ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕುಮಾರ್ ಬಂಗಾರಪ್ಪ

By Govindaraj S  |  First Published Nov 27, 2022, 1:00 AM IST

ಗುತ್ತಿಗೆದಾರೊಂದಿಗೆ ಶಾಮೀಲಾಗಿದ್ದೀರಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಆನವಟ್ಟಿಚಿಕ್ಕೇರೂರು ರಸ್ತೆ ಗುಂಡಿ-ಗೊಟರುಗಳಿಂದ ಕೂಡಿ, ರಸ್ತೆ ಸಂಚಾರಕ್ಕೆ ಸಂಚಕಾರ ತಂದಿದೆ ಎಂದು ಶಾಸಕ ಕುಮಾರ ಬಂಗಾ​ರಪ್ಪ ಲೋಕೋಪಯೋಗಿ ಅಭಿಯಂತರ ಉಮಾ ನಾಯಕ್‌ರನ್ನು ತರಾಟೆಗೆ ತೆಗೆದುಕೊಂಡರು.


ಸೊರಬ (ನ.27): ಗುತ್ತಿಗೆದಾರೊಂದಿಗೆ ಶಾಮೀಲಾಗಿದ್ದೀರಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಆನವಟ್ಟಿಚಿಕ್ಕೇರೂರು ರಸ್ತೆ ಗುಂಡಿ-ಗೊಟರುಗಳಿಂದ ಕೂಡಿ, ರಸ್ತೆ ಸಂಚಾರಕ್ಕೆ ಸಂಚಕಾರ ತಂದಿದೆ ಎಂದು ಶಾಸಕ ಕುಮಾರ ಬಂಗಾ​ರಪ್ಪ ಲೋಕೋಪಯೋಗಿ ಅಭಿಯಂತರ ಉಮಾ ನಾಯಕ್‌ರನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಡಾ.ರಾಜ್‌ ರಂಗ ಮಂದಿರದಲ್ಲಿ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತ​ನಾ​ಡಿದ ಅವರು, ಜನಸಂಕಲ್ಪ ಯಾತ್ರೆಗೆ ಸಿಎಂ ಅವ​ರು ತಾಲೂಕಿನ ಆನವಟ್ಟಿಗೆ ಆಗಮಿಸುವ ಅರಿವಿದ್ದರೂ ಸಹ ಒಂದು ತಿಂಗಳ ಮುಂಚೆಯೇ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡುವಂತೆ ತಾಕೀತು ಮಾಡಿದ್ದೆ. ಆ​ದರೂ ಎಚ್ಚೆತ್ತುಕೊಳ್ಳದ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದೀರಿ. ಇದರ ಪರಿ​ಣಾಮ ಎದು​ರಿ​ಸ​ಬೆ​ಕಾ​ಗು​ತ್ತದೆ. ಪ್ರತಿನಿತ್ಯ ಅಲ್ಲಿನ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಹೇಳಿದರೂ ಗಮನ ನೀಡುತ್ತಿಲ್ಲ ಎಂದು ಹರಿಹಾಯ್ದರು.

Tap to resize

Latest Videos

ಅಬ್ಬಬ್ಬಾ ಶಿವಮೊಗ್ಗ ಎಸ್‌ಪಿಗೆ ಎಂಥ ಟೆನ್ಶನ್ ಬಂತಪ್ಪಾ: ಹೆಣ್ಣು ಹುಡುಕಿಕೊಡಿ ಎಂದು ಯುವಕನ ಪತ್ರ

ಮಾವಲಿ ಉಮಾಮಹೇಶ್ವರ ಪ್ರೌಢಶಾಲೆ ಸಹ ಶಿಕ್ಷಕ ಅರುಣಕುಮಾರ್‌ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಜೊತೆಗೂಡಿ ಶಾಲೆಗೆ ಸಂಸದರ ಅನುದಾನ ಕೇಳಲು ಹೋಗಿದ್ದಾರೆ ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಕಿರಣಕುಮಾರ್‌ ಸಭೆ ಗಮನಕ್ಕೆ ತಂದಾಗ ಸಿಡಿಮಿಡಿಗೊಂಡ ಶಾಸಕರು, ಸರ್ಕಾರಿ ವೇತನ ಪಡೆಯುತ್ತಿರುವ ಶಿಕ್ಷಕರು ಯಾರನ್ನು ಕೇಳಿ ಶಾಲೆಗೆ ರಜೆ ಹಾಕಿದ್ದಾರೆ? ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ಅವರಿಗೆ ಸೂಚಿಸಿದರು.

ತಾಲೂಕಿನಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ ಚಂದ್ರಗುತ್ತಿ ಆಸ್ಪತ್ರೆಯನ್ನು 30 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಲಾಗಿದ್ದು, ಮೂಲ ಸೌಲಭ್ಯಗಳ ಕೊರತೆ ಎದುರಾಗದಂತೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ದೊರೆಯುವಂತೆ ನೋಡಿಕೊಳ್ಳಲು ತಾಲೂಕು ವೈದ್ಯಾಧಿಕಾರಿ ಡಾ.ಪ್ರಭು ಸಾಹುಕರ್‌ಗೆ ತಿಳಿಸಿದರು.

ಬೇನಾಮಿ ವ್ಯಕ್ತಿಗಳ ಹೆಸರಿಗೆ ವೇತನ ವರ್ಗಾವಣೆ ಚರ್ಚೆ, ವರದಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ: ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್‌, ತಮ್ಮ ಪುತ್ರಿ ಸೇರಿದಂತೆ 5 ಜನರ ಬ್ಯಾಂಕ್‌ ಖಾತೆಗೆ ಕಾನೂನು ಬಾಹಿರವಾಗಿ ವೇತನ ಪಾವತಿ ಮಾಡಿಸಿದ್ದು, ಪ್ರಾಂಶುಪಾಲರ ವಿರುದ್ಧ ಸೂಕ್ತ ತನಿಖೆ ನಡೆಸಲು ಸಂಬಂಧಪಟ್ಟಇಲಾಖೆಗೆಯಿಂದ ವರದಿ ಪಡೆಯುವಂತೆ ಕುಮಾರ್‌ ಬಂಗಾರಪ್ಪ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಕುಮಾರ್‌ಗೆ ಸೂಚಿಸಿದರು.

ಕಾಲೇಜಿನಲ್ಲಿ ಕಾರ್ಯಭಾರ ಇಲ್ಲದಿದ್ದರೂ ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಬೇನಾಮಿ ವ್ಯಕ್ತಿಗಳ ಖಾತೆಗೆ ವೇತನ ಪಾವತಿ ಮಾಡಿರುವುದು ಅಕ್ಷಮ್ಯ ಅಪರಾಧ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್‌ ಕಂಪ್ಯೂಟರ್‌ ಆಪರೇಟರ್‌ ಹುದ್ದೆ ಸೃಷ್ಟಿಸಿ ತಮ್ಮ ಪತ್ನಿ ಖಾತೆಗೆ ವೇತನ ವರ್ಗಾಯಿಸಿದ್ದಾರೆ. ಸರ್ಕಾರದ ಹಣವನ್ನು ಮನಸ್ಸಿಗೆ ಬಂದಂತೆ ಲೂಟಿ ಹೊಡೆಯುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಗೆ ವರದಿ ನೀಡಲು ನಿರ್ಣಯಕೈಗೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ

ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಕುಮಾರ್‌, ಜಿಲ್ಲಾ ಪಂಚಾಯಿತಿ ಎಂಜನಿಯರ್‌ ಯಶೋಧರ, ಲೋಕೋಪಯೋಗಿ ಇಲಾಖೆ ಎಂಜನಿಯರ್‌ ಉಮಾ ನಾಯಕ್‌, ಬಿಇಒ ರಾಮಲಿಂಗಯ್ಯ, ಕಾರ್ಮಿಕ ನಿರೀಕ್ಷಕ ಭೀಮೇಶ್‌, ಪುರಸಭಾ ಸದಸ್ಯರಾದ ಎಂ.ಡಿ. ಉಮೇಶ್‌, ಪ್ರಭು ಮೇಸ್ತ್ರಿ, ಯೂಸಫ್‌ ಸಾಬ್‌, ಕಿರಣಕುಮಾರ್‌ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

click me!