ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಪೆತ್ತಮ್ಮನಹಟ್ಟಿ ಗ್ರಾಮದಲ್ಲಿ, ಬುಡಕಟ್ಟು ಸಮುದಾಯವೊಂದು ಪೂರ್ವಜರ ಕಾಲದಿಂದಲೂ ಮುಂಗಾರು ಮಳೆ ಆರಂಭಕ್ಕೂ ಮುನ್ನ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ನಡೆಸೋದು ಇಲ್ಲಿನ ವಾಡಿಕೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.27): ಮುಂಗಾರು ಮಳೆ ಭೂಮಿಗೆ ಬಿತ್ತಂದ್ರೆ, ಬಿತ್ತನೆ ಕಾರ್ಯದಲ್ಲಿ ರೈತರು ಫುಲ್ ಬಿಸಿಯಾಗ್ತಾರೆ. ಹೀಗಾಗಿ ರೈತರ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿಯೇ ಕೋಟೆನಾಡಿನ ಬುಡಕಟ್ಟು ಸಮುದಾಯವೊಂದು ಪ್ರತಿವರ್ಷ ಜೋಡೆತ್ತಿನ ಗಾಡಿ ಸ್ಪರ್ಧೆ ಯನ್ನು ಆಯೋಜಿಸ್ತಿದೆ. ಆ ಸ್ಪರ್ಧೆಯಲ್ಲಿ ರೈತರು, ನಾವು ಯಾರಿಗು ಕಮ್ಮಿ ಇಲ್ಲ ಅಂತ ಅವರ ಪವರ್ ಪ್ರದರ್ಶನ ತೋರ್ತಿದ್ದಾರೆ.
undefined
ಹೀಗೆ ನಾ ಮುಂದು,ತಾ ಮುಂದು ಅಂತ ವೇಗವಾಗಿ ಓಡ್ತಿರೊ ಜೋಡೆತ್ತಿನ ಗಾಡಿಗಳು. ಆ ಎತ್ತುಗಳ ಪೈಪೋಟಿ ಕಂಡು ರಣಕೇಕೆ ಹಾಕ್ತಿರೋ ರೈತರು. ಈ ದೃಶ್ಯಗಳು ಕಂಡುಬಂದಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪೆತ್ತಮ್ಮನಹಟ್ಟಿ ಗ್ರಾಮದಲ್ಲಿ, ಬುಡಕಟ್ಟು ಸಮುದಾಯವೊಂದು ಪೂರ್ವಜರ ಕಾಲದಿಂದಲೂ ಮುಂಗಾರು ಮಳೆ ಆರಂಭಕ್ಕೂ ಮುನ್ನ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ನಡೆಸೋದು ಇಲ್ಲಿನ ವಾಡಿಕೆ. ಆದ್ರೆ ಈ ಬಾರಿ ಮುಂಗಾರು ಮಳೆ ವಿಳಂಬವಾಗಿರೊ ಪರಿಣಾಮ ಭೂಮಿಯನ್ನು ಹದಗೊಳಿಸಿಕೊಂಡು ಮಳೆಗಾಗಿ ಕಾಯ್ತಿರೊ ರೈತರ ಚಿತ್ತ ಮುಗಿಲತ್ತ ಇದೆ.
ನಿರಪರಾಧಿಗಳ ಮೇಲೆ ಕೇಸು ಜಡಿದ ಮಂಗಳೂರಿನ 3 ಪೊಲೀಸ್ ಅಧಿಕಾರಿಗಳಿಗೆ ಭಾರೀ ದಂಡ!
ಹೀಗಾಗಿ ರೈತರಲ್ಲಿನ ಉತ್ಸಾಹ ಕುಗ್ಗದಿರಲಿ ಹಾಗು ಅವರ ಕೃಷಿ ಚಟುವಟಿಕೆಗಳು ನಿಲ್ಲದಿರಲಿ ಅನ್ನೋ ಸದುದ್ದೇಶದಿಂದ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೈತರು,ನಿತ್ಯ ಹವ್ಯಾಸಿ ಸ್ಪರ್ಧಾಳುಗಳಂತೆ ಅವರ ಜೋಡೆತ್ತಿನ ಗಾಡಿಯನ್ನು ವೇಗವಾಗಿ ಓಡಿಸಿದ್ರು. ಅವರ ಎತ್ತುಗಳ ಶಕ್ತಿ ಪ್ರದರ್ಶಿಸಿದ್ರು. ಈ ವೇಳೆ ಸ್ಪರ್ಧೆ ಯಲ್ಲಿ ಜಯಗಳಿಸಿದ ರೈತರಿಗೆ ಆಕರ್ಷಕ ಪಾರಿತೋಷಕಹಾಗು ನಗದು ಬಹಮಾನ ಕೊಟ್ಟು ಆಯೋಜಕರು ಸನ್ಮಾನಿಸಿದ್ರು.
ಇನ್ನು ಮಳೆ ಇಲ್ಲ ಅನ್ನೊ ನೆಪದಲ್ಲಿ ಸಮಯ ಕಳೆಯಲು ವಿವಿಧ ದುಶ್ಚಟಗಳಿಗೆ ಬಲಿಯಾಗುವ ರೈತರು ಹಾಗು ಗ್ರಾಮಸ್ಥರಿಗೆ ಈ ಜೋಡೆತ್ತಿನಗಾಡಿ ಸ್ಪರ್ಧೆ ಭರ್ಜರಿ ಮನರಂಜನೆ ನೀಡಿತು. ಈ ಸ್ಪರ್ಧೆಗಾಗಿ ಸುತ್ತಮುತ್ತ ಹತ್ತಾರು ಹಳ್ಳಿಗಳ ರೈತರು ಸೇರಿದಂತೆ ಹೊರ ಜಿಲ್ಲೆಯ ರೈತರು ಸಹ ಭಾಗವಹಿಸಿದ್ದರು. ಈ ರೋಮಾಂಚಕಾರಿ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಕಣ್ತುಂಬಿಕೊಂಡರು. ಮನಸಾರೆ ಸಂತಸಗೊಂಡು ಕುತೂಹಲಕಾರಿ ಸ್ಪರ್ಧೆ ವೀಕ್ಷಿಸಿ ಪುಳಕಿತರಾದರು.
ನೆಟ್ಟಿಗರ ಕಣ್ಣಲ್ಲೂ ನೀರು ತರಿಸಿದ ಅಪ್ಪ ಮಗಳ ವೀಡಿಯೋ
ಒಟ್ಟಾರೆ ಕೋಟೆನಾಡಲ್ಲಿ ನಡೆದ ಜೋಡೆತ್ತಿನಗಾಡಿ ಸ್ಪರ್ಧೆ ಮಳೆಯಾಗಿಲ್ಲ ಅಂತ ಬೇಸರಗೊಂಡಿರೊ ರೈತರಿಗೆ ಮನೋರಂಜನೆ ನೀಡಿತು./ಕೇವಲ ಉಳುಮೆ ಹಾಗು ಬಿತ್ತನೆ ಅಂತ ಬಿಸಿಯಾಗಿದ್ದ ರೈತರ ಶಕ್ತಿಪ್ರದರ್ಶನ ಇಲ್ಲಿ ಅನಾವರಣವಾಗಿದ್ದು, ಕೃಷಿಯಲ್ಲಿ ಸಕ್ರಿಯರಾಗಿರಲು ಇದು ಸ್ಪೂರ್ತಿಯಾಯಿತು.