ಶಾಸಕ ಸಿ.ಟಿ. ರವಿ ಸೇರಿ ಬಿಜೆಪಿಯ ಹಲವು ಸ್ಥಳೀಯ ಮುಖಂಡರು, ಮಾಲಾಧಾರಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ಮುಖಂಡರು ನಗರದಲ್ಲಿ ಸೋಮವಾರ ಪಡಿ (ಭಿಕ್ಷೆ) ಸಂಗ್ರಹಿಸಿದರು.
ಚಿಕ್ಕಮಗಳೂರು(ಡಿ.29): ದತ್ತ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಸೇರಿ ಬಿಜೆಪಿಯ ಹಲವು ಸ್ಥಳೀಯ ಮುಖಂಡರು, ಮಾಲಾಧಾರಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ಮುಖಂಡರು ನಗರದಲ್ಲಿ ಸೋಮವಾರ ಪಡಿ (ಭಿಕ್ಷೆ) ಸಂಗ್ರಹಿಸಿದರು.
ತಮ್ಮ ನಿವಾಸದಿಂದ ಇತರೆ ಮಾಲಾಧಾರಿಗಳೊಂದಿಗೆ ಭಿಕ್ಷಾಟನೆಗೆ ಹೊರಟ ತಂಡಕ್ಕೆ ಮೊದಲು ಸಿ.ಟಿ.ರವಿ ಪತ್ನಿ ಪಲ್ಲವಿ ಅವರು ಮೊದಲು ಪಡಿ ಅರ್ಪಿಸಿದರು. ನಂತರ ನಗರದ ನಾರಾಯಣಪುರ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸಲಾಯಿತು. ನಿವಾಸಿಗಳು ಅಕ್ಕಿ, ಬೆಲ್ಲ, ಬೇಳೆ ಇನ್ನಿತರೆ ಪದಾರ್ಥಗಳನ್ನು ಪಡಿ ರೂಪದಲ್ಲಿ ಅರ್ಪಿಸಿದರು.
ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ರಾ...? ಯಾರದು..?
ಈ ವೇಳೆ ಮಾತನಾಡಿದ ಸಿ.ಟಿ.ರವಿ, ದತ್ತಮಾಲೆ ಧರಿಸಿ ವ್ರತಾಚರಣೆಯಲ್ಲಿದ್ದು, ಭಿಕ್ಷಾಟನೆ ನಡೆಸಿ ಪಡಿ ಸಂಗ್ರಹಿಸಿದ್ದೇವೆ. ಮಂಗಳವಾರ ದತ್ತಪೀಠಕ್ಕೆ ತೆರಳಿ ಪಡಿ ಅರ್ಪಿಸಿ, ದತ್ತಪೀಠ ದರ್ಶನ ಮಾಡಿದ ನಂತರ ಮಾಲೆಯನ್ನು ವಿಸರ್ಜನೆ ಮಾಡುತ್ತೇವೆ ಎಂದು ತಿಳಿಸಿದರು.
ದತ್ತ ಪೀಠದಲ್ಲಿ ಮುಕ್ತ ಪೂಜೆಗಿರುವ ಎಲ್ಲ ಅಡೆತಡೆಗಳು ನಿವಾರಣೆ ಆಗುವಂತೆ ನ್ಯಾಯಾಲಯದಲ್ಲಿ ತೀರ್ಪು ಬರಲಿ, ಸತ್ಯದ ಪರವಾದ ತೀರ್ಪು ಬರಲಿ ಎಂಬ ಸಂಕಲ್ಪದೊಂದಿಗೆ ದತ್ತಪೀಠಕ್ಕೆ ತೆರಳುತ್ತಿದ್ದೇವೆ ಎಂದು ತಿಳಿಸಿದರು.