ರಾಯಚೂರು: ಲೋ ಬಿಪಿ, ಕ್ಲಾಸಲ್ಲೇ 14ರ ಬಾಲಕ ಸಾವು..!

Published : Sep 12, 2024, 09:27 AM IST
ರಾಯಚೂರು: ಲೋ ಬಿಪಿ, ಕ್ಲಾಸಲ್ಲೇ 14ರ ಬಾಲಕ ಸಾವು..!

ಸಾರಾಂಶ

8ನೇ ತರಗತಿಯಲ್ಲಿ ಓದುತ್ತಿದ್ದ ತರುಣ್‌ಗೆ ತಲೆ ಸುತ್ತು ಕಾಣಿಸಿ ಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿನ ವೈದ್ಯರು ರಾಯಚೂರಿಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ವಾಹನದಲ್ಲಿ ರಾಯಚೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.

ಸಿರವಾರ(ರಾಯಚೂರು)(ಸೆ.12): ಕಡಿಮೆ ರಕ್ತದೊತ್ತಡದಿಂದ (ಲೋ ಬಿಪಿ) ತರಗತಿಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಖಾಸಗಿ ಶಾಲೆಯಲ್ಲಿ ಬುಧವಾರ ನಡೆದಿದೆ. ತಾಲೂಕಿನ ಅತ್ತನೂರು ಗ್ರಾಮದ ತರುಣ್ (14) ಮೃತ ದುರ್ದೈವಿ. 

8ನೇ ತರಗತಿಯಲ್ಲಿ ಓದುತ್ತಿದ್ದ ತರುಣ್‌ಗೆ ತಲೆ ಸುತ್ತು ಕಾಣಿಸಿ ಕೊಂಡು ಕುಸಿದು ಬಿದ್ದಿದ್ದಾನೆ. 

ಲಿಂಗಸೂಗೂರು: ರಕ್ತ ಪರೀಕ್ಷೆಗೆ ಬಂದ ರೋಗಿಗಳ ಎದುರಲ್ಲೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕಿತ್ತಾಟ! ವಿಡಿಯೋ ವೈರಲ್

ತಕ್ಷಣ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿನ ವೈದ್ಯರು ರಾಯಚೂರಿಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ವಾಹನದಲ್ಲಿ ರಾಯಚೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ.

PREV
Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ