ಯುವಕರಿಗೆ ಸುಳ್ಳುಗಳ ಮೇಲೆ ಸುಳ್ಳು ಹೇಳುವುದೇ ಇವರ ಸಾಧನೆ| ಹಾವೇರಿ ಜಿಲ್ಲೆಯಾಗಿ 20 ವರ್ಷ ಗತಿಸಿದರೂ ಇನ್ನೂ ಕೈಗಾರಿಕೆ ಘಟಕಗಳು ಸ್ಥಾಪನೆಯಾಗದೇ ಇರುವುದು ಇದು ಒಂದು ದುರ್ದೆವದ ಸಂಗತಿ: ಅಣ್ಣಯ್ಯ ಚಾವಡಿ|
ಹಾವೇರಿ(ಡಿ.28): ಸುಳ್ಳು ಹೇಳುವುದು, ಜನರಿಗೆ ಮೋಸ ಮಾಡುವುದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುವುದು, ಸಂವಿಧಾನದ ಮೌಲ್ಯಗಳನ್ನು ಧಿಕ್ಕರಿಸುವುದು ಬಿಜೆಪಿ ಆಡಳಿತ ಸರ್ಕಾರದ ಸಾಧನೆಯಾಗಿದೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಣ್ಣಯ್ಯ ಚಾವಡಿ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಎಸ್ ಹಾವೇರಿ ವಿಧಾನಸಭಾ ಕ್ಷೇತ್ರದ ಯುವ ಘಟಕದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರದ ಬಿಜೆಪಿ ಸರ್ಕಾರ ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಮಾಡುವುದಾಗಿ ಹೇಳಿದ್ದು ಹೊಸ ಉದ್ಯೋಗ ಸೃಷ್ಟಿಯ ಬದಲು ಇರುವ ಉದ್ಯೋಗವು ನಷ್ಟವಾಗುತ್ತಿದೆ. ಯುವಕರಿಗೆ ಸುಳ್ಳುಗಳ ಮೇಲೆ ಸುಳ್ಳು ಹೇಳುವುದೇ ಇವರ ಸಾಧನೆಯಾಗಿದೆ. ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ದೂರದೃಷ್ಟಿ ಯೋಜನೆಯ ಕಾಂಪೀಟ್ ವಿತ್ ಚೀನಾ ಆತ್ಮನಿರ್ಭರ ಯೋಜನೆಗೆ ಅಂದೆ ಅಡಿಗಲ್ಲು ಇಟ್ಟವರು ಆಯಾ ಪ್ರದೇಶದಲ್ಲಿ ಸಂಪನ್ಮೂಲ ವೃತ್ತಿ ಕೌಶಲ್ಯ ಆಧರಿಸಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಗೊಂಡಿದ್ದರು. 9 ಜಿಲ್ಲೆಗಳಲ್ಲಿ 9 ಲಕ್ಷ ಉದ್ಯೋಗ ಸೃಷ್ಟಿಸುವ ವಿಶೇಷ ಯೋಜನೆ ಜಾರಿಗೊಳಿಸಿದರು. ಜಿಲ್ಲೆಯಾಗಿ 20 ವರ್ಷ ಗತಿಸಿದರೂ ಇನ್ನೂ ಕೈಗಾರಿಕೆ ಘಟಕಗಳು ಸ್ಥಾಪನೆಯಾಗದೇ ಇರುವುದು ಇದು ಒಂದು ದುರ್ದೆವದ ಸಂಗತಿ ಎಂದರು.
ಅನೈತಿಕ ಸಂಬಂಧ ಶಂಕೆ: ಎಲ್ಲರೆದುರೇ ಹೆಂಡತಿ ಕುತ್ತಿಗೆ ಸೀಳಿದ ಗಂಡ..!
ತಾಲೂಕು ಯುವ ಘಟಕದ ಅಧ್ಯಕ್ಷ ಸುನೀಲ ದಂಡೆಮ್ಮನವರ ಮಾತನಾಡಿ, ಜೆಡಿಎಸ್ ಸಾಮಾಜಿಕ ನ್ಯಾಯ ಮೂಲಭೂತ ತತ್ವಗಳಿಗೆ ಬದ್ಧವಾಗಿದೆ. ಹಾವೇರಿ ವಿಧಾನಸಭೆಯ ಕ್ಷೇತ್ರದಲ್ಲಿ ಬೇರು ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು.
ಸಭೆಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಎಸ್.ಎಸ್. ಕಳ್ಳಿಮನಿ, ಅಲ್ತಾಫ ನದಾಫ್, ಅಮೀರಜಾನ ಬೇಪಾರಿ, ಕೆ.ಎಂ. ಸುಂಕದ, ಶ್ರೀಕಾಂತ ಗಡ್ಡಿ, ಮೈಲಾರಿ ಏರಿಮನಿ, ಕಲೀಲ ಹುಲಗೂರ, ಶ್ರವಣ ಕೊರವರ, ದಾದಾಪೀರ ಮಲ್ಲಿಗಾರ, ಮಹಾಂತೇಶ ಬೇವಿನಹಿಂಡಿ ಇದ್ದರು.