ಮದ್ದೂರು (ಡಿ.11): ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್ ಅಭ್ಯರ್ಥಿ ಅಧಿಕ ಮತಗಳ ಅಂತರದಿಂದ ಗೆಲುವುದು ಖಚಿತ ಎಂದು ಶಾಸಕ ಡಿ.ಸಿ. ತಮ್ಮಣ್ಣ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆಯ ಸಿಡಿಎಸ್ (CDS) ಭವನದಲ್ಲಿದ್ದ 158 ಮತಗಟ್ಟೆಯಲ್ಲಿ ಪುರಸಭೆಯ ಜೆಡಿಎಸ್ (JDS) ಸದಸ್ಯರೊಂದಿಗೆ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ(mandya) ಜಿಲ್ಲೆ ಜೆಡಿಎಸ್ ಭದ್ರ ಕೋಟೆಯಾಗಿದೆ. ಜೆಡಿಎಸ್ (JDS) ಪಕ್ಷದ ಜನಪ್ರತಿನಿಧಿಗಳು ಕಾಂಗ್ರೆಸ್ (congress), ಬಿಜೆಪಿ (BJP) ಪಕ್ಷದ ಅಭ್ಯರ್ಥಿಗಳ ಯಾವುದೇ ಹಣ ಆಮಿಷಗಳಿಗೆ ಬಲಿಯಾಗದೆ ಜೆಡಿಎಸ್ ಅಭ್ಯರ್ಥಿ ಎನ್.ಅಪ್ಪಾಜಿ ಗೌಡ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ (Election) ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರಾ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಆಟಕ್ಕುಂಟು ಲೆಕ್ಕಿಲ್ಲ ಎನ್ನವಂತಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡ ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ. ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಪರಿಷತ್‌ನಲ್ಲಿ ಮಂಡ್ಯದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ್ದಾರೆ. ಈ ವಿಶ್ವಾಸದಿಂದ ಜನಪ್ರತಿನಿಧಿಗಳು ಮತ್ತೊಮ್ಮೆ ಅವರನ್ನು ಪರಿಷತ್ ಗೆ ಆರಿಸಿ ಕಳುಹಿಸುತ್ತಾರೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಹಾಗೂ ಜೆಡಿಎಸ್ ಪಕ್ಷದ ಪುರಸಭಾ ಸದಸ್ಯರು ಇದ್ದರು.
ನಂಬರ್ ಗೇಮ್‌ನಲ್ಲಿ ಫಲಿತಾಂಶ : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆದ ಚುನಾವಣೆ (election) ರಣರಂಗದಲ್ಲಿ ಜಯಭೇರಿಗಾಗಿ ಕಾಂಗ್ರೆಸ್(Congress) ಮತ್ತು ಜೆಡಿಎಸ್ (JDS) ರಣಭೇರಿಯನ್ನು ಮೊಳಗಿಸಿವೆ. ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನಿಟ್ಟುಕೊಂಡಿರುವ ಜೆಡಿ ಎಸ್ ಗೆಲುವಿನ ಗುರಿಯತ್ತ ಹೆಜ್ಜೆ ಇರಿಸಿದೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಗೆಲ್ಲುವ ಆಸೆಯಿಂದ ಬಿರುಸಿನಿಂದ ಮುನ್ನುಗ್ಗಿತ್ತು.
ಕೊನೆಯ ಘಳಿಗೆಯಲ್ಲಿ ಸೃಷ್ಟಿಯಾಗದ ನಂಬರ್ ಗೇಮ್‌ನೊಂದಿಗೆ ಗೆಲುವು ನಿರ್ಧಾರವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೊನೆಯ ಎರಡು ದಿನಗಳಲ್ಲಿ ನಡೆಯಬಹುದಾದ ಈ ನಂಬರ್ ಗೇಮ್‌ನಲ್ಲಿ ಗೆಲ್ಲುವವರು ಅದೃಷ್ಟಶಾಲಿ ಗಳಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಪಕ್ಷ ನಿಷ್ಠೆಯೂ ಚುನಾವಣೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡುತ್ತದೆ ಎನ್ನುವವರೂ ಇದ್ದಾರೆ. ಕಳೆದ ಬಾರಿ ಅಪ್ಪಾಜಿಗೌಡರು ಆಡಿದ ನಂಬರ್ ಗೇಮ್ ಅವರಿಗೆ ಸಕ್ಸಸ್ ತಂದು ಕೊಟ್ಟಿತ್ತು.
ಅದೇ ಮಾದರಿಯಲ್ಲಿ ಹೊಸ ನಂಬರ್‌ಗೇಮ್‌ನ್ನು ಈ ಚುನಾವಣೆಯಲ್ಲಿ (Election) ಪ್ರಯೋಗಿಸಿದ್ದಾರೆಯೇ, ಅದರ ಮೂಲಕವೇ ಯಶಸ್ಸು ಕಂಡುಕೊಳ್ಳುವ ನಿರೀಕ್ಷೆಯಲ್ಲಿ ದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ (Grama panchayat) ಜೆಡಿಎಸ್‌ನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆನ್ನುವು ದು ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಮಾತು. ಹಾಗಾಗಿ ಅಪ್ಪಾಜಿ ಗೌಡರ ಗೆಲುವಿನ ಹಾದಿ ಸುಗಮ ವಾಗಿದೆ ಎಂದು ಸುಲಭವಾಗಿ ಹೇಳಲಾಗುತ್ತಿಲ್ಲ. ಜೆಡಿಎಸ್‌ನೊಳಗೆ (JDS) ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳೂ ಕೇಳಿಬಂದಿರುವುದರಿಂದ ಪಕ್ಷದ ಮತ ಗಳನ್ನು ಹಿಡಿದಿಟ್ಟುಕೊಳ್ಳಲು ಅಪ್ಪಾಜಿಗೌಡರೂ ತೀ ವ್ರ ಶ್ರಮವೂ ಮುಖ್ಯವಾಗಿತ್ತು.
ಇದು ಜೆಡಿಎಸ್ ಗೆಲುವಿಗೆ ಹಿನ್ನಡೆಯಾಗಬಹುದೆಂಬ ಭಯವೂ ಕಾಡುತ್ತಿದೆ. ಜೆಡಿಎಸ್‌ನಲ್ಲಿ ಚುನಾವಣಾ (Election) ಸಾರಥ್ಯವನ್ನು ಯಾರೊಬ್ಬರೂ ವಹಿಸಿಕೊಳ್ಳದಿದ್ದರೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಜಿಲ್ಲಾ ನಾಯಕನಾಗಿ ಬಿಂಬಿತರಾದರು. ಜೆಡಿಎಸ್ ಶಾಸಕರು ಕೂಡ ಅವರವರ ಕ್ಷೇತ್ರಗಳಲ್ಲಿ ಪಕ್ಷದ ಮತಗಳನ್ನು ಬಲವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಅಲ್ಲದೆ, ಜೆಡಿಎಸ್ ಪರವಾಗಿರುವ ಮತಗಳು ಸುಲಭ ವಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಭರವಸೆ ಅವರಲ್ಲಿದೆ.