ಕಿತ್ತೂರು: ಶಾಸಕ ರಾಜು ಕಾಗೆ ಸಹೋದರನ ಪುತ್ರನ ಕಾರು ಅಪಘಾತ, ಬೈಕ್ ಸವಾರ ಸಾವು

ಕಿತ್ತೂರು ಬಳಿ ನಡೆದ ಕಾರು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರ ಶ್ರೀಪ್ರಸಾದ್ ಕಾಗೆ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಗೋಕಾಕ್‌ನ ಬಸವರಾಜ ಪುಡಕಲಕಟ್ಟಿ ಸಾವನ್ನಪ್ಪಿದ್ದಾರೆ.


ಕಿತ್ತೂರು (ಎ.2): ಶಾಸಕ ರಾಜು ಕಾಗೆ ಸಹೋದರನ ಪುತ್ರ  ಪ್ರಯಾಣಿಸುತ್ತಿದ್ದ  ಕಾರು ಅಪಘಾತದಲ್ಲಿ ಬೈಕ್‌ ಸವಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.  ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯ, ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದ ಘಟನೆಯಲ್ಲಿ ಶಾಸಕ ರಾಜು ಕಾಗೆ ಸಹೋದರನ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ   ಕಾರು ಅಪಘಾತವಾಗಿ ಗೋಕಾಕ್‌ನ ಬಸವರಾಜ ಪುಡಕಲಕಟ್ಟಿ (22) ದುರ್ಮರಣಕ್ಕೀಡಾಗಿದ್ದಾರೆ.

Viral Video: ಚಲಿಸುತ್ತಿದ್ದ ಟ್ರೇನ್‌ಗೆ ಶ್ವಾನವನ್ನು ಹತ್ತಿಸುವ ಪ್ರಯತ್ನ, ರೈಲು ಚಕ್ರದಡಿ ಸಿಕ್ಕಿಬಿದ್ದ ನಾಯಿ!

Latest Videos

ಮೃತ  ಬಸವರಾಜು ಮತ್ತು ಇಬ್ಬರು ಸ್ನೇಹಿತರು ಬೆಳಗಾವಿಯಿಂದ ಕಿತ್ತೂರಿಗೆ ಕೆಲಸಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದ  ವೇಳೆ ಈ ದುರಂತ ನಡೆದಿದೆ. ಅಪಘಾತದಲ್ಲಿ ಸಣ್ಣವಿಠ್ಠಲ್ ದುರದುಂಡಿ ಮತ್ತು ನಿಂಗಪ್ಪ ಹೆಬ್ಬಾಳ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

CHITRADURGA: ಹೆದ್ದಾರಿಯಲ್ಲೇ 15 ಪಲ್ಟಿ ಹೊಡೆದ ಕಾರ್‌, ಇಬ್ಬರು ಮಕ್ಕಳು ಸೇರಿ ಮೂವರ ಸಾವು!

click me!