'ಇಸ್ಲಾಂ ಜಗತ್ತಿಗೆ ಬಾಂಬ್'  ಅನಂತ್‌ಕುಮಾರ್‌ ಹೆಗಡೆ ಖುಲಾಸೆ

Published : Dec 28, 2020, 03:32 PM IST
'ಇಸ್ಲಾಂ ಜಗತ್ತಿಗೆ ಬಾಂಬ್'  ಅನಂತ್‌ಕುಮಾರ್‌ ಹೆಗಡೆ ಖುಲಾಸೆ

ಸಾರಾಂಶ

ಸಂಸದ ಅನಂತ ಕುಮಾರ್ ಹೆಗಡೆಗೆ ಬಿಗ್ ರಿಲೀಫ್/ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಪ್ರಕರಣದಿಂದ ಹೆಗಡೆ ಖುಲಾಸೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು /  'ಇಸ್ಲಾಂ ಧರ್ಮ ಜಗತ್ತಿಗೆ ಒಂದು ಬಾಂಬ್ ಎಂದು ಹೇಳಿಕೆ  ನೀಡಿದ್ದ ಆರೋಪ

ಬೆಂಗಳೂರು(ಡಿ.  28) ಸಂಸದ ಅನಂತ ಕುಮಾರ್ ಹೆಗಡೆಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಪ್ರಕರಣದಿಂದ ಹೆಗಡೆ ಅವರನ್ನು ಖುಲಾಸೆ ಮಾಡಲಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು  ನೀಡಿದ್ದು 'ಇಸ್ಲಾಂ ಧರ್ಮ ಜಗತ್ತಿಗೆ ಒಂದು ಬಾಂಬ್' ಎಂದು ಹೆಗಡೆ  ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 2016 ರಲ್ಲಿ ಶಿರಸಿಯಲ್ಲಿ ಹೇಳಿಕೆ ನೀಡಿದ ಆರೋಪ ಕೇಳಿಬಂದಿತ್ತು.

ಹೆಗಡೆಗೆ ದಿಲ್ಲಿಯಿಂದ ಬಂದ ನೊಟಿಸ್.. ಏನ್ ಕಾರಣ

ಮುರಾದ್ ಹುಸೇನ್ ಎಂಬುವರು ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ, ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲವೆಂದು ಹೆಗಡೆ ಪರ ವಕೀಲರು ವಾದ ಮಂಡಿಸಿದ್ದರು  ಅನಂತ್ ಕುಮಾರ್ ಹೆಗಡೆ ಪರ ವಕೀಲ ಸಂತೋಷ್ ನಾಗರಾಳೆ ವಾದ ಮಂಡಿಸಿದ್ದರು. ವಿಶೇಷ ಕೋರ್ಟ್ ಜಡ್ಜ್  ನ್ಯಾ.ತ್ಯಾಗರಾಜ ಎನ್ ಇನವಳ್ಳಿ ತೀರ್ಪು ನೀಡಿದ್ದು  ಉತ್ತರ ಕನ್ನಡದ ಸಂಸದರಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ. 

 

PREV
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ