ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗರ್ಭಿಣಿ ಅಥವಾ ಬಾಣಂತಿಯರಿಗೆ 5000 ರು. ಸಹಾಯಧನ ನೀಡುವ ಯೋಜನೆ ರೂಪಿಸಿದೆ. ನೇರ ನಗದು ವರ್ಗಾವಣೆ ಮೂಲಕ ಇದನ್ನು ಮೂರು ಕಂತುಗಳಲ್ಲಿ ನೀಡಲಾಗುವುದು ಎಂದು ಮಾತೃತ್ವ ವಂದನಾ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿದೆ.
ಶಿವಮೊಗ್ಗ[ಡಿ.09]: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲೂಕಿನ ಹೊರಬೈಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನಮಂತ್ರಿ ಮಾತೃವಂದನ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಪೋಷಣ್ ಅಭಿಯಾನ ಆಯೋಜಿಸಲಾಗಿತ್ತು.
ಮೇಲ್ವಿಚಾರಕಿ ಸರಸ್ವತಿ ರೆಡ್ಡಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಗರ್ಭಿಣಿ ಅಥವಾ ಬಾಣಂತಿಯರಿಗೆ 5000 ರು. ಸಹಾಯಧನ ನೀಡುವ ಯೋಜನೆ ರೂಪಿಸಿದೆ. ನೇರ ನಗದು ವರ್ಗಾವಣೆ ಮೂಲಕ ಇದನ್ನು ಮೂರು ಕಂತುಗಳಲ್ಲಿ ನೀಡಲಾಗುವುದು. ಗರ್ಣಿಣಿಯರು ಅಂಗನವಾಡಿಗಳಲ್ಲಿ ನೋಂದಣಿಯಾದ 150 ದಿನಗಳಲ್ಲಿ ಮೊದಲ ಕಂತು ನೀಡಲಾಗುವುದು. ಕನಿಷ್ಠ ಆರೋಗ್ಯ ತಪಾಸಣೆ (ಆರು ತಿಂಗಳ ನಂತರ) ಎರಡನೇ ಕಂತು ನೀಡಲಾಗುವುದು. ಮಗು ಜನನದ ಬಳಿಕ ಮೊದಲನೇ ಹಂತದ ಚುಚ್ಚುಮದ್ದು ಪಡೆಯುವಾಗ ಮೂರನೇ ಕಂತು ನೀಡಲಾಗುವುದು. ಫಲಾನುಭವಿಗಳು ಇದರ ಪ್ರಯೋಜನ ಪಡೆಯುವಂತೆ ಕೋರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೌಷ್ಟಿಕ ಆಹಾರ ಸೇವನೆಯಿಂದ ಬಾಣಂತಿಯರು ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಜ್ಯೋತಿ, ಗ್ರಾಪಂ ಸದಸ್ಯೆ ಶಾರದಮ್ಮ, ವಿವಿಧ ಅಂಗನವಾಡಿಗಳ ಶಿಕ್ಷಕಿಯರಾದ ಅನಿತಾ, ರಾಧಾ.ಆರ್, ವಿನೋದ, ಸವಿತಾ, ಮಮತಾ, ರೂಪ ಹಾಗೂ ತಾಯಂದಿರು ಭಾಗವಹಿಸಿದ್ದರು.