Bengaluru: 14 ವರ್ಷಗಳ ಕಾಯುವಿಕೆ ಅಂತ್ಯ, ಉದ್ಘಾಟನೆಗೆ ಸಿದ್ದವಾಯಿತು ಜಕ್ಕೂರು ರೈಲ್ವೆ ಮೇಲ್ಸೇತುವೆ!

Published : Sep 02, 2026, 04:34 PM IST
Jakkur ROB

ಸಾರಾಂಶ

ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಭೂಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿದ್ದ ಈ ಸೇತುವೆ ಮುಂದಿನ ತಿಂಗಳು ಉದ್ಘಾಟನೆಯಾಗುವ ನಿರೀಕ್ಷೆಯಿದ್ದು, ಇದು ಯಲಹಂಕ ಕಡೆಗಿನ ಪ್ರಯಾಣಿಕರಿಗೆ ಸಮಯ ಮತ್ತು ದೂರವನ್ನು ಉಳಿಸಲಿದೆ.

ಕಳೆದ 12 ವರ್ಷಗಳ ಹಿಂದೆ ಶುರುವಾದ ರೈಲ್ವೆ ಮೇಲ್ಸೇತುವೆ ಕೊನೆಗೂ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಉದ್ಘಾಟನೆಯಾಗುವ ಎಲ್ಲಾ ಸಾಧ್ಯತೆಗಳು ಇದೆ. ಸತತವಾಗಿ ನೆನೆಗುದಿಗೆ ಬಿದಿದ್ದ ಜಕ್ಕೂರು ರೈಲ್ವೆ ಓವರ್ ಬ್ರಿಡ್ಜ್ (ಆರ್‌ಒಡಿ) ಸಾರ್ವಜನಿಕರ ಸೇವೆ ಸಿದ್ಧವಾಗಿದೆ. ಈ ಕುರಿತಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆರ್ಒಬಿ ಮೇಲ್ಸೇತುವೆ ನಿರ್ಮಾಣ ಕಾಮಗಾಗಿ ಅಂತಿಮ ಹಂತದಲ್ಲಿದ್ದು, ಈ ಮಾರ್ಗ ಬಳಕೆಗೆ ಬಂದರೆ ವಾಹನ ಸವಾರರಿಗೆ ಸಾಕಷ್ಟು ಸಮಯ ಉಳಿತಾಯ ಆಗಲಿದೆ ಎಂದು ತಿಳಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಪೋಸ್ಟ್

2019ರ ಆಗಸ್ಟ್ 23ರಂದು ಜಕ್ಕೂರಿನ ಈ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸಲು ಸ್ಥಳೀಯ ನಿವಾಸಿಗಳು ಸಹಿ ಅಭಿಯಾನವನ್ನು ಆರಂಭ ಮಾಡಿದ್ದರು. ಈ ವೇಳೆ ಸ್ಥಳೀಯರು ಕಳೆದ ಒಂದು ದಶಕದಿಂದ ಭೂಸ್ವಾಧಿನ ಸಮಸ್ಯೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಕಾರಣ ಸಮಸ್ಯೆಯಾಗಿತ್ತು ಎಂದು ಅಧಿಕಾರಿಗಳ ಗಮನ ಸೆಳೆದಿದ್ದರು. ಇದರ ನಡುವೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಂಜಿನಿಯರ್‌ಗಳು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಗಮನಿಸಬೇಕು ಎಂದು ಒತ್ತಾಯ ಮಾಡಿದ್ದರು.

ಈ ರೈಲ್ವೆ ಬ್ರಿಡ್ಜ್ ಪೂರ್ಣಗೊಂಡು ಸಾರ್ವಜನಿಕರ ಸೇವೆ ಲಭ್ಯವಾದರೆ, ಚಾಲಕರು ಯಾವುದೇ ಸಮಸ್ಯೆ ಇಲ್ಲದೆ ಯಲಹಂಕ ತಲುಪಲು ವರದಾನವಾಗಲಿದೆ. ಈಗ ಈ ಮಾರ್ಗದಲ್ಲಿ ಪ್ರಯಾಣಿಸಲು ವಾಹನ ಸವಾರರು ಐದು ಕಿಲೋ ಮೀಟರ್ ಸುತ್ತಿ ಬಳಸಿ ಪ್ರಯಾಣ ಮಾಡಬೇಕಿದೆ. ರೈಲ್ವೆ ಬ್ರಿಡ್ಜ್ ಪೂರ್ಣಗೊಂಡದರೆ, ಸವಾರರಿಗೆ ಮೂರು ಕಿಲೋ ಮೀಟರ್ ದೂರ ಉಳಿತಾಯವಾಗಲಿದೆ.

2012ರಲ್ಲಿ ಪ್ರಾರಂಭವಾದ ಈ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯಿಂದ ಸ್ಥಗಿತಗೊಂಡಿತ್ತು. ಮುಂದಿನ ಒಂದು ತಿಂಗಳಿನಲ್ಲಿ ಸೇತುವೆ ಸಾರ್ವಜನಿಕರಿಗೆ ಸಿದ್ಧವಾಗಲಿದೆ ಎಂದು ಜಿಬಿಎ ಸುನಿಲ್ ಕುಮಾರ್ ಎನ್ ತಿಳಿಸಿದ್ದಾರೆ. ಸೇತುವೆಯ ಅಂತಿಮ ಹಂತದ ಪರೀಕ್ಷೆ, ಲೋಡ್ ಪರೀಕ್ಷೆಯ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

PREV
Read more Articles on
click me!

Recommended Stories

Basavaraj Rayareddy: ಇಸ್ಲಾಂ ಪರ ಹೇಳಿಕೆ ಬೆನ್ನಲ್ಲೇ ವೇದಿಕೆಯಲ್ಲಿ ನಿಂತು ರಾಯರೆಡ್ಡಿ ಸಾವಿನ ಕುರಿತು ಮಾರ್ಮಿಕ ಮಾತು
ಬೆಂಗಳೂರಿನ ಪ್ರಸಿದ್ಧ ಕೆಆರ್‌ ಮಾರುಕಟ್ಟೆಗೆ ಇನ್ನುಂದೆ ಫ್ರೀ ಎಂಟ್ರಿ ಇಲ್ಲ, ಬರಲಿದೆ ಡಿಜಿಟಲ್‌ ಟೋಲ್‌ಗೇಟ್‌