'ನನಗೆ ಸಚಿವ ಸ್ಥಾನ ಕೊಡಿ ಅಂತ ಯಡಿಯೂರಪ್ಪಗೆ ಟೆನ್ಶನ್‌ ಕೊಡಲ್ಲ'

By Suvarna News  |  First Published Jan 24, 2020, 3:13 PM IST

ನಾನು ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಅವರಿಗೆ ಟೆನ್ಶನ್ ಕೊಡುವುದಿಲ್ಲ| ಕನಕಗಿರಿ ವಿಶೇಷವಾದ ಕ್ಷೇತ್ರ| ಈ ಮಣ್ಣಿನ ಶಕ್ತಿಯಿಂದ ಇಲ್ಲಿ ಗೆದ್ದವರೂ ಮಂತ್ರಿಯಾಗಿದ್ದಾರೆ| ಆದ್ರೆ ನಮ್ಮ ಟೈಮ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಎಂದ ಶಾಸಕ ಬಸವರಾಜ್ ದಡೇಸಗೂರ್|


ಕೊಪ್ಪಳ(ಜ.24): ನಾನು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಟೆನ್ಶನ್ ಕೊಡುವುದಿಲ್ಲ ಎಂದು ಶಾಸಕ ಬಸವರಾಜ್ ದಡೇಸಗೂರ್ ಅವರು ಹೇಳಿದ್ದಾರೆ. 

ಸಚಿವ ಸಂಪುಟ ವಿಸ್ತರಣೆ ಸಂಬಂಧ ಶುಕ್ರವಾರ ಜಿಲ್ಲೆಯ ಕನಕಗಿರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕನಕಗಿರಿ ವಿಶೇಷವಾದ ಕ್ಷೇತ್ರವಾಗಿದೆ. ಈ ಮಣ್ಣಿನ ಶಕ್ತಿಯಿಂದ ಇಲ್ಲಿ ಗೆದ್ದು ಬಂದವರು ಮಂತ್ರಿಯಾಗಿದ್ದಾರೆ. ಆದ್ರೆ ನಮ್ಮ ಟೈಮ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯಲ್ಲಿ ನನಗಿಂತ ಹಿರಿಯರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ಕೆಲಸ ಕೊಟ್ಟರೂ ನಾನು  ಮಾಡುತ್ತೇನೆ. ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲು ಅವಕಾಶವಿದೆ. ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ. 

ಮೊದಲು ಕಾಂಗ್ರೆಸ್‌ನಿಂದ ಜೆಡಿಎಸ್‌ನಿಂದ ಬಂದು ಗೆದ್ದ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ನಾವು ಟೆನ್ಶನ್ ಕೊಡುವುದಿಲ್ಲ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಬಸವರಾಜ್ ದಡೇಸಗೂರ್ ಅವರು ಹೇಳಿದ್ದಾರೆ. 
 

click me!