ವಿಶ್ವ ಮಧ್ವ ಮಹಾಪರಿಷತ್ ಬಾಗಲಕೋಟೆ ಘಟಕ ಉಪನಿಷತ ಯುವಕರಿಗಾಗಿ ಆನ್‌ಲೈನ್ ಮೂಲಕ ಧಾರ್ಮಿಕ ಶಿಬಿರ| ಆಧ್ಯಾತ್ಮದ ಅರಿವು ಮೂಡಿಸಲು ಉತ್ತರಾಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶ| ಏ. 25ರಿಂದ ಮೇ 3ರವರೆಗೆ ಬೆಳಗ್ಗೆ 10 ರಿಂದ 11 ಮಧ್ಯಾಹ್ನ 11ರಿಂದ 12 ಹಾಗೂ ಸಂಜೆ 4ರಿಂದ 5 ಮತ್ತು 5 ರಿಂದ 6ರವರೆಗೆ ಆನ್‌ಲೈನ್ ಧಾರ್ಮಿಕ ಶಿಬಿರ|
ಬಾಗಲಕೋಟೆ(ಏ.25): ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಅನಿವಾರ್ಯವಾಗಿರುವ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಆಧ್ಯಾತ್ಮದ ಅರಿವು ಮೂಡಿಸಲು ಉತ್ತರಾಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ವಿಶ್ವ ಮಧ್ವ ಮಹಾಪರಿಷತ್ ಬಾಗಲಕೋಟೆ ಘಟಕ ಉಪನಿಷತ ಯುವಕರಿಗಾಗಿ ಆನ್‌ಲೈನ್ ಮೂಲಕ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದ್ದು ವಿಪ್ರ ಸಮಾಜದವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಚಾಲಕ ಡಾ.ರಘೋತ್ತಮಾಚಾರ್ಯ ನಾಗಸಂಪಗಿ ವಿನಂತಿಸಿಕೊಂಡಿದ್ದಾರೆ.
ಇಂದಿನಿಂದ (ಏ. 25) ಮೇ 3ರವರೆಗೆ ಬೆಳಗ್ಗೆ 10 ರಿಂದ 11 ಮಧ್ಯಾಹ್ನ 11ರಿಂದ 12 ಹಾಗೂ ಸಂಜೆ 4ರಿಂದ 5 ಮತ್ತು 5 ರಿಂದ 6ರವರೆಗೆ ಆನ್‌ಲೈನ್ ಧಾರ್ಮಿಕ ಶಿಬಿರ ನಡೆಯಲಿದೆ.
ಪಂ.ರಘೋತ್ತಮಾಚಾರ್ಯ ನಾಗಸಂಪಿಗಿ, ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗಿ, ಪಂವಿಜಯೀಂದ್ರಾಚಾರ್ಯ ಯತ್ನಟ್ಟಿ ಅವರುಗಳು ಮಾರ್ಗದರ್ಶನ ಮಾಡಲಿದ್ದಾರೆ.
undefined
ಜನರ ನಿದ್ದೆಗೆಡಿಸಿದ ಕೊರೋನಾ ಸೋಂಕು: ಎಲ್ಲೆಡೆ ತೀವ್ರ ಕಟ್ಟೆಚ್ಚರ
ಇಚ್ಛಿತರು ರಘೋತ್ತಮಾಚಾರ್ಯ ನಾಗಸಂಪಗಿ(9480431318), ವಿನಾಯಕ ದೇಸಾಯಿ (9480588628) ಇವರಲ್ಲಿ ಹೆಸರು ನೋಂದಾಯಿಸಬೇಕು. ಅವರಿಗೆ ಆನ್‌ಲೈನ್ ಲಿಂಕ್ ಕಳುಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.