ಶಾಸಕ ಪಿಟಿಪಿ ಸೇರಿ ಮೂವರಿಗೆ ಕೋವಿಡ್‌ ಸೋಂಕು

By Kannadaprabha News  |  First Published Jul 17, 2020, 9:22 AM IST

ಹರಪನಹಳ್ಳಿ ತಾಲೂಕಿನಲ್ಲಿ ಗುರುವಾರ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಸೇರಿದಂತೆ ಮೂವರಿಗೆ ಸೊಂಕು ದೃಢಪಟ್ಟಿದೆ. ಶಾಸಕರು ಹರಪನಹಳ್ಳಿಯಲ್ಲಿಯೇ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದು, ಇದೀಗ ಸೋಂಕು ದೃಢಪಟ್ಟಿದೆ.


ಬಳ್ಳಾರಿ(ಜು.17): ಹರಪನಹಳ್ಳಿ ತಾಲೂಕಿನಲ್ಲಿ ಗುರುವಾರ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಸೇರಿದಂತೆ ಮೂವರಿಗೆ ಸೊಂಕು ದೃಢಪಟ್ಟಿದೆ. ಶಾಸಕರು ಹರಪನಹಳ್ಳಿಯಲ್ಲಿಯೇ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದು, ಇದೀಗ ಸೋಂಕು ದೃಢಪಟ್ಟಿದೆ.

ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಗ್ಯದಲ್ಲಿ ಯಾವುದೇ ರೀತಿ ಏರುಪೇರು ಕಂಡುಬಂದಿಲ್ಲ. ಮುಂಜಾಗ್ರತೆಗಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬ ವರ್ಗದವರು ದೃಢಪಡಿಸಿದ್ದಾರೆ.

Tap to resize

Latest Videos

2ನೇ ದಿನ ಕಟ್ಟು​ನಿಟ್ಟಿನ ಲಾಕ್‌ಡೌನ್: 9 ಜಿಲ್ಲೆಗಳಲ್ಲಿ ಬಂದೋಬಸ್ತ್ ಬಿಗಿ ಮಾಡಿದ ಪೊಲೀ​ಸರು

ಪಟ್ಟಣದ ಪಿ.ಟಿ. ಪರಮೇಶ್ವರನಾಯ್‌್ಕ ಅವರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಸುತ್ತಲ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ಪುರಸಭೆ ಸಿಬ್ಬಂದಿ ಆಚಾರ ಬಡಾವಣೆಯ ಶಾಸಕರ ನಿವಾಸದ ಸುತ್ತ ಸ್ಯಾನಿಟೈಸ್‌ ಮಾಡಿದ್ದಾರೆ.

ಪಟ್ಟಣದ ಪಠಾಣಗೇರಿಯ 18 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಪಟ್ಟಣದಲ್ಲಿ ಬೀದಿ ಬದಿ ಹಣ್ಣು ತರಕಾರಿ ವ್ಯಾಪಾರಿಗಳ ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಅದರಲ್ಲಿ ಈ ವ್ಯಕ್ತಿಯೂ ಒಬ್ಬರಾಗಿದ್ದರು.

ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್‌.ಅಶೋಕ್‌

ಇನ್ನೊಬ್ಬ ಕೊಮಾರನಹಳ್ಳಿ ಗ್ರಾಮದಲ್ಲಿ 32 ವರ್ಷದ ವ್ಯಕ್ತಿಗೆ ಕೋವಿಡ್‌ ದೃಢಪಟ್ಟಿದೆ. ಬೆಂಗಳೂರಿನಿಂದ ಆಗಮಿಸಿದ್ದ ಅವರ ಗಂಟಲು ದ್ರವ ಪರೀಕ್ಷೆಯಿಂದ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಗುರುತು ಕಾರ್ಯವನ್ನು ಶಿಕ್ಷಣ ಇಲಾಖೆಯವರು ಮಾಡುತ್ತಿದ್ದಾರೆ ಎಂದು ತಹಸೀಲ್ದಾರ ಅನಿಲ್‌ ಕುಮಾರ ತಿಳಿಸಿದ್ದಾರೆ.

click me!