‘ಡಿಕೆಶಿ, ಪರಮೇಶ್ವರ್ ಒಂದಾಗಿ ವಲಸಿಗ ಸಿದ್ದರಾಮಯ್ಯಗೆ ವಿರೋಧ’

By Suvarna News  |  First Published Jan 24, 2020, 3:07 PM IST

ಕಾಂಗ್ರೆಸ್ ಪಕ್ಷಕ್ಕೆ ವಲಸಿಗರಾಗಿರುವ ಸಿದ್ದರಾಮಯ್ಯ ಅವರಿಗೆ ಮೂಲ ಕಾಂಗ್ರೆಸಿಗರಾದ ಡಿಕೆ ಶಿವಕುಮಾರ್ ಪರಮೇಶ್ವರ್ ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. 


ಶಿವಮೊಗ್ಗ [ಜ.24]:  ರಾಜ್ಯದಲ್ಲಿ ಉಪ ಚುನಾವಣೆ ನಡೆದು ಎರಡು ತಿಂಗಳು ಕಳೆದಿದ್ದು, ಇನ್ನಾದರೂ ಸಂಪುಟ ವಿಸ್ತರಣೆಯಾಗಿಲ್ಲ. ಆದರೆ ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆ ಆಗೋದು ಗ್ಯಾರಂಟಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕನ್ಫರ್ಮ್ ಹೇಳಿಕೆ ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ ತಮ್ಮ ಮೂಲ ಪಕ್ಷ ತೊರೆದು ಬಂದ 17 ಮಂದಿಯ ಋಣ ತೀರಿಸಬೇಕಿದೆ. ಬಿಜೆಪಿ ಪಕ್ಷಕ್ಕೆ ಬಂದವರೆಲ್ಲಾ ಹಾಲು ಸಕ್ಕರೆಯಂತೆ ಬೆರೆತು ಹೋಗಿದ್ದಾರೆ ಎಂದರು. 

Latest Videos

ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ನಾವೆಲ್ಲಾ ಒಂದಾಗೋಣ : ಈಶ್ವರಪ್ಪ.

ಬಿಜೆಪಿಯಲ್ಲಿ ಆ ಮೂಲ, ಈ ಮೂಲ ಎಂದು ಯಾವುದೇ ಮೂಲಗಳಿಲ್ಲ. ವಲಸಿಗರ ಸಮಸ್ಯೆ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಅಲ್ಲಿ ಹಾಲು ಸಕ್ಕರೆ ಬದಲು, ಹಾಲು ವಿಷ ಇದ್ದಂತೆ. ಅದಕ್ಕಾಗಿ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್, ಪರಮೇಶ್ವರ್ ವಿರೋಧಿಸುತ್ತಿರುವುದು ಎಂದರು. 

'HDK ದುಷ್ಕರ್ಮಿಗಳಿಗೆ ಬೆಂಬಲ ನೀಡುತ್ತಿದ್ದಾರೆನ್ನುವ ಅನುಮಾನ ಕಾಡುತ್ತಿದೆ'...

 ತಪ್ಪಿತಸ್ತರಿಗೆ ಶಿಕ್ಷೆ : ಇನ್ನು ಇದೇ ವೇಳೆ ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಪ್ರಕರಣ ಆರೋಪಿ ಯಾರೇ ಆಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. 

ಮಂಗಳೂರು ವಿಷಯದಲ್ಲಿ ಪೊಲೀಸರಿಗೆ ನೈತಿಕ ಸ್ಥೈರ್ಯ ಕೊಡುವ ಕೆಲಸ ಆಗಬೇಕು. ಹೆಚ್.ಡಿ ಕುಮಾರಸ್ವಾಮಿ ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸಚಿವ ಈಶ್ವರಪ್ಪ ಹೇಳಿದರು.

click me!