'ಭಾರತಕ್ಕೆ ಪ್ರಧಾನಿ ಮೋದಿ ದೊರೆತಿದ್ದು ನಮ್ಮ ಭಾಗ್ಯ'

By Kannadaprabha NewsFirst Published Sep 13, 2020, 3:34 PM IST
Highlights

ಕಬ್ಬು ಬೆಳೆಯುವ ರೈತನ ಬಾಳು ಕೆಲವೇ ದಿನದಲ್ಲಿ ಹಸನಾಗಲಿದೆ| ಕಬ್ಬಿನ ಸಿಪ್ಪೆಯ ಮೂಲಕ ಇಥೆನಾಲ್‌ ತಯಾರಿಕೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ಕಬ್ಬು ಬೆಳೆಯುವ ರೈತರ ಆದಾಯ ದ್ವಿಗುಣವಾಗಲಿದೆ| ದಾಸೋಹ ಮಾಡುವ ಮಹತ್ತರ ನಿಗಮ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದ ಶಾಸಕ ನಡಹಳ್ಳಿ| 
 

ನಿಡಗುಂದಿ(ಸೆ.13): ರಾಷ್ಟ್ರಕ್ಕೆ ನರೇಂದ್ರ ಮೋದಿಯವರಂತ ಉತ್ತಮ ನಾಯಕ ನಮಗೆಲ್ಲ ದೊರೆತಿದ್ದು ನಮ್ಮ ಭಾಗ್ಯ. ಅವರ, ದೂರದೃಷ್ಟಿ, ಉತ್ತಮ ನಿರ್ಧಾರದಿಂದ ಮುಂದಿನ ಕೆಲವೇ ವರ್ಷದಲ್ಲಿ ವಿಶ್ವವೇ ಮೆಚ್ಚುವಂತಹ ದೇಶ ನಮ್ಮದಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದ್ದಾರೆ. 

ಪಟ್ಟಣದ ಕಾಶಿನಕುಂಟಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಡಿಯಲ್ಲಿ 4.9 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮತಕ್ಷೇತ್ರದ 68 ಹಳ್ಳಿಗಳಲ್ಲಿ .180 ಕೋಟಿ ವೆಚ್ಚದಲ್ಲಿ ಪ್ರತಿ ಹಳ್ಳಿಗೂ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಜನರು ಬಯಸಿದ ಸೌಕರ‍್ಯ ನೀಡುವಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದೇನೆ. ಪ್ರತಿ ಗ್ರಾಮದಲ್ಲಿ ರೈತರ ಜಮೀನಿಗೆ ಹಾಗೂ ಗ್ರಾಮಕ್ಕೆ ಶಾಶ್ವತ ವಿದ್ಯುತ್‌ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ ಎಂದರು.

'ಸ್ವಾತಂತ್ರ್ಯ ನಂತರ ನೀರಾವರಿಗೆ ಹೆಚ್ಚು ಹಣ ನೀಡಿದ್ದು ಸಿದ್ದರಾಮಯ್ಯ ಸರ್ಕಾರ'

ಮತಕ್ಷೇತ್ರದಲ್ಲಿ ಸಣ್ಣ ನೀರಾವರಿಗೊಳಪಡುವ 23 ಕೆರೆಗಳಿದ್ದು ಎಲ್ಲ ಕೆರೆಗಳನ್ನು ತುಂಬಿಸಿದ ಪರಿಣಾಮ ಅಂತರ್ಜಲ ಹೆಚ್ಚಳವಾಗಿ ಸುತ್ತಲಿನ ಸಾವಿರಾರು ಹೆಕ್ಟೇರ್‌ ಪ್ರದೇಶ ನೀರಾವರಿಯಾಗಿ ಬೆಳೆಯುತ್ತಿವೆ. ಉದೋಗ ಅರಸಿ ನಗರಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಮೂಲಸೌಕರ‍್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಸರ್ಕಾರ ಕಲಂ 79ಕ್ಕೆ ತಿದ್ದುಪಡಿ ತರುವ ಮೂಲಕ ಎಲ್ಲರಿಗೂ ಜಮೀನು ಖರೀದಿಸಿ ತಮ್ಮ ಜಮೀನಿನಲ್ಲಿ ಉತ್ತಮ ಆದಾಯ ಹೊಂದುವಂತೆ ಮಾಡಿದ್ದು, ಆ ಮೂಲಕ ಉದ್ಯೋಗ ಹೆಚ್ಚವಾಗುವ ಆಶಾಭಾವ ಹೊಂದಲಾಗಿದೆ ಎಂದರು.
ಕಬ್ಬು ಬೆಳೆಯುವ ರೈತನ ಬಾಳು ಕೆಲವೇ ದಿನದಲ್ಲಿ ಹಸನಾಗಲಿದೆ. ಕಬ್ಬಿನ ಸಿಪ್ಪೆಯ ಮೂಲಕ ಇಥೆನಾಲ್‌ ತಯಾರಿಕೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ಕಬ್ಬು ಬೆಳೆಯುವ ರೈತರ ಆದಾಯ ದ್ವಿಗುಣವಾಗಲಿದೆ. ದಾಸೋಹ ಮಾಡುವ ಮಹತ್ತರ ನಿಗಮ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದರು.

ಎನ್‌.ಟಿ. ಗೌಡರ, ಶಿಕ್ಷಕ ಸಂಘದ ಮುಖಂಡ ಬಿ.ಟಿ. ಗೌಡರ, ಮಂಜುನಾಥ ಹಳೆಮನಿ, ಬಾಲಚಂದ್ರ ಕರಕಣ್ಣವರ, ಮಲಕೇಂದ್ರಗೌಡ ಪಾಟೀಲ, ಮುತ್ತಣ್ಣ ಹುಗ್ಗಿ, ಸೋಮನಗೌಡ ಬಿರಾದರ, ಹುಲ್ಲಳ್ಳಿ, ವಿಶ್ವನಾಥ ಬಡಿಗೇರ, ಬಿ.ಎಸ್‌. ಪಾಟೀಲ (ವಣಿಕಾಳ), ರಾಮಣ್ಣ ಗೌಡರ, ಯಲ್ಲಪ್ಪ ಗೌಡರ, ಬಸವರಾಜ ಕಾಳಗಿ, ಗಂಗಾಧರ ಜುಲಗುಡ್ಡ ಅನೇಕರಿದ್ದರು.
 

click me!