಾಣದಲ್ಲಿ ಬಿಟ್ಟಿದ್ದಾರೆ. ಕಳೆದು ಎರಡು ತಿಂಗಳಲ್ಲಿ ಬಿದ್ದ ಮಳೆಗಳಿಂದಾಗಿ ಮೊಸಳೆಗಳು ದೋಣಿ ಕೇಂದ್ರಕ್ಕೆ ಬಂದಿರಬಹುದು. ಅವುಗಳಿಂದ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಆದರೂ ಪ್ರವಾಸಿಗರ ಆತಂಕವನ್ನು ದೂರ ಮಾಡಲು ಸೆರೆ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ಇಡಿ ಸುನಿಲ್ ಪನ್ವಾರ್ ತಿಳಿಸಿದ್ದಾರೆ.