ಮೈಸೂರು: 'ಮೋದಿ ಸರ್ಕಾರದಿಂದ ದೇಶ ಮಾರಲು ಸಿದ್ಧತೆ'..!

By Kannadaprabha News  |  First Published Dec 9, 2019, 10:59 AM IST

ಕಳೆದ 6 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ದೇಶವನ್ನು ಮಾರಲಿದೆ.  ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಷ್ಟ್ರ ಮಟ್ಟದಲ್ಲಿ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಒಟ್ಟಾಗಿ 2020ರ ಜ. 8 ರಂದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕರ ನಾಯಕ ಎಚ್‌.ವಿ. ಅನಂತಸುಬ್ಬರಾವ್‌ ಹೇಳಿದ್ದಾರೆ.


ಮೈಸೂರು(ಡಿ.09): ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಷ್ಟ್ರ ಮಟ್ಟದಲ್ಲಿ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಒಟ್ಟಾಗಿ 2020ರ ಜ. 8 ರಂದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕರ ನಾಯಕ ಎಚ್‌.ವಿ. ಅನಂತಸುಬ್ಬರಾವ್‌ ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಭಾನುವಾರ ಗೋವರ್ಧನ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

Latest Videos

undefined

ಗೆಲುವಿಗಾಗಿ ಪ್ರಾರ್ಥನೆ: ಕಾಂಗ್ರೆಸ್ ಅಭ್ಯರ್ಥಿಯಿಂದ ಸಾಯಿಬಾಬಾಗೆ ಬೆಳ್ಳಿ ಪಾದುಕೆ

ಕಳೆದ 6 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ದೇಶವನ್ನು ಮಾರಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಕಾರ್ಮಿಕ ಸಂಘಟನೆಗಳು ಜ. 8 ರಂದು ಬೃಹತ್‌ ಪ್ರತಿಭಟನೆ ನಡೆಸಬೇಕು. ಕಾರ್ಮಿಕ ಸಂಘಟನೆಗಳನ್ನು ಒಟ್ಟುಗೂಡಿಸಲು ಗುರುದಾಸ್‌ ಗುಪ್ತ ಶ್ರಮಿಸಿದ್ದು, ಅವರ ನೆನಪಿನಲ್ಲೆ ನಮ್ಮ ಹೋರಾಟ ನಡೆಸಬೇಕು. ಈ ಸರ್ಕಾರ ಹೀಗೆ ಮುಂದುವರೆದರೆ ಕಾರ್ಮಿಕರನ್ನು ಮುಗಿಸುತ್ತಾರೆ. ದೇಶವನ್ನೂ ಮಾರುತ್ತಾರೆ ಎಂದು ಕಿಡಿಕಾರಿದ್ದಾರೆ.

ದಂಡ ತಪ್ಪಿಸಲು ಬುಲೆಟ್‌ಗೆ ಸ್ಕೂಟಿಯ ನೋಂದಣಿ ಸಂಖ್ಯೆ ಹಾಕಿದ..!

ಕಾರ್ಮಿಕ ಸಂಘಟನೆಗಳು ವರ್ಷಕ್ಕೊಮ್ಮೆ ಹೋರಾಟ ನಡೆಸಿ ಸುಮ್ಮನಾಗುತ್ತಾರೆ ಎಂದುಕೊಂಡಿದ್ದಾರೆ. ಆದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. 1980 ರಿಂದಲೂ ಕಾರ್ಮಿಕ ಸಂಘಟನೆಗಳು ಇದೇ ರೀತಿ ಹೋರಾಟ ನಡೆಸಿಕೊಂಡು ಬಂದಿವೆ. ಈಗಿನ ಸರ್ಕಾರಕ್ಕೆ ಕಾರ್ಮಿಕರ 44 ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದಕ್ಕೂ ಸ್ಪಂದಿಸಿಲ್ಲ. ಕಾರ್ಮಿಕರನ್ನು ಪ್ರತಿನಿಧಿಸುವ ನಾಯಕರು ಕೂಡ ಸಂಸತ್ತಿನಲ್ಲಿಲ್ಲದಿರುವುದು ದುರಂತವೇ ಸರಿ ಎಂದು ಹೇಳಿದರು.

ಕನಿಷ್ಠ ಕೂಲಿ ನೀಡಲಿ:

ನಾವು ಕನಿಷ್ಠ ಕೂಲಿ 21 ಸಾವಿರ ನೀಡಬೇಕೆಂಬ ಬೇಡಿಕೆ ಇಟ್ಟಿದ್ದೇವೆ. 2018 ವರದಿ ಪ್ರಕಾರ ದೇಶದಲ್ಲಿ ಈಗ 8 ರಿಂದ 12 ಸಾವಿರ ಕೂಲಿ ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ 12 ಸಾವಿರ ಸಿಗುತ್ತಿದೆ. ಆದರೆ ಕನಿಷ್ಠ ಪಿಂಚಣಿಯನ್ನು 10 ಸಾವಿರಕ್ಕೆ ನಿಗದಿ ಮಾಡಬೇಕೆಂಬ ಒತ್ತಾಯ ನಮ್ಮದಾಗಿದೆ. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ತರಬೇತಿ, ಅಪ್ರೆಂಟಿಸ್‌ ಎಂಬ ಹುದ್ದೆಗಳನ್ನೂ ತೆಗೆದು ಹಾಕಬೇಕು. ಯಾವುದೇ ಸರ್ಕಾರ ಬಂದರೂ ನೀತಿ ಒಂದೇ ಮಾಡಿ, ಬಣ್ಣ ಬದಲಿಸುತ್ತಾರೆ. ಈ ಸೂಕ್ಷ್ಮತೆಯನ್ನು ನಾವು ಅರಿಯಬೇಕು. ಮಾಲೀಕರು ಕಡಿಮೆ ಕೂಲಿ ನೀಡಿ ಹೆಚ್ಚಿನ ಕೆಲಸ ಮಾಡಿಸುತ್ತಾರೆ. ಯಾಕೆಂದರೆ ಅವರೆಲ್ಲರೂ ಕೇಂದ್ರ ಸರ್ಕಾರಕ್ಕೆ ವಂತಿಗೆ ನೀಡುತ್ತಾರೆ ಎಂದು ಪದ್ಮನಾಭರಾವ್‌ ಕಿಡಿಕಾರಿದರು.

ಕಾರ್ಮಿಕ ಮುಖಂಡ ಎಚ್‌.ಆರ್‌. ಶೇಷಾದ್ರಿ, ಸಿಎಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್‌. ಉಮೇಶ್‌, ಎಐಯುಟಿಯುಸಿ ಉಪಾಧ್ಯಕ್ಷ ಕೆ.ವಿ. ಭಟ್‌, ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಮುಖಂಡ ಎಚ್‌. ಬಾಲಕೃಷ್ಣ, ಜಿ.ಎನ್‌. ನಾಗರಾಜು ಇದ್ದರು.

ರಾಮ ಮಂದಿರವಲ್ಲ, ಗೋಡ್ಸೆ ಮಂದಿರ ಕಟ್ಟುತ್ತಾರೆ

ಅಂಬೇಡ್ಕರ್‌ ಭಾವಚಿತ್ರಕ್ಕೆ ಕಷ್ಟಪಟ್ಟು ಪುಷ್ಪಾರ್ಚನೆ ಮಾಡುವ ನರೇಂದ್ರ ಮೋದಿ ಮನುಸ್ಮೃತಿ ಜಾರಿಗೆ ತರಲು ಹೊರಟಿದ್ದಾರೆ. ಅಯೋಧ್ಯೆಯಲ್ಲಿ ಕಟ್ಟುವುದು ರಾಮ ಮಂದಿರವಲ್ಲ, ಗಾಂಧಿಯನ್ನು ಕೊಂದ ಗೋಡ್ಸೆ ಮಂದಿರವನ್ನು. ಎಂಪಿಗಳು ಗೋಡ್ಸೆಯನ್ನು ದೇಶಭಕ್ತನೆನ್ನುವ ಮಟ್ಟಕ್ಕೆ ಬಂದಿದ್ದಾರೆ. ಅವರೆಲ್ಲರೂ ಬ್ರಿಟಿಷ್‌ ಪರವಾಗಿದ್ದುಕೊಂಡು ಸ್ವಾತಂತ್ರ್ಯ ಬಯಸದ ಗೋಡ್ಸೆ ವಂಶಸ್ಥರು ಎಂದು ಅನಂತಸುಬ್ಬರಾವ್‌ ಜರಿದರು.

LIVE: ಮತ ಎಣಿಕೆ ಆರಂಭ, ಬಿಜೆಪಿಯದ್ದೇ ಪಾರಮ್ಯ

ಆಟೋಮೊಬೈಲ್‌ ಕ್ಷೇತ್ರದಲ್ಲಿ 3.5 ಲಕ್ಷ ಉದ್ಯೋಗ ನಷ್ಟವಾಗುವಂತೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಪ್ರಪಂಚ ಕಂಡ ಅತ್ಯುತ್ತ ಅರ್ಥಶಾಸ್ತ್ರಜ್ಞೆ. ಅಶೋಕ್‌ ಲೇಲ್ಯಾಂಡ್‌ನಂತ ಕಂಪನಿ ಚಾಸಿಸ್‌ ಪಡೆಯಲು ಕ್ಯೂನಿಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದಿದೆ ಎಂದು ಕಾರ್ಮಿಕರ ಮುಖಂಡ ಎಚ್‌.ವಿ. ಅನಂತಸುಬ್ಬರಾವ್‌ ಹೇಳಿದ್ದಾರೆ.

click me!