ಬಾಲಕಿ ಮೇಲೆ ದಾಳಿ ಮಾಡಿದ ಕೋತಿ: ಕಾಲಿಗೆ ಗಂಭೀರ ಗಾಯ

Published : Jun 27, 2023, 07:48 PM ISTUpdated : Jun 27, 2023, 08:07 PM IST
ಬಾಲಕಿ ಮೇಲೆ ದಾಳಿ ಮಾಡಿದ ಕೋತಿ: ಕಾಲಿಗೆ ಗಂಭೀರ ಗಾಯ

ಸಾರಾಂಶ

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಉರ್ದು ಶಾಲೆಯಲ್ಲಿ ಓದುತ್ತಿದ್ದ 2ನೇ ತರಗತಿಯ ಮುಸ್ಲಿಂ ಬಾಲಕಿ ಮೇಲೆ ಕೋತಿ ದಾಳಿ ಮಾಡಿ ಕಚ್ಚಿದೆ.

ಧಾರವಾಡ  (ಜೂ.27): ರಾಜ್ಯದಲ್ಲಿ ಇಷ್ಟುದಿನ ಮಕ್ಕಳ ಮೇಲೆ ಬೀದ ನಾಯಿಗಳು ದಾಳಿ ಮಾಡಿರುವ ಪ್ರಕರಣವನ್ನು ನಾವು ಕೇಳಿದ್ದೇವೆ. ಆದರೆ, ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಉರ್ದು ಶಾಲೆಯಲ್ಲಿ ಓದುತ್ತಿದ್ದ 2ನೇ ತರಗತಿಯ ಮುಸ್ಲಿಂ ಬಾಲಕಿ ಮೇಲೆ ಕೋತಿ ದಾಳಿ ಮಾಡಿ ಕಚ್ಚಿದೆ.

ಗ್ರಾಮೀಣ ಭಾಗದಲ್ಲಿ ದನ-ಕರು, ಎಮ್ಮೆ, ನಾಯಿ, ಕೋಳಿ, ಕುರಿ, ಮೇಕೆ, ಕೋತಿ ಹಾಗೂ ಇತರೆ ಪ್ರಾಣಿಗಳು ಮಾನವನೊಂದಿಗೆ ಜನವಸತಿ ಪ್ರದೇಶದಲ್ಲಿಯೂ ವಾಸ ಮಾಡುತ್ತವೆ. ಆದರೆ, ಕೆಲವು ಬಾರಿ ಮಾತ್ರ ಮಕ್ಕಳು ಒಬ್ಬಂಟಿಯಾಗಿ ಬಂದಾಗ ದಾಳಿ ಮಾಡಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಮಕ್ಕಳನ್ನು ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡಲು ಬಿಡಬೇಡಿ ಎಂದು ಪೋಷಕರಿಗೆ ಹೇಳಲಾಗುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿ ಮಕ್ಕಳು ಒಬ್ಬಂಟಿಯಾಗಿ ಓಡಾಡೋದು ಸಹಜ. ಈಗ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಕೋತಿಯೊಂದು ಬಾಲಕಿಯನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದೆ.

ಆರು ಮಂದಿ ಬಲಿಕೊಟ್ಟರೂ ಎಚ್ಚೆತ್ತುಕೊಳ್ಳದ ಸರ್ಕಾರ: ಮತ್ತೆ ಕಲುಷಿತ ನೀರು ಸೇವನೆಯಿಂದ 54 ಮಂದಿಗೆ ವಾಂತಿ, ಬೇಧಿ

ಅಟ್ಟಾಡಿಸಿಕೊಂಡು ಬಾಲಕಿ ಕಾಲಿಗೆ ಕಚ್ಚಿದ ಕೋತಿ: ಧಾರವಾಡ ತಾಲೂಕಿನ ಗರಗ ಗ್ರಾಮದ ಗ್ರಾಮದ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ಎದುರು ಘಟನೆ ಕೋತಿ ದಾಳಿ ಮಾಡಿರುವ ಘಟನೆ ನಡೆದಿದೆ. ಗಾಯಗೊಂಡ ಮಗುವನ್ನು ಇಕರಾ ಗಡಕಾರಿ (7) ಎಂದು ಗುರುತಿಸಲಾಗಿದೆ. ಈ ಮಗು ಉರ್ದು ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶಾಲೆ ಬಿಟ್ಟ ನಂತರ ಮೈದಾನದ ಬಳಿ ಬಾಲಕಿ ಹೋಗುವಾಗ ಕೋತಿ ಓಡಿಸಿಕೊಂಡು ಬಂದಿದೆ. ಈ ವೇಳೆ ಬಾಲಕಿ ದೂರ ಓಡಿ ಹೋದರೂ ಬಿಡದೇ ಹಿಂಬಾಲಿಸಿಕೊಂಡು ಬಂದಿದೆ. ಶಾಲೆಯ ಬಳಿಯಿರುವ ಒಂದು ಕಟ್ಟೆಯ ಮೇಲೆ ಹತ್ತಿ ಓಡಲು ಮುಂದಾಗಿದ್ದ ಬಾಲಕಿ ಬಿದ್ದಾಗ ಆಕೆಯ ಕಾಲು ಸೇರಿದಂತೆ ಇತರೆ ಭಾಗಗಳಿಗೆ ಕಚ್ಚಿ ಗಾಯಗೊಳಿಸಿದೆ.

ಕಿಮ್ಸ್‌ ಆಸ್ಪತ್ರೆಗೆ ಬಾಲಕಿಯ ರವಾನೆ: ಕೋತಿ ದಾಳಿಯಿಂದ ತಪ್ಪಿಸಿಕೊಂಡು ಓಡುವಾಗ ಕೆಳಗೆ ಬಿದ್ದ ಮಗುವಿನ ಎಡಗಾಲು ಹಿಡಿದು ಕೋತಿ ಎಳೆದಾಡಿದೆ. ಇದರಿಂದ ಎಡಗಾಲಿಗೆ ಗಂಭೀರ ಗಾಯವಾಗಿದೆ. ಇನ್ನು ಕೋತಿದಾಳಿ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಾಳು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಾಲಕಿಯ ಕಾಉ ಸೇರಿದಂತೆ ಇತರೆ ಭಾಗಗಳಲ್ಲಿಯೂ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

ಬಿಕಿನಿ ಧರಿಸಿ ಬಿಂದಾಸ್ ಆಗಿ ಬೀಚ್‌ನಲ್ಲಿ ಮಲಗಿದ್ದ ಯುವತಿ ಮೇಲೆ ನಾಯಿ ದಾಳಿ: ವೀಡಿಯೋ ವೈರಲ್

ಬಿಕಿನಿಯಲ್ಲಿ ಮಗಿದ್ದ ಯುವತಿ ಹಿಂಭಾಗಕ್ಕೆ ಕಚ್ಚಿದ ನಾಯಿ: ಸಿಡ್ನಿ: ವಿದೇಶಗಳ ಬೀಚ್‌ಗಳಲ್ಲಿ ಒಳ ಉಡುಪು ಧರಿಸಿ ಮಲಗುವುದು ಅಲ್ಲಿನ ದೈನಂದಿನ ಲೈಫ್‌ಸ್ಟೈಲ್ ಆಗಿದ್ದು, ಯಾರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಯಾರೂ ಕೂಡ ನಿಮ್ಮ ಖಾಸಗಿತನಕ್ಕೆ ಭಂಗ ತರುವುದಿಲ್ಲ. ಇದೇ ಕಾರಣಕ್ಕೆ ನಮ್ಮ ದೇಶದ  ಶ್ರೀಮಂತರು, ಸೆಲೆಬ್ರಿಟಿಗಳೂ, ಸಿನಿಮಾ ನಟನಟಿಯರು ರಜಾ ದಿನಗಳಲ್ಲಿ ವಿದೇಶಕ್ಕೆ ಹಾರುತ್ತಾರೆ.  ಅಲ್ಲಿನ ಬೀಚ್‌ಗಳಲ್ಲಿ ಬಿಕಿನಿ ತೊಟ್ಟು ಎಂಜಾಯ್ ಮಾಡ್ತಾರೆ.  ಇನ್ನು ವಿದೇಶಿಗರಿಗೆ ಇದು ಸಾಮಾನ್ಯ ಆಗಿದ್ದು,  ಅನೇಕರು ಬಿಕಿನಿ ತೊಟ್ಟು  ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಕಡಲ ತಡಿಯ ಮರಳಿನ ಮೇಲೆ  ಬಿಂದಾಸ್ ಆಗಿ ಮಲಗಿ ನಿರಾಳಗಾಗುತ್ತಿರುತ್ತಾರೆ. ಆದರೆ ಹೀಗೆ ಮಲಗಿದ್ದ ಮಹಿಳೆಯೊಬ್ಬರ ಮೇಲೆ  ಆಸ್ಟ್ರೇಲಿಯಾದ ಕಾಡು ನಾಯಿಯೊಂದು ದಾಳಿ ಮಾಡಿದೆ. ಈ ಘಟನೆಯೂ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ