ತುಮಕೂರು ಬ್ರೇಕಿಂಗ್: ಮಧುಗಿರಿ-ತಿರುಪತಿ ನೂತನ ಬಸ್‌ ಸೇವೆ ಆರಂಭ, ಟೈಮಿಂಗ್ಸ್ ಹೀಗಿದೆ

Published : Sep 02, 2026, 05:33 PM IST
madhugiri to tirupati

ಸಾರಾಂಶ

ಇದುವರೆಗೆ ತಿರುಪತಿಗೆ ಹೋಗಲು ಮಧುಗಿರಿ ಭಾಗದ ಜನರು ಖಾಸಗಿ ವಾಹನ ಅಥವಾ ಬೇರೆ ಊರುಗಳ ಬಸ್‌ಗಳನ್ನು ಅವಲಂಬಿಸಬೇಕಿತ್ತು. ಈಗ ನೇರ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ದೊರೆತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಬಹಳ ಅನುಕೂಲವಾಗಲಿದೆ.

ತುಮಕೂರು: ಜಿಲ್ಲೆಯ ಮಧುಗಿರಿ ಭಾಗದ ಭಕ್ತಾದಿಗಳಿಗೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿಗೆ ಮಧುಗಿರಿಯಿಂದ ನೇರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಈ ನೂತನ ಮಾರ್ಗಕ್ಕೆ ವಿಧಾನ ಪರಿಷತ್ ಸದಸ್ಯ (MLC) ರಾಜೇಂದ್ರ ಅವರು ಸ್ವತಃ ಬಸ್ ಚಲಾಯಿಸುವ ಮೂಲಕ ಚಾಲನೆ ನೀಡಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಾಲಕನ ಸೀಟಲ್ಲಿ ಎಂಎಲ್‌ಸಿ ರಾಜೇಂದ್ರ

ಮಧುಗಿರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಲ್‌ಸಿ ರಾಜೇಂದ್ರ ಅವರು ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಕೇವಲ ಹಸಿರು ನಿಶಾನೆ ತೋರುವುದು ಮಾತ್ರವಲ್ಲದೆ, ಸ್ವತಃ ಚಾಲಕನ ಸೀಟಿನಲ್ಲಿ ಕುಳಿತು ಬಸ್ ಚಲಾಯಿಸಿದರು. ಮಧುಗಿರಿಯ ಪ್ರಮುಖ ರಸ್ತೆಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಸ್ ಓಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಬಸ್ ಸಂಚಾರದ ಸಮಯ ಹೀಗಿದೆ

ಮಧುಗಿರಿ ಮತ್ತು ತಿರುಪತಿ ನಡುವೆ ಪ್ರತಿನಿತ್ಯ ಈ ಬಸ್ ಸಂಚರಿಸಲಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಸಮಯ ನಿಗದಿಪಡಿಸಲಾಗಿದೆ.

  • ಮಧುಗಿರಿಯಿಂದ ಹೊರಡುವುದು: ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ಮಧುಗಿರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ.
  • ತಿರುಪತಿ ತಲುಪುವುದು: ಅದೇ ದಿನ ಸಂಜೆ 5:30ಕ್ಕೆ ಬಸ್ ತಿರುಪತಿಯನ್ನು ತಲುಪಲಿದೆ.
  • ತಿರುಪತಿಯಿಂದ ಮಧುಗಿರಿಗೆ: ತಿರುಪತಿಯಿಂದ ಪ್ರತಿದಿನ ಬೆಳಗ್ಗೆ 8:00 ಗಂಟೆಗೆ ಬಸ್ ಮಧುಗಿರಿಯತ್ತ ಪ್ರಯಾಣ ಬೆಳೆಸಲಿದೆ.

ಭಕ್ತರಿಗೆ ಅನುಕೂಲ

ಇದುವರೆಗೆ ತಿರುಪತಿಗೆ ಹೋಗಲು ಮಧುಗಿರಿ ಭಾಗದ ಜನರು ಖಾಸಗಿ ವಾಹನ ಅಥವಾ ಬೇರೆ ಊರುಗಳ ಬಸ್‌ಗಳನ್ನು ಅವಲಂಬಿಸಬೇಕಿತ್ತು. ಈಗ ನೇರ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ದೊರೆತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಬಹಳ ಅನುಕೂಲವಾಗಲಿದೆ.

PREV
Read more Articles on
click me!

Recommended Stories

Gadaga: ಮಧ್ಯರಾತ್ರಿ, ಬಸ್‌ನಲ್ಲಿ ಸಿಕ್ತು ಕಂತೆ ಕಂತೆ ನೋಟು; ಮಾಲೀಕರಿಗೆ ಹಣ ಹಿಂದಿರುಗಿಸಿ ಸಾರಿಗೆ ಸಿಬ್ಬಂದಿ ಪ್ರಮಾಣಿಕತೆ
Bengaluru: 14 ವರ್ಷಗಳ ಕಾಯುವಿಕೆ ಅಂತ್ಯ, ಉದ್ಘಾಟನೆಗೆ ಸಿದ್ದವಾಯಿತು ಜಕ್ಕೂರು ರೈಲ್ವೆ ಮೇಲ್ಸೇತುವೆ!