20 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಿಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ

By Kannadaprabha News  |  First Published Apr 25, 2020, 11:44 AM IST

ತಾಳಿಕೋಟೆ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಸಂಕಷ್ಟದಲ್ಲಿ ಮಹಿಳೆಗೆ ದಿನಸಿ ಕಿಟ್‌ ನೀಡಿ ಸಂತೈಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ| ಕೊರೋನಾ ತಡೆಗಟ್ಟುವ ಸಲುವಾಗಿ ಜಾರಿಗೊಂಡಿರುವ ಲಾಕ್‌ಡೌನ್‌ದಿಂದಾಗಿ ಬಡವರಿಗೆ ಕಷ್ಟವಾಗಿದ್ದರೂ ಸರ್ಕಾರದ ನಡೆಗೆ ಸ್ಪಂದಿಸುತ್ತಿದ್ದಾರೆ| 


ತಾಳಿಕೋಟೆ(ಏ.25): ಲಾಕ್‌ಡೌನ್‌ದಿಂದ ಜನರ ಊಟಕ್ಕೆ ತೊಂದರೆಯಾಗುತ್ತಿರುವುದನ್ನು ಗಮ​ನಿ​ಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮುದ್ದೇಬಿಹಾಳ ಮತಕ್ಷೇತ್ರದ ಸುಮಾರು 20 ಸಾವಿರ ಕುಟುಂಬಗಳಿಗೆ ವೈಯಕ್ತಿಕವಾಗಿ ಸುಮಾರು 1 ಕೋಟಿ ವೆಚ್ಚ​ದಲ್ಲಿ ಸಿದ್ಧಪಡಿಸಲಾದ ದವಸ ಧಾನ್ಯಗಳ ಕಿಟ್‌ಗಳನ್ನು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಪತ್ನಿ ಮಹಾದೇವಿ ನಡಹಳ್ಳಿ ಶುಕ್ರವಾರ ಪಟ್ಟಣದ ಹರಳಯ್ಯ ಬಡಾವಣೆಯ ಬಡವರ ಮನೆಮನೆಗೆ ವಿತರಿಸಿ ಚಾಲನೆ ನೀಡಿದ್ದಾರೆ.

ಬಡಾವಣೆ ಜನರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾತನಾಡಿದ ಮಹಾದೇವಿ ಪಾಟೀಲ ನಡಹಳ್ಳಿ, ಕೊರೋನಾ ತಡೆಗಟ್ಟುವ ಸಲುವಾಗಿ ಜಾರಿಗೊಂಡಿರುವ ಲಾಕ್‌ಡೌನ್‌ದಿಂದಾಗಿ ಬಡವರಿಗೆ ಕಷ್ಟವಾಗಿದ್ದರೂ ಸರ್ಕಾರದ ನಡೆಗೆ ಸ್ಪಂದಿಸುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಬೇಕೆಂಬ ಇಚ್ಛೆಯೊಂದಿಗೆ ನನ್ನ ಪತಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಸಲಹೆ ನೀಡಿ ಸುಮಾರು 1 ಕೋಟಿ ವೆಚ್ಚದಲ್ಲಿ ಎಲ್ಲರೀತಿಯ ದಿನಸಿ ಒಳಗೊಂಡ ಸಾಮಗ್ರಿಗಳ ಕಿಟ್‌ ತಯಾರಿಸಿ ಮತಕ್ಷೇತ್ರದ 20 ಸಾವಿರ ಬಡಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಕೆಲ ಬಡಾವಣೆಗಳಲ್ಲಿ ವಾರ್ಡ ಜನರ ಅಪೇಕ್ಷೆ ಮೇರೆಗೆ ನಾನು ಅಥವಾ ನನ್ನ ಪತಿ ನಡಹಳ್ಳಿ ಚಾಲನೆ ಕಾರ್ಯದಲ್ಲಿ ಭಾಗವಹಿಸಿದ್ದೇವೆ ಎಂದು ಹೇಳಿದ್ದಾರೆ. 

Tap to resize

Latest Videos

undefined

'ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂತವ್ರ ಕೈ-ಕಾಲು ಮುರಿಯಿರಿ'

ಬಡವರ ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು ವಿತರಣೆ ಮಾಡುತ್ತಿದ್ದಾರೆ. ಎಲ್ಲ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನೀಡಲಾಗುತ್ತಿದೆ. ವಿಶೇಷವಾಗಿ ಕೊರೋನಾ ವೈರಸ್‌ ತಡೆಗಟ್ಟುವ ಸಲುವಾಗಿ ತಮ್ಮ ಕುಟುಂಬ ಮರೆತು ಕರ್ತವ್ಯದಲ್ಲಿ ತಲ್ಲೀನ​ರಾ​ಗಿ​ರುವ ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ, ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸಿದರಲ್ಲದೇ ಪೊಲೀಸ್‌ ಇಲಾಖೆಯ ಕುಟುಂಭದವರಿಗೆ ಕೊರೊನಾ ವೈರಸ್‌ ಹತೋಟೆಗೆ ಬರುವವರೆಗೂ ಅವರುಗಳಿಗೆ ರೇಶನ್‌ ಪೂರೈಸುವಂತಹ ಕೆಲಸ ಮಾಡುತ್ತೇವೆ ಎಂದರು.

ನಂತರ ಇಂದಿರಾ ನಗರ ಬಡಾವಣೆಯಲ್ಲಿ ಮನೆಮನೆಗೆ ತರಳಿ ದಿನಸಿ ಕಿಟ್‌ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು. ಕಿಟ್‌ ವಿತ​ರಣೆ ಸಂದ​ರ್ಭ​ದಲ್ಲಿ ‘ಮನೆ ಬಾಗಿಲಿಗೆ ದೇವರಂಗ ಬಂದಿ ಎವ್ವ, ನನ್ನ ಕಷ್ಟಕ್ಕೆ ಯಾರೂ ಆಗಿಲ್ಲ. ಒಪ್ಪಿತ್ತಿನ ಊಟಕ್ಕೆ ಒದ್ದಾಡುತ್ತಿದ್ದ ನನಗ ಅನ್ನಕೊಟ್ಟಿದಿ, ನನ್ನ ಗಂಡ ಶ್ರೀಶೈಲಕ್ಕೆ ಪಾದಯಾತ್ರೆ ಹೋದಾಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈಗ ನನ್ನ ಕುಟುಂಬ ಜೀವನದ ನಿರ್ವಹಣೆ ಕಷ್ಟಕರವಾಗಿದೆ ನನಗೆ ನ್ಯಾಯ ದೊರಕಿಸಿಕೊಡು’ ಎಂದು ಇಂದಿರಾ ನಗರ ಬಡಾವಣೆಯಲ್ಲಿ ಮಹಿ​ಳೆ​ಯೊ​ಬ್ಬಳು ಕೈಮುಗಿದು ಕೇಳಿಕೊಂಡ ಪ್ರಸಂಗ ಜರುಗಿತು.

ಆಗ ಶ್ರೀಮತಿ ನಡಹಳ್ಳಿ ಅಪಘಾತಕ್ಕೆ ಸಂಬಂಧಿಸಿದಂತೆ ಅಲ್ಲಿಯ ಪೊಲೀಸ್‌ ಇಲಾಖೆ ದಾಖಲೆಗಳನ್ನು ತರೆಸಿಕೊಂಡು ಸೂಕ್ತ ಪರಿಹಾರ ಕೊಡಿಸುವಂತಹ ಕೆಲಸ ಮಾಡುತ್ತೇನೆ. ಜೊತೆಗೆ ನಿತ್ಯ ಜೀವನ ನಿರ್ವಹಣೆಗೆ ಸರ್ಕಾರದಿಂದ ಸೌಲತ್ತು ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಮುಖಂಡರಾದ ವಾಸುದೇವ ಹೆಬಸೂರ, ಸಂಗಮ್ಮ ದೇವರಳ್ಳಿ, ಮುತ್ತಪ್ಪ ಚಮಲಾಪೂರ, ಸಾಹೇಬಗೌಡ ವಣಕ್ಯಾಳ, ಬಿಜ್ಜಾನಲಿ ನೀರಲಗಿ, ಈಶ್ವರ ಹೂಗಾರ, ಶಿವಶಂಕರ ಹಿರೇಮಠ, ಮಂಜು ಮೈಲೇಶ್ವರ, ರಾಜು ಹಂಚಾಟೆ, ಪೌರ​ಸಭೆ ಸದಸ್ಯ ಪರ​ಶು​ರಾಮ ತಂಗ​ಡ​ಗಿ ಅನೇ​ಕ​ರಿ​ದ್ದರು.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಜನರ ಸಂಕಷ್ಟಕಾಲದಲ್ಲಿ ಸದಾ ಸ್ಪಂದಿಸುತ್ತಾ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ಸದ್ಯ ಕೊರೋನಾ ವೈರಸ್‌ ಸಂದಿಗ್ಧ ಪರಿಸ್ಥಿ​ತಿ​ಯಲ್ಲಿ 20 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಸಿದ್ಧ​ಪ​ಡಿಸಿ ನೀಡುವದರೊಂದಿಗೆ ಜನರ ಕಣ್ಣಿರೋರೆಸುವಂತಹ ಕಾರ್ಯ ಮಾಡಿದ್ದಾರೆ. ಅವರ ಈ ಸಮಾಜ ಸೇವಾ ಕಾರ್ಯ ಹೀಗೆಯೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.
 

click me!