ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಅವಾಂತರ: ಸುಮಲತಾ ಅಂಬರೀಶ್‌

By Govindaraj S  |  First Published Sep 1, 2022, 9:24 PM IST

ಭಾರೀ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಅವಾಂತರಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸಂಸದ ಸುಮಲತಾ ಅಂಬರೀಶ್‌ ನೇರವಾಗಿ ಆರೋಪಿಸಿದರು. 


ಮಂಡ್ಯ (ಸೆ.01): ಭಾರೀ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಅವಾಂತರಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸಂಸದ ಸುಮಲತಾ ಅಂಬರೀಶ್‌ ನೇರವಾಗಿ ಆರೋಪಿಸಿದರು. ಹೆದ್ದಾರಿ ಕಾಮಗಾರಿ ನಿರ್ಮಾಣ ಸಮಯದಲ್ಲಿ ಅಧಿಕಾರಿಗಳು ಅಕ್ಕಪಕ್ಕದ ಜಿಲ್ಲೆಯ ಜನರು ಹಾಗೂ ರೈತರಿಗೆ ಆಗುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. 

ಅಲ್ಲಲ್ಲಿ ಅವೈಜ್ಞಾನಿಕವಾಗಿ ಮಾಡಿರುವ ಕೆಲಸಗಳಿಂದಾಗಿ ತೊಂದರೆಯಾಗುತ್ತಿದೆ. ನಾನು ಎರಡು ವರ್ಷಗಳಿಂದ ಈ ವಿಚಾರವಾಗಿ ಮಾತನಾಡುತ್ತಿದ್ದೇನೆ. ಹಲವು ಬಾರಿ ಅಧಿಕಾರಿಗಳ ಗಮನಸೆಳೆದಿದ್ದೇನೆ. ದಿಶಾ ಸಭೆಯಲ್ಲೂ ನಾಲ್ಕೈದು ಬಾರಿ ಚರ್ಚೆ ನಡೆಸಿದ್ದರೂ ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಂಡು ಸರಿಪಡಿಸಲಿಲ್ಲವೇಕೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. 

Tap to resize

Latest Videos

ಆಂತರಿಕ ಲೋಪಗಳು ಗೋಚರ: ಹೆದ್ದಾರಿ ಕಾಮಗಾರಿಯಲ್ಲಿ ಇದುವರೆಗೆ ನಮಗೆ ಸವೀರ್‍ಸ್‌ ರಸ್ತೆ, ಎಕ್ಸಿಟ್‌ ರಸ್ತೆ, ಅಂಡರ್‌ಪಾಸ್‌ನಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾತ್ರ ಕಣ್ಣಿಗೆ ಕಾಣುತ್ತಿತ್ತು. ಈಗ ಆಂತರಿಕವಾಗಿ ಎಲ್ಲೆಲ್ಲಿ ಲೋಪಗಳನ್ನು ಮಾಡಿದ್ದಾರೆ ಎನ್ನುವುದು ಮಳೆ ಸೃಷ್ಟಿಸಿರುವ ಅವಾಂತರದಿಂದ ಗೋಚರವಾಗುತ್ತಿದೆ ಎಂದರು. ಹೆ​ದ್ದಾರಿ ನಿರ್ಮಾಣದ ಕಾ​ಮ​ಗಾ​ರಿ​ಯಲ್ಲಿ ಹಣ ಉ​ಳಿ​ತಾಯ ಮಾ​ಡು​ವ ಸ​ಲು​ವಾಗಿ ಎಂಜಿ​ನಿ​ಯರ್‌ಗಳು ಕೆ​ಲ​ವು ಅ​ವೈ​ಜ್ಞಾ​ನಿಕ ನಿರ್ಧಾರ​ಗ​ಳನ್ನು ಕೈಗೊಂಡಿ​ದ್ದಾರೆ. ಕೆಳ ಮತ್ತು ಮೇಲು ಸೇ​ತು​ವೆ​ಗ​ಳನ್ನು ಸ​ರಿ​ಯಾಗಿ ನಿರ್ಮಿಸಿಲ್ಲ. 

ಮಂಡ್ಯ ಜನತೆಗೆ ಗೌರಿ-ಗಣೇಶ ಹಬ್ಬದ ಬಂಪರ್ ಗಿಫ್ಟ್ : Mysugar factory ಪುನರಾರಂಭ

ಈ ಹಿಂದೆ ರಸ್ತೆ ಬ​ದಿ​ಯಲ್ಲಿ ಚ​ರಂಡಿ​ಗ​ಳನ್ನು ನಿರ್ಮಿಸಿದ್ದು, ಹೆ​ದ್ದಾ​ರಿ​ಯನ್ನು ಎ​ತ್ತ​ರ​ದಲ್ಲಿ ಮಾಡಿ ಮಳೆ ಬಿ​ದ್ದರೆ ಎ​ರ​ಡೂ ಬ​ದಿ​ಯಲ್ಲಿ ನೀರು ಸ​ರಾ​ಗ​ವಾಗಿ ಹೋ​ಗು​ವಂತೆ ಮಾ​ಡ​ಲಾ​ಗುತ್ತಿತ್ತು. ಅಂತಹ ಎಲ್ಲ ವ್ಯ​ವ​ಸ್ಥೆ​ಯನ್ನೂ ಹಾ​ಳು​ಗೆ​ಡ​ವಿರುವ ಅಧಿ​ಕಾ​ರಿ​ಗಳು ಮತ್ತು ಇಂಜಿ​ನಿ​ಯ​ರ್‌ಗಳ ಬೇ​ಜ​ವಾ​ಬ್ದಾ​ರಿ​ತ​ನ​ದಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಿ​ಡಿ​ಕಾ​ರಿ​ದರು. ಹೆದ್ದಾರಿ ನಿರ್ಮಾಣದಲ್ಲಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿ ಕುರಿತಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ನಡೆಸುವೆ. ಅಲ್ಲದೇ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

21 ಪತ್ರಗಳಿಗೆ ಒಂದಕ್ಕೂ ಉತ್ತರವಿಲ್ಲ: ಹೆದ್ದಾರಿ ನಿರ್ಮಾಣ ಮಾಡುವ ಸಮಯದಲ್ಲಿ ಎಲ್ಲೆಲ್ಲಿ ಸಮಸ್ಯೆಯಾಗಿದೆ ಎನ್ನುವುದನ್ನು ಗುರುತಿಸಿ ಕಾವೇರಿ ನೀರಾವರಿ ನಿಗಮದವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ 21 ಪತ್ರ ಬರೆದಿದ್ದಾರೆ. ಆದರೆ, ಒಂದಕ್ಕೂ ಉತ್ತರ ನೀಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಗಮನವಿಲ್ಲವೆನ್ನುವುದು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗೊತ್ತಾಗುತ್ತದೆ ಎಂದು ದೂಷಿಸಿದರು.

ಐ ಡೋಂಟ್‌ ಕೇರ್‌: ಮಳೆ ನೀರು ಹೆದ್ದಾರಿಯಲ್ಲಿ ತುಂಬಿರುವುದಕ್ಕೆ ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ಕಾರಣ ಎಂದಿರುವ ಸಂಸದ ಪ್ರತಾಪ್‌ಸಿಂಹ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಬೇರೆ ಕ್ಷೇತ್ರದ ಜನಪ್ರತಿನಿಧಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಈ ವಿಚಾರದಲ್ಲಿ ಯಾರನ್ನೂ ಟಾರ್ಗೆಟ್‌ ಮಾಡಿಲ್ಲ. ರಾಜಕಾರಣವನ್ನೂ ಮಾಡುತ್ತಿಲ್ಲ. ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ, ಇಲಾಖಾಧಿಕಾರಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದರೆ ಐ ಡೋಂಟ್‌ ಕೇರ್‌. ನನಗೆ ಜನರ ಸಮಸ್ಯೆ ಪರಿಹಾರವಾಗುವುದು ಮುಖ್ಯ ಎಂದರು.

16 ಕಡೆ ಸಮಸ್ಯೆ: ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಯಾರೊಬ್ಬರ ಪ್ರಾಜೆಕ್ಟ್ ಅಲ್ಲ. ಇಲ್ಲಿ ಸಮಸ್ಯೆ ಎಲ್ಲಿ ಆಗಿದೆ, ಏಕೆ ಆಯಿತು. ಪರಿಹಾರವೇನು ಎನ್ನುವುದನ್ನು ಹುಡುಕಬೇಕು. ನನ್ನ ಗಮನಕ್ಕೆ ಬಂದಂತೆ ಈ ಯೋಜನೆಯಲ್ಲಿ 16 ಕಡೆ ಸಮಸ್ಯೆಯಾಗಿದೆ. ಹಿಂದೆ ಇದಕ್ಕಿಂತ ಹೆಚ್ಚು ಮಳೆಯಾಗಿದ್ದಾಗ ಈ ರೀತಿಯ ಸಮಸ್ಯೆಗಳಾಗಿರಲಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ ಎಂದರು.

ಫ್ರೀ ಗಣೇಶನಿಗಾಗಿ ಮುಗಿಬಿದ್ದ ಜನ: ಮಂಡ್ಯದಲ್ಲಿ ನೂಕುನುಗ್ಗಲು..!

ದೊಡ್ಡ ಯೋಜನೆಗಳನ್ನು ನಡೆಸುವ ಸಮಯದಲ್ಲಿ ತೊಂದರೆಗಳಾಗುವುದು ಸಹಜ. ಆದರೆ, ಇಲ್ಲಿ ಗೊತ್ತಿದ್ದೂ ಬೇಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಅವರು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಮಾಡಿರುವ ಕಾಮಗಾರಿಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ನಾನು ಸುಮ್ಮನಿರೋಲ್ಲ. ಸಾಂಕೇತಿಕವಾಗಿ ಯೋಜನೆ ಉದ್ಘಾಟನೆಗೆ ನನ್ನ ವಿರೋಧವಿಲ್ಲ. ಆದರೆ, ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಬೇಕೆನ್ನುವುದು ನನ್ನ ಆಗ್ರಹವಾಗಿದೆ ಎಂದರು.

click me!