ರಮೇಶ್ ಜಾರಕಿಹೊಳಿ ಭೇಟಿ : ಮಹತ್ವ ಪಡೆದುಕೊಂಡ ಚರ್ಚೆ

By Kannadaprabha News  |  First Published Sep 13, 2020, 3:31 PM IST

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗೆ ಒಳಗಾದ ವಿಚಾರದ ಬಗ್ಗೆ ಇದೀಗ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಮೇಕೆದಾಟು ಡ್ಯಾಂ ನಿರ್ಮಾಣದ ಬಗ್ಗೆ ಮಹತ್ವದ ತೀರ್ಮಾನ ಹೊರಬೀಳುವ ಸಾದ್ಯತೆ ಇದೆ. 


ಎಂ.ಅಫ್ರೋಜ್ ಖಾನ್‌

 ರಾಮ​ನ​ಗರ (ಸೆ.13):  ದಶ​ಕ​ಗ​ಳಷ್ಟುಹಳೆ​ಯ​ದಾದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆಯ ಚರ್ಚೆ ಮತ್ತೊಮ್ಮೆ ಮುನ್ನೆ​ಲೆಗೆ ಬಂದಿದೆ.

Tap to resize

Latest Videos

ಜಲ​ಸಂಪ​ನ್ಮೂಲ ಸಚಿವ ರಮೇಶ್‌ ಜಾರ​ಕಿ​ಹೊಳಿ ಸೆ. 14ರಂದು ಮೇಕೆ​ದಾಟು ಸಮತೋಲನಾ ಜಲಾಶಯ ನಿರ್ಮಿಸಲು ಉದ್ದೇ​ಶಿ​ಸಿ​ರುವ ಪ್ರದೇ​ಶ​ವನ್ನು ವೀಕ್ಷಿಸಿ, ಅಧಿ​ಕಾ​ರಿ​ಗ​ಳೊಂದಿಗೆ ಚರ್ಚೆ ನಡೆ​ಸುವ​ರು.

ಈ ಯೋಜ​ನೆಗೆ ಕೇಂದ್ರ ಜಲ​ಶಕ್ತಿ ಇಲಾಖೆಯಿಂದ ಒಪ್ಪಿಗೆ ದೊರ​ಕಿದ್ದು, ಕೇಂದ್ರ ಅರ​ಣ್ಯ​ ಇ​ಲಾ​ಖೆಯ ಅನು​ಮತಿಯಷ್ಟೇ ಬಾಕಿ ಉಳಿ​ದಿದೆ. ಹೀಗಾಗಿ ಸಚಿ​ವ ರಮೇಶ್‌ ಜಾರ​ಕಿ ​ಹೊ​ಳಿ​ರ​ವರ ಭೇಟಿ ಮಹತ್ವ ಪಡೆ​ದು​ಕೊ​ಂಡಿದೆ.

ಜೆಡಿ​ಎಸ್‌ -ಕಾಂಗ್ರೆಸ್‌ ​ಮೈ​ತ್ರಿ ಸರ್ಕಾ​ರ​ದಲ್ಲಿ ಮೇಕೆ​ದಾಟು ಯೋಜನೆ ಅನು​ಷ್ಠಾ​ನಕ್ಕೆ ಸಾಕಷ್ಟುಕಸ​ರತ್ತು ನಡೆ​ಸಿ​ದ್ದ ಜಲ​ಸಂಪ​ನ್ಮೂಲ ಸಚಿ​ವ​ರಾ​ಗಿದ್ದ ಡಿ.ಕೆ.​ಶಿ​ವ​ಕು​ಮಾರ್‌, 2019ರಲ್ಲಿ ಯೋಜ​ನಗೆ ಚಾಲನೆ ನೀಡಲು ಪ್ರಯ​ತ್ನಿ​ಸಿ​ದ್ದರು. ಆದರೆ, ದೋಸ್ತಿ ಸರ್ಕಾರ ಪತ​ನ​ಗೊಂಡ ತರು​ವಾಯ ಯೋಜನೆ ಚರ್ಚೆ ತಣ್ಣ​ಗಾ​ಗಿತ್ತು. ಬಿಜೆಪಿ ಸರ್ಕಾರ ಅಸ್ತಿ​ತ್ವಕ್ಕೆ ಬಂದ ನಂತರ ಕೇಂದ್ರ ಸರ್ಕಾರ ತಮಿ​ಳು​ನಾ​ಡಿನ ಆಕ್ಷೇ​ಪಣೆ ಹಿನ್ನೆ​ಲೆ​ಯಲ್ಲಿ ಯೋಜ​ನೆ​ಯನ್ನು ಮರು ಪರಿ​ಶೀ​ಲಿ​ಸು​ವಂತೆ ರಾಜ್ಯ ಸರ್ಕಾ​ರಕ್ಕೆ ಸೂಚಿಸಿತ್ತು. ಕೇಂದ್ರ ಜಲ​ಶಕ್ತಿ ಇಲಾ​ಖೆ​ ರಾಜ್ಯ ಸರ್ಕಾರ ಸಲ್ಲಿ​ಸಿದ ಮನ​ವಿಗೆ ಸ್ಪಂದಿ​ಸಿ ಯೋಜನೆ ಅನು​ಷ್ಠಾ​ನಕ್ಕೆ ಅನು​ಮತಿ ನೀಡಿದೆ.

ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು

ಕೇಂದ್ರ ಅರ​ಣ್ಯ​ಇ​ಲಾಖೆಯಿಂದ ಹಿಂದೇಟು ಏಕೆ?

ಮೇಕೆ​ದಾಟು ಯೋಜ​ನೆ​ಯಿಂದ 3,181 ಹೆಕ್ಟೇರ್‌ ವನ್ಯ​ಜೀವಿ ಸಂರ​ಕ್ಷಿತ ಅರ​ಣ್ಯ ​ಸೇ​ರಿ​ದಂತೆ 5,051 ಹೆಕ್ಟೇರ್‌ ಅರಣ್ಯ ಪ್ರದೇಶ ಮುಳು​ಗ​ಡೆ​ಯಾ​ಗು​ತ್ತದೆ. ಇದರಲ್ಲಿ ಶೇಕಡ 90 ರಷ್ಟುಅರಣ್ಯ ಭೂಮಿ ಮತ್ತು ಉಳಿದ ಕಂದಾಯ ಭೂಮಿ ಸೇರಿದೆ. ಆನೆ, ಜಿಂಕೆ ಸೇರಿದಂತೆ ಇನ್ನಿತರ ವನ್ಯ ಸಂಕುಲ ನೆಲೆ ಕಳೆದುಕೊಳ್ಳಲಿವೆ.

ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್‌ ಕರ್ನಾಟಕ ಮತ್ತು ತಮಿಳುನಾಡುಗಳನ್ನು ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಳಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗಲಿದೆ. ಭವಿಷ್ಯದಲ್ಲಿ ಮಾನವ -ಪ್ರಾಣಿ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾ​ಗಿ ಕೇಂದ್ರ ಅರ​ಣ್ಯ​ಇ​ಲಾಖೆ ಯೋಜನೆ ಅನು​ಷ್ಠಾ​ನಕ್ಕೆ ಗ್ರೀನ್‌ ಸಿಗ್ನಲ್‌ ನೀಡಲು ಮೀನಾ​ಮೇಷ ಎಣಿ​ಸು​ತ್ತಿದೆ ಎನ್ನ​ಲಾಗಿದೆ.

ಈ ಕಾರ​ಣ​ದಿಂದಾಗಿಯೇ ಜಲ​ಸಂಪ​ನ್ಮೂಲ ಸಚಿವ ರಮೇಶ್‌ ಜಾರ​ಕಿ​ಹೊಳಿ ಖುದ್ದಾಗಿ ಮೇಕೆ​ದಾಟು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಯೋಜನೆ ಅನು​ಮ​ತಿ​ಗಾಗಿ ಕೇಂದ್ರ​ದೊಂದಿಗೆ ಚರ್ಚಿ​ಸಿ ಯೋಜ​ನೆಗೆ ಒಪ್ಪಿಗೆ ಪಡೆ​ಯಲು ನಿರ್ಧ​ರಿ​ಸಿ​ದ್ದಾರೆ.

ಜಲಾಶಯ ಯೋಜನೆಯ ತಾಂತ್ರಿಕ ಮಾಹಿತಿ

ಮೇಕೆ​ದಾಟು ಅಣೆಕಟ್ಟೆಯನ್ನು ಮುಗ್ಗೂರು ಅರಣ್ಯ ವಲಯದ ವಾಚಿಂಗ್‌ ಟವರ್‌ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವಿನ ಒಂಟಿಗುಂಡು ಬಳಿ ನಿರ್ಮಿ​ಸಲು ಸ್ಥಳ ಗುರು​ತಿ​ಸ​ಲಾ​ಗಿದೆ.

ಅಣೆಕಟ್ಟೆಯ ಎತ್ತರ 441.20 ಮೀಟರ್‌, ಅಗಲ 674.5 ಮೀಟರ್‌ ಇರಲಿದೆ. ಹೊರ ಹರಿವಿಗಾಗಿ 15* 12 ಮೀಟರ್‌ ಎತ್ತರದಷ್ಟು17 ಗೇಟ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಒಟ್ಟು ನೀರಿನ ಶೇಖರಣಾ ಸಾಮರ್ಥ್ಯ 66.85 ಟಿಎಂಸಿ ನೀರು. 64 ಟಿಎಂಸಿ ನೀರು ತುಂಬಿದರೆ ಜಲಾಶಯ ಭರ್ತಿ ಎಂದರ್ಥ. ಅಣೆಕಟ್ಟಿನ 370.48 ಮೀಟರ್‌ ವರೆಗೆ 7.7 ಟಿಎಂಸಿ ನೀರು​ ಡೆಡ್‌ ಸ್ಟೋರೇಜ್‌ನಲ್ಲಿ ಸಂಗ್ರಹವಾಗಿರುತ್ತದೆ.

ಒಂಟಿಗುಂಡು ಸ್ಥಳದಿಂದ 1.5 ಕಿ.ಮೀ ದೂರದಲ್ಲಿ ಮೇಕೆದಾಟು ಸಿಗಲಿದೆ. ಅಲ್ಲಿ ಅಣೆಕಟ್ಟೆಯಿಂದ ಹೊರ ಬರುವ ನೀರನ್ನು ಬಳಸಿಕೊಂಡು 400 ರಿಂದ 440 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ ಘಟಕ ಸ್ಥಾಪಿಸಲು ಉದ್ದೇ​ಶಿ​ಸ​ಲಾ​ಗಿ​ದೆ. 2018ರಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 5,912 ಕೋಟಿ ರುಪಾಯಿ ವೆಚ್ಚ ತಗಲುವ ಅಂದಾಜಿತ್ತು. ಇದ​ಕ್ಕಾಗಿ ಇಂಧನ ಇಲಾಖೆಯಿಂದ 2 ಸಾವಿರ ಕೋಟಿ ಹಾಗೂ ಜಲಸಂಪನ್ಮೂಲ ಇಲಾಖೆಯಿಂದ 3,912 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿತ್ತು. ಆದ​ರೀಗ ಯೋಜನೆ ವೆಚ್ಚ ಹೆಚ್ಚಾ​ಗುವ ಸಾಧ್ಯ​ತೆ​ಗ​ಳಿವೆ.

click me!