ಬಾಗಲಕೋಟೆ (ಸೆ.1) : ಗ್ರಾಮೀಣ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ಮುಚಖಂಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಗ್ರಾಮೀಣ ಕುಡಿಯುವ ನೀರು(Rural drinking water) ಮತ್ತು ನೈರ್ಮಲ್ಯ(Sanitation) ಉಪ ವಿಭಾಗದಿಂದ ಜಲ ಜೀವನ ಮಿಷನ್ ಯೋಜನೆ(Jal Jeevan Mission)ಅಡಿಯಲ್ಲಿ ಮುಚಖಂಡಿ(Muchakandi Village) ಗ್ರಾಮದ ಮನೆಗಳಿಗೆ ನಳ ಮತ್ತು ನೀರು ಒದಗಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ರೈತರಿಗಾಗಿ ಮತ್ತು ಅವರ ಖಾತೆಗೆ ನೇರವಾಗಿ ಪಿ.ಎಂ ಕಿಸಾನ್(PM kisan yojana) ಯೋಜನೆಯಿಂದ ಕೇಂದ್ರದಿಂದ 6 ಸಾವಿರ ಹಾಗೂ ರಾಜ್ಯ ಸರಾರದಿಂದ 4 ಸಾವಿರ ಸೇರಿ ಒಟ್ಟು 10 ಸಾವಿರ ರೂ. ದೊರೆಯುತ್ತಿದೆ. ಅದರ ಜೊತೆಗೆ ಬೆಳೆಹಾನಿ ಹಾಗೂ ವಿಮೆ, ಬೀಜ ಗೊಬ್ಬರ ದೊರೆಯುತ್ತಿದೆ ಎಂದರು.
ಬಾಗಲಕೋಟೆ: ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ಗ್ರಾಮ ವಿದ್ಯುತ್ ಪ್ರತಿನಿಧಿಗಳು..!
ರಾಜ್ಯದ ಎಲ್ಲ ಜನರಿಗೂ ಶುದ್ದ ಕುಡಿಯುವ ನೀರಿಗಾಗಿ ಆದ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಜಲಜೀವನ ಮಿಷನ್ ಯೋಜನೆ ಮೂಲಕ 131 ಲಕ್ಷ ರೂ.ಗಳ ವೆಚ್ಚದಲ್ಲಿ ಮನೆ ಮನೆಗೆ ನೀರು ಒದಗಿಸುವ ಕಾಮಗಾರಿ ಇದಾಗಿದೆ. ಇದರಿಂದ ಶುದ್ದ ಕುಡಿಯುವ ನೀರು ದೊರೆಯುವ ಮೂಲಕ ವಾಂತಿ ಬೇದಿಯಂತರ ರೋಗಗಳು ಕಡಿಮೆಯಾಗಲಿದೆ. ಗ್ರಾಮ ನಿಮ್ಮದು ಇಲ್ಲಿಯ ಅಭಿವೃದ್ದಿ ಕಾರ್ಯಗಳು ಕೂಡಾ ನಿಮ್ಮದಾಗಿದ್ದಾಗಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಮುಚಖಂಡಿ ಗ್ರಾಮ ನವನಗರಕ್ಕೆ ಹೊಂದಿಕೊಂಡ ಕೆರೆ ಹಾಗೂ ದೇವಸ್ಥಾನದಿಂದ ಪ್ರಸಿದ್ದಿ ಪಡೆದಿದೆ. ಸೌಕರ್ಯಗಳಿಗಾಗಿ ಮಾರುಕಟ್ಟೆ ವ್ಯಾಪಾರ ವಹಿವಾಟಕ್ಕೆ ಯಾವುದೇ ಸಮಸ್ಯೆಯಿಲ್ಲ. ಇಂದು ಪ್ರಾರಂಭಗೊಳ್ಳುವ ಕಾರ್ಯ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ತಿಳಿಸಿದರು. ನಂತರ ಮುಚಖಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಕೊಠಡಿ ನಿರ್ಮಾಣ ಕಾಮಗಾರಿಗೆ ಚರಂತಿಮಠ ಚಾಲನೆ ನೀಡಿದರು.
Bagalkote: ಮನ್ ಕಿ ಬಾತ್‌ನಲ್ಲಿ ಬಿಲ್‌ಕೆರೂರ ಗ್ರಾಮದ ಕೆರೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ಕಾರ್ಯಕ್ರಮದಲ್ಲಿ ಪ್ರಭುಸ್ವಾಮಿ ಸರಗಣಾಚಾರಿ, ಗ್ರಾ.ಪಂ ಅಧ್ಯಕ್ಷೆ ಗೀತಾ ಮಲ್ಲಾಪೂರ, ಶಿಗಿಕೇರಿ ಗ್ರಾ.ಪಂ ಅಧ್ಯಕ್ಷ ಬಸವರಾಜ ನಾಯಕ, ಗ್ರಾ.ಪಂ ಸದಸ್ಯರಾದ ಶಂಕ್ರಪ್ಪ ಸಿಮಿಕೇರಿ, ಸವಿತಾ ಪಾತ್ರೋಟ, ಬಾಳಮ್ಮ ಬನ್ನಿ, ರುಕ್ಮವ್ವ ಸೂಳಿಕೇರಿ, ಮಲ್ಲು ಕಾಳೆ, ಪರಶುರಾಮ ಪಾತ್ರೋಟ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಸಹಾಯಕ ಅಭಿಯಂತರ ಎ.ಎಸ್.ತೋಪಲಕಟ್ಟಿ, ಶ್ರೀಧರ ಮರೋಳ, ಗುತ್ತಿಗೆದಾರ ಬಿ.ರವಿತೇಜ ಸೇರಿದಂತೆ ಇತರರು ಉಪಸ್ಥಿತರಿದ್ದರು.