ನಾನು ಅಧಿಕಾರದಲ್ಲಿ ಇಲ್ಲದೆ ಇದ್ದರೂ ಸಹ ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನನಗೆ ಅಭೂತಪೂರ್ವ ಸ್ವಾಗತ ನೀಡಿ, ಗೌರವಿಸಿದ್ದೀರಿ ಎಂದಿಗೂ ಸಹ ನಿಮಗೆ ನಾನು ಚಿರಋಣಿಯಾಗಿದ್ದೇನೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಂಜನಗೂಡು (ನ.26): ನಾನು ಅಧಿಕಾರದಲ್ಲಿ ಇಲ್ಲದೆ ಇದ್ದರೂ ಸಹ ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನನಗೆ ಅಭೂತಪೂರ್ವ ಸ್ವಾಗತ ನೀಡಿ, ಗೌರವಿಸಿದ್ದೀರಿ ಎಂದಿಗೂ ಸಹ ನಿಮಗೆ ನಾನು ಚಿರಋಣಿಯಾಗಿದ್ದೇನೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ತಾಲೂಕಿನ ಯಡಿಯಾಲ ಗ್ರಾಮದಲ್ಲಿ ಹುರಾ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕ್ಷೇತ್ರಕ್ಕೆ ಹೊಸಬನಲ್ಲ, 1985 ರಲ್ಲಿ ಶಾಸಕನಾಗಿದ್ದಾಗ ನಂಜನಗೂಡು ಮತ್ತು ನರಸೀಪುರವನ್ನು ಪ್ರತಿನಿಧಿಸಿದ್ದೇನೆ. ಆಗ ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿ ನನಗೆ ಸೇರುತ್ತಿತ್ತು. ಅಲ್ಲದೆ ಆರೋಗ್ಯ ಸಚಿವನಾಗಿದ್ದ ವೇಳೆ, ಗ್ರಾಮೀಣಾಭಿವೃದ್ದಿ ಸಚಿವನಾಗಿದ್ದಾಗಲೂ ಸಹ ತಾಲೂಕಿನಲ್ಲಿ ಪ್ರವಾಸ ಮಾಡಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ನಾನು ಉಸ್ತುವಾರಿ ಸಚಿವನಾಗಿದ್ದ ವೇಳೆ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಯನ್ನೂ ಬಿಡದೆ ಪ್ರವಾಸ ಮಾಡಿ ಅಭಿವೃದ್ದಿ ಕೆಲಸ ಮಾಡಿದ್ದೇನೆ, ಈಗಲೂ ನಾನು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಜನರು ಮಾತನಾಡಿ, ಸ್ಮರಿಸುತ್ತಿದ್ದಾರೆ. ಅಲ್ಲದೆ ಸೋತಿದ್ದರೂ ಸಹ ಮುಖ್ಯಮಂತ್ರಿಗಳು ಕರೆದು ಸನ್ಮಾನ ಮಾಡಿರುವುದು ನಾನೇ ಕರ್ನಾಟಕದಲ್ಲಿ ಮೊದಲಿಗನಾಗಿದ್ದೇನೆ. ಜೊತೆಗೆ ಜೆಡಿಎಸ್, ಬಿಜೆಪಿಯವರೂ ಸಹ ಎಚ್.ಸಿ. ಮಹದೇವಪ್ಪ ಇದ್ದಾಗ ಕೆಲಸ ಮಾಡಿದ್ದಾರೆಂದು ಸ್ಮರಿಸಿ ಬೆನ್ನುತಟ್ಟುತ್ತಾರೆ ಇದು ಅವರ ದೊಡ್ಡತನ ಎಂದರು.
ನೂರು ಬೆಡ್ ಆಸ್ಪತ್ರೆಗಾಗಿ ಎರಡನೇ ದಿನವೂ ಮುಂದುವರೆದ ಆಹೋರಾತ್ರಿ ಧರಣಿ ಸತ್ಯಾಗ್ರಹ
ವಿ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ತೊರೆದಾಗ ಕಾರ್ಯಕರ್ತರು ಎಲ್ಲ ಹೊರಟು ಹೋದರು. ಸಿದ್ದರಾಮಯ್ಯ ಅವರು ಸುನಿಲ್ ಬೋಸ್ ಅವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದ್ದರು. ಈ ಮಧ್ಯೆ ಕೆಲವರು ಅಭಿವೃದ್ದಿಗೆ ಸಂಬಂಧಿಸದವರು ಅಭ್ಯರ್ಥಿಯಾಗಿ ಗೆದ್ದರು. ಆದರೂ ನಾವು ಅಧಿಕಾರಕ್ಕಾಗಿ ಆಸೆ ಪಡೆದೆ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಗೆಲುವಿಗೆ ಶ್ರಮಿಸಿದ್ದೇನೆ. ಮಹದೇವಪ್ಪ, ಸುನೀಲ್ ಬೋಸ್ ಏನು ಮಾಡಿದ್ದಾರೆಂದು ಹೇಳುತ್ತಾರೆ. ನಾನು ಅಭಿವೃದ್ದಿಪಡಿಸಿದ ರಸ್ತೆಯಲ್ಲಿ ಸುತ್ತುತ್ತಿದ್ದಾರೆ. ಇದೇ ಅವರಿಗೆ ಕೊಡುವ ಉತ್ತರ ಎಂದು ಸ್ವಪಕ್ಷೀಯದವರನ್ನೇ ಟೀಕಿಸಿದರು.
ರಾಜಕೀಯ ವಿರೋಧಿಯಾಗಿದ್ದರೂ ಸಹ ವಿ. ಶ್ರೀನಿವಾಸಪ್ರಸಾದ್ ಅವರು ಟಿ. ನರಸೀಪುರಕ್ಕೆ ಭೇಟಿ ನೀಡಿದ್ದಾಗ 4 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಅಥಿತಿಗೃಹ ಮಹದೇವಪ್ಪ ಮಾಡಿರುವುದು ಎಂದು ಹೇಳುತ್ತಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ದಿಪಡಿಸದೆ ಇರುವವರು, ಕ್ಷೇತ್ರಕ್ಕೆ ಸಂಬಂಧಿಸಿದಲ್ಲದವರು ನನ್ನ ಫೋಟೋ ಬಳಸದೆ. ನನ್ನ ಹೆಸರು ಹಾಕದೆ, ನನ್ನ ಅಭಿವೃದ್ದಿ ಕೆಲಸಗಳನ್ನು ಹೇಳದೆ ಸಣ್ಣತನ ತೋರುತ್ತಿದ್ದಾರೆ. ಇಂತಹ ಸಣ್ಣತನ ಸಾರ್ವಜನಿಕ ಜೀವನದಲ್ಲಿ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅವರನ್ನು ಹೆಸರು ಹೇಳದೆ ಟೀಕಿಸಿದರು.
ಬನಶಂಕರಿ ದೇವಿಯ ಜಾತ್ರಾ ಉತ್ಸವ ಪ್ರಯುಕ್ತ ಕೊಡಗಿನಲ್ಲಿ ರೋಚಕ ಎತ್ತಿನಗಾಡಿ ಓಟ
ಕಾಂಗ್ರೆಸ್ ಮುಖಂಡರಾದ ಸುನಿಲ್ ಬೋಸ್, ಮಹದೇವಪ್ಪ, ಜಿಪಂ ಮಾಜಿ ಸದಸ್ಯರಾದ ಕೆ.ಬಿ. ಸ್ವಾಮಿ, ಬಸವರಾಜು, ಚೋಳರಾಜು, ತಾಪಂ ಮಾಜಿ ಸದಸ್ಯ ಎಚ್.ಎಸ್. ಮೂಗಶೆಟ್ಟಿ, ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಇಂಧನ್ ಬಾಬು, ತಾಪಂ ಮಾಜಿ ಅಧ್ಯಕ್ಷ ತಮ್ಮಣ್ಣೇಗೌಡ, ಮುಖಂಡರಾದ ಗೋವಿಂದರಾಜು, ಶಿವಮಲ್ಲು, ಚೆನ್ನನಾಯಕ, ಸಿದ್ದರಾಜು, ಚಿನ್ನಸ್ವಾಮಿ, ಹೆಜ್ಜಿಗೆ ಕೃಷ್ಣ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ನಗರಸಭಾ ಸದಸ್ಯ ಎಸ್.ಪಿ. ಮಹೇಶ್, ಇಬ್ರಾಹಿಂ, ಕಾರ್ಯಕರ್ತರು ಇದ್ದರು.