Upper Bhadra Project: ತಿಪ್ಪಾರೆಡ್ಡಿ ಕೋಟ್ಯಂತರ ರು. ಕಮಿಷನ್‌?: ತನಿಖೆಗೆ ಬಿ.ಕಾಂತರಾಜ್ ಆಗ್ರಹ

By Kannadaprabha NewsFirst Published Feb 3, 2023, 8:28 AM IST
Highlights

ಶಾಸಕ ತಿಪ್ಪಾರೆಡ್ಡಿ ಅವರ ಮೇಲೆ ಭ್ರಷ್ಟಾಚಾರದ ಚಾರ್ಜ್‌ಶೀಟ್ ಸಲ್ಲಿಕೆ ಕಾರ್ಯವನ್ನು ಮತ್ತಷ್ಟುವಿಸ್ತೃತಗೊಳಿಸಿರುವ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್‌ ಭದ್ರಾ ಮೇಲ್ದಂಡೆಯಡಿ ಕಾರ್ಯಾದೇಶವಿಲ್ಲದೇ ಗುತ್ತಿಗೆದಾರರು ಕೆಲಸ ಆರಂಭಿಸಿರುವ ಹೊಸ ಪ್ರಕರಣವೊಂದನ್ನು ಹೆಕ್ಕಿ ತೆಗೆದಿದ್ದಾರೆ. ಈ ಕಾಮಗಾರಿಗಳಲ್ಲಿ ಶಾಸಕ ತಿಪ್ಪಾರೆಡ್ಡಿ 8 ರಿಂದ 10 ಕೋಟಿ ರುಪಾಯಿ ಕಮಿಷನ್‌ ಪಡೆದಿರುವ ಶಂಕೆಗಳಿವೆ. ಹಾಗಾಗಿ ಸಮಗ್ರ ತನಿಖೆಗೆ ಒಳಡಿಸುವ ಅಗತ್ಯವಿದೆ ಎಂದಿದ್ದಾರೆ.

ಚಿತ್ರದುರ್ಗ (ಫೆ.3) : ಶಾಸಕ ತಿಪ್ಪಾರೆಡ್ಡಿ ಅವರ ಮೇಲೆ ಭ್ರಷ್ಟಾಚಾರದ ಚಾರ್ಜ್‌ಶೀಟ್ ಸಲ್ಲಿಕೆ ಕಾರ್ಯವನ್ನು ಮತ್ತಷ್ಟುವಿಸ್ತೃತಗೊಳಿಸಿರುವ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್‌ ಭದ್ರಾ ಮೇಲ್ದಂಡೆಯಡಿ ಕಾರ್ಯಾದೇಶವಿಲ್ಲದೇ ಗುತ್ತಿಗೆದಾರರು ಕೆಲಸ ಆರಂಭಿಸಿರುವ ಹೊಸ ಪ್ರಕರಣವೊಂದನ್ನು ಹೆಕ್ಕಿ ತೆಗೆದಿದ್ದಾರೆ. ಈ ಕಾಮಗಾರಿಗಳಲ್ಲಿ ಶಾಸಕ ತಿಪ್ಪಾರೆಡ್ಡಿ 8 ರಿಂದ 10 ಕೋಟಿ ರುಪಾಯಿ ಕಮಿಷನ್‌ ಪಡೆದಿರುವ ಶಂಕೆಗಳಿವೆ. ಹಾಗಾಗಿ ಸಮಗ್ರ ತನಿಖೆಗೆ ಒಳಡಿಸುವ ಅಗತ್ಯವಿದೆ ಎಂದಿದ್ದಾರೆ.

ಈ ಸಂಬಂಧ ಕಾರ್ಯಾದೇಶವಿಲ್ಲದೆ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಜಿಪಿಎಸ್‌ ಪೋಟೋ ತೆಗೆದು ಗುರುವಾರ ಜಿಲ್ಲಾಧಿಕಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್‌ಗೆ ದೂರು ಸಲ್ಲಿಸಿರುವ ಕಾಂತರಾಜ್‌, ಟೆಂಡರ್‌ ರದ್ದುಪಡಿಸುವಂತೆ ಕೋರಿದ್ದಾರೆ. ಈ ಕಾಮಗಾರಿ ಆರಂಭಿಸುವುದರ ಹಿಂದೆ ಶಾಸಕ ತಿಪ್ಪಾರೆಡ್ಡಿ ಕೈವಾಡವಿರುವ ಸಾಧ್ಯತೆಗಳಿವೆ ಎಂದಿದ್ದಾರೆ.

ರೈತರು ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಮೋದಿ ಬರಲಿಲ್ಲ; ಈಗ ಬರ್ತಿರೋದು ಯಾಕೆ? ಎಚ್‌ಡಿಕೆ

ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಇ ಪ್ರಕ್ಯೂರ್‌ ಮೆಂಟ್‌ ಅಡಿ 20-12-2022 ರಂದು ಒಟ್ಟು 40 ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದ್ದು ಅರ್ಜಿ ಸಲ್ಲಿಕೆಗೆ 27 ಕಡೇ ದಿನಾಂಕವಾಗಿತ್ತು. ಚಿತ್ರದುರ್ಗ ನಗರ ಸೇರಿ ವಿಧಾನಸಭೆಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿ ಇರುವಾಗಲೇ, ಯಾವುದೇ ಬಗೆ ಕಾರ್ಯಾದೇಶವಿಲ್ಲದೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ನಿಯಮಬಾಹಿರವಾಗಿದೆ.

ಭದ್ರಾ ಮೇಲ್ದಂಡೆ ಕಚೇರಿಯಿಂದ ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ನೀಡಲಾಗಿಲ್ಲ. ಹೀಗಿದ್ದರೂ ಗುತ್ತಿಗೆದಾರರು ಅನಧಿಕೃತವಾಗಿ ಕಾಮಗಾರಿ ಆರಂಭ ಮಾಡಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟಿದೆ. ಕಾರ್ಯಾದೇಶವಿಲ್ಲದೇ ಕಾಮಗಾರಿ ಪ್ರಾರಂಭ ಮಾಡಲು ಅವಕಾಶ ಮಾಡಿಕೊಟ್ಟಿರುವ ಭದ್ರಾ ಮೇಲ್ದಂಡೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹಾಗೂ ಕಾರ್ಯಾದೇಶವಿಲ್ಲದೇ ಕೆಲಸ ಪ್ರಾರಂಭ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಭ್ರಷ್ಟಾಚಾರವಲ್ಲದೇ ಮತ್ತಿನ್ನೇನು ?

ಜಿಲ್ಲಾಧಿಕಾರಿ ಹಾಗೂ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್‌ಗೆ ಲಿಖಿತ ದೂರು ಸಲ್ಲಿಸಿದ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತರಾಜ್‌, ಕಾರ್ಯಾದೇಶವಿಲ್ಲದೇ ಗುತ್ತಿಗೆದಾರರು ಕಾಮಗಾರಿ ಅರಂಭಿಸಿರುವುದರ ಹಿಂದೆ ಭ್ರಷ್ಚಾಚಾರದ ವಾಸನೆ ಇದೆ. ಟೆಂಡರ್‌ ಯಾರಿಗೆ ಆಗಿದೆ ಎಂದು ಗೊತ್ತಾಗುವ ಮೊದಲೇ ಕಾಮಗಾರಿ ಆರಂಭಿಸುವುದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ.

ಕುಡಿವ ನೀರಿನಂತಹ ತುರ್ತು ಕಾಮಗಾರಿ ನಿರ್ವಹಣೆಯಲ್ಲಿ ಘಟನೋತ್ತರ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ. ಆದರೆ ಇವ್ಯಾವೂ ಕೂಡಾ ತುರ್ತು ಅಲ್ಲ. ಕಾರ್ಯದೇಶ ಕೊಡುವ ಮುಂಚೆಯೇ ರಸ್ತೆಗಳ ಅಗೆದ ಮರಳು, ಜಲ್ಲಿ ಸಂಗ್ರಹಿಸಲಾಗಿದೆ. ನಿವಾಸಿಗಳು ಕಳೆದ ಹದಿನೈದು ದಿನಗಳಿಂದ ಗುಂಡಿ ಬಿದ್ದ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ ಎಂದು ದೂರಿದರು.

ಕಾರ್ಯಾದೇಶವಿಲ್ಲದೇ ರಸ್ತೆ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗ ಅದ್ಹೇಗೆ ಧೈರ್ಯ ಬರುತ್ತದೆ. ಈ ತರಹದ ಕಾಮಗಾರಿಗಳ ನಿರ್ವಹಿಸಿಯೇ ಗುತ್ತಿಗೆದಾರ ಸಂತೋಷ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡ್ದಿದ್ದಾನೆ. ಟೆಂಡರ್‌ ಬೇರೆಯವರಿಗೆ ಆದರೆ ಈ ಗುತ್ತಿಗೆದಾರ ಎಲ್ಲಿಗೆ ಹೋಗಬೇಕು. ಆ ಮೊತ್ತ ಯಾರು ಪಾವತಿಸುತ್ತಾರೆ ಎಂದು ಪ್ರಶ್ನಿಸಿದರು.

CHITRADURGA:ಎಗ್ಗಿಲ್ಲದೇ ನಡೆಯುತ್ತಿದೆ ಮಣ್ಣು ಗಣಿಗಾರಿಕೆ, ಬ್ರೇಕ್ ಹಾಕುವಂತೆ ಸ್ಥಳೀಯರಿಂದ ಆಗ್ರಹ

ಶಾಸಕ ತಿಪ್ಪಾರೆಡ್ಡಿ ಅವರು ಎಲ್ಲ ಗುತ್ತಿಗೆದಾರ ಕರೆದು ಕೂರಿಸಿಕೊಂಡು ಕಾಮಗಾರಿಗಳ ಅವರೇ ಹಂಚಿರುವ ಸಾಧ್ಯತೆಗಳಿವೆ. ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ತಿಪ್ಪಾರೆಡ್ಡಿ ಅವರ ಕಣ್ಣಿಗೆ ಬೀಳದೆ ಯಾರೊಬ್ಬ ಗುತ್ತಿಗೆದಾರ ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹದ್ದೇ ಕಾಮಗಾರಿ ಇವರೇ ನಿರ್ವಹಿಸಬೇಕೆಂಬುದು ಹೇಗೆ ಸಾಧ್ಯವಾಗುತ್ತದೆ. ಜಿಲ್ಲಾಡಳಿತ ತಕ್ಷಣವೇ ಮಧ್ಯ ಪ್ರವೇಶಿಸಿ ಟೆಂಡರ್‌ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

click me!