SSLC ಫಲಿತಾಂಶದಲ್ಲಿ ಹಾಸನ ರಾಜ್ಯಕ್ಕೆ ಫಸ್ಟ್ : ರಹಸ್ಯ ಬಿಚ್ಚಿಟ್ಟ ಶಿಕ್ಷಕ

By Kannadaprabha NewsFirst Published Jan 24, 2020, 2:18 PM IST
Highlights

2019ರಲ್ಲಿ ಹಾಸನ ಜಿಲ್ಲೆ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ನಂಬರ್ 1 ಸ್ಥಾನ ಪಡೆದುಕೊಂಡಿತ್ತು. ಇದಕ್ಕೆ ಕಾರಣ ಏನೆಂದು ಶಿಕ್ಷಕರೋರ್ವರು ದೂರು ನೀಡಿದ್ದಾರೆ. 

ಹಾಸನ [ಜ.24]: ಹಾಸನ ಜಿಲ್ಲೆಯ ಕಳೆದ 2019ರಲ್ಲಿ SSLC ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಇದಕ್ಕೆ ಕಾರಣ ಸಾಮೂಹಿಕ ನಕಲು ಎಂದು ಶಿಕ್ಷಕರೋರ್ವರು ದೂರು ನೀಡಿದ್ದಾರೆ. 

ಚನ್ನರಾಯಪಟ್ಟಣದ ತಾಲೂಕಿನ ಪ್ರೌಢಶಾಲಾ ಶಿಕ್ಷಕ ಶಿವಕುಮಾರ್ ಎನ್ನುವವರು ದೂರು ನೀಡಿದ್ದು, ಹೊಸ ವಿವಾದ ಹುಟ್ಟು ಹಾಕಿದ್ದಾರೆ. 

Latest Videos

ಕಳೆದ ಬಾರಿ ಹಾಸನ ಜಿಲ್ಲಾ ಡಿಡಿಪಿಇ ಅವರಿಂದ ಸಾಮೂಹಿಕ ನಕಲು ಮಾಡಲು ಮೌಕಿಕ ಸೂಚನೆ ಇತ್ತು ಎಂದು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ. 

ಮಕ್ಕಳಿಗೆ ಆಗುವ ಅನ್ಯಾಯ ತಡೆಯಲು ಈ ವರ್ಷ ಸೂಕ್ತ ಭದ್ರತೆಯಲ್ಲಿ ಪರೀಕ್ಷೆ ನಡೆಸಿ ಎಂದು ದೂರು ನೀಡಿದ್ದಾರೆ. ಕಳೆದ ವರ್ಷ ಕರ್ತವ್ಯದಲ್ಲಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಬಿಇಒ ಪುಷ್ಪಲತಾ ವಿರುದ್ಧ ದೂರು ನೀಡಿದ್ದಾರೆ. 

ಗಣರಾಜ್ಯೋತ್ಸವಕ್ಕೆ ಹಕ್ಕಿಪಿಕ್ಕಿ ಜನಾಂಗದ ದಂಪತಿ ಆಯ್ಕೆ...

ಶಿವಕುಮಾರ್ ದೂರು ಆಧರಿಸಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಮೈಸೂರು ವಿಭಾಗೀಯ ಪ್ರೌಢ ಶಿಕ್ಷಣ ಮಂಡಳಿ ಸಹ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ..

ಈ ಬಾರಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.

click me!