ಬಾಗಲಕೋಟೆ (ಮೇ.19): ಅಂದು ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದು, ಈಗ ರಾಹುಲ್ ಗಾಂಧಿಗೆ ದಿನವು ಮೋದಿ ಟೀಕಿಸುವುದೇ ದೊಡ್ಡ ಕೆಲಸವಾಗಿದೆ ಎಂದು ಶಾಸಕ ವೀರಣ ಚರಂತಿಮಠ ಹೇಳಿದರು.
ಬಾಗಲಕೋಟೆಯಲ್ಲಿಂದು ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ರಾಹುಲ್ ನಿತ್ಯವೂ ಮೋದಿ ಟೀಕಿಸುತ್ತಿದ್ದು, ಅವರಿಗಿನ್ನೂ ಮೆಚುರಿಟಿ ಬಂದಿಲ್ಲವೆಂದು ಹೇಳಿದರು.
undefined
ರಾಹುಲ್ ಗಾಂಧಿ ಅಮ್ಮನ ತವರೂರು ಇಟಲಿಯಲ್ಲಿ ಬರೀ 6 ಕೋಟಿ ಜನಸಂಖ್ಯೆ ಇದೆ. ಅಲ್ಲಿ ಕೋವಿಡ್ ನಿಂದ ಹಾದಿ ಬೀದಿಯಲ್ಲಿ ಹೆಣಗಳು ಬಿದ್ದಿದ್ದು ಎಲ್ಲರು ನೋಡಿದ್ದಾರೆ. 130 ಕೋಟಿ ಜನಸಂಖ್ಯೆ ಇರೋ ನಮ್ಮ ದೇಶದ ಬಗ್ಗೆ ಮಾತನಾಡುತ್ತಾರೆಂದು ಅಸಮಾಧಾನ ಹೊರಹಾಕಿದರು.
ಕೆಲಸ ಮಾಡಿ, ಇಲ್ಲದಿದ್ದರೆ ರಾಜೀನಾಮೆ ಕೊಡಿ : ಸಿಎಂ ವಿರುದ್ಧ ಯತ್ನಾಳ್ ಗರಂ
ಮೋದಿ ಅವರು ವ್ಯಾಕ್ಸಿನ್ ತಂದರೆ ನಾವೇ ನಮ್ಮ ಗಾಡಿಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರನ್ನ ಕರೆತಂದಿದ್ದೆವೆ. ಆಗಲೂ ಕಾಂಗ್ರೆಸ್ ನವರು ಮೋದಿ ವ್ಯಾಕ್ಸಿನ್, ಬಿಜೆಪಿ ವ್ಯಾಕ್ಸಿನ್ ಎಂದು ಅಪಪ್ರಚಾರ ಮಾಡಿದ್ದರು. ವಿಶ್ವದ 90 ಸಣ್ಣ ಸಣ್ಣ ರಾಷ್ಟ್ರಗಳಿಗೆ ಮೋದಿ ವ್ಯಾಕ್ಸಿನ್ ನೀಡಿದ್ದರು, ಆಗ ನಮ್ಮಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು ಎಂದು ಚರಂತಿಮಠ ಸಮರ್ಥನೆ ನೀಡಿದರು.
ಈಗ ನಮ್ಮ ದೇಶಕ್ಕೆ ಬೇರೆ ಬೇರೆ ರಾಷ್ಟ್ರಗಳು ಸಹಾಯಹಸ್ತ ಚಾಚಿವೆ. ಮೋದಿ ಅವರು ಜುಲೈ-ಅಕ್ಟೋಬರ್ ಒಳಗೆ ಎಲ್ಲರಿಗೂ ಲಸಿಕೆ ತಲುಪುವಂತೆ ನಿರ್ಣಯ ಕೈಗೊಂಡಿದ್ದಾರೆ ಎಂದು ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.