ರೇಣುಕಾಸ್ವಾಮಿ ಕೊಲೆ ಕೇಸ್‌: ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲೇಬೇಕು, ಶಾಸಕ ದರ್ಶನ್ ಪುಟ್ಟಣ್ಣಯ್ಯ

By Kannadaprabha News  |  First Published Sep 12, 2024, 10:22 AM IST

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಟ ದರ್ಶನ್ ನನಗೆ ಸ್ನೇಹಿತ. ಆದರೆ ಕಾನೂನಿನ ಮುಂದೆ ನಾವು ಏನು ಹೇಳುವುದಕ್ಕೂ ಆಗೋಲ್ಲ. ದರ್ಶನ್ ಬಳ್ಳಾರಿ ಜೈಲು ಸೇರಿದ ಬಳಿಕ ಮತ್ತೆ ಅವರನ್ನು ಭೇಟಿ ಮಾಡಿಲ್ಲ ಎಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ  


ಮಂಡ್ಯ(ಸೆ.12): ನಾನು ಮತ್ತು ನಟ ದರ್ಶನ್ ಒಳ್ಳೆಯ ಸ್ನೇಹಿತರು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಸ್ನೇಹ ಬೇರೆ, ಕಾನೂನು ಬೇರೆಯಾಗಿದ್ದು, ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ. 

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಟ ದರ್ಶನ್ ನನಗೆ ಸ್ನೇಹಿತ. ಆದರೆ ಕಾನೂನಿನ ಮುಂದೆ ನಾವು ಏನು ಹೇಳುವುದಕ್ಕೂ ಆಗೋಲ್ಲ. ದರ್ಶನ್ ಬಳ್ಳಾರಿ ಜೈಲು ಸೇರಿದ ಬಳಿಕ ಮತ್ತೆ ಅವರನ್ನು ಭೇಟಿ ಮಾಡಿಲ್ಲ ಎಂದರು. 

Tap to resize

Latest Videos

undefined

ದರ್ಶನ್‌ಗೆ ಜೈಲು ತುಂಬಿ ಮೂರು ತಿಂಗಳು, ಬಳ್ಳಾರಿ ಜೈಲಿಗೆ ಬಂದು 14 ದಿನವಾದ್ರೂ ದಾಸ​ ವಿಲವಿಲ!

ಇನ್ನು ರಾಜಾತಿಥ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ ಜೈಲಿನಲ್ಲಿ ಎಲ್ಲ ಕೈದಿಗಳನ್ನೂ ಒಂದೇ ರೀತಿ ನೋಡಬೇಕು. ದುಡ್ಡು, ಪವರ್ ಇರುವವರನ್ನು ಪ್ರತ್ಯೇಕವಾಗಿ ಉಪಚರಿಸುವುದು ಸರಿಯಲ್ಲ ಎಂದರು.

click me!