ಇದೀಗ ಕೆಂದ್ರ ಸಚಿವ ಮಿಥುನ್ ಗಡ್ಕರಿ ಚಾಲೆಂಜ್ ಹಾಕಲಾಗಿದೆ. ಅಲ್ಲದೇ ಜನತೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಂಗಳೂರು (ಅ.01): ಬೆಂಗಳೂರು-ಗೋವಾ-ಕೊಚ್ಚಿ- ಸೊಲ್ಲಾಪುರ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ದ.ಕ. ಜಿಲ್ಲೆಯ ಹೆದ್ದಾರಿಗಳು ದುರವಸ್ಥೆಗೆ ತಲುಪಿವೆ. ಇವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಕೇಂದ್ರ ಹೆದ್ದಾರಿ ಖಾತೆ ಸಚಿವ ಗಡ್ಕರಿಗೆ ‘ರೋಡ್ ಚಾಲೆಂಜ್’ ಸವಾಲು ಹಾಕಿದ್ದಾರೆ.
ರಾಡಿಯಾಗಿರುವ ರಸ್ತೆಗಳನ್ನು ಮೊದಲು ಸರಿಪಡಿಸುವಂತೆ ಆಗ್ರಹಿಸಿ ಈ ಅಭಿಯಾನ ನಡೆಸುತ್ತಿದ್ದು, ಮಿಥುನ್ ರೈ ಟ್ವೀಟ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗತೊಡಗಿದೆ. ಇದರಿಂದಾಗಿ ಮೂರು ದಿನಗಳಿಂದ ಮಿಥುನ್ ರೈ ನಿತ್ಯವೂ ಟ್ವೀಟ್ ಮೂಲಕ ಕೇಂದ್ರ ಹೆದ್ದಾರಿ ಸಚಿವರ ಗಮನ ಸೆಳೆಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಅಥವಾ ಸ್ಥಳೀಯ ಸಂಸದರು, ಹೆದ್ದಾರಿ ಇಲಾಖೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಮಾತ್ರ ವ್ಯಕ್ತವಾಗಿಲ್ಲ.
undefined
ಅಮ್ನೆಸ್ಟಿ ಬಾಗಿಲು ಬಂದ್; 'ಕಾನೂನು ಮುರಿದವರು ದೇಶದಿಂದ ಓಡಿಹೋಗ್ತಿದ್ದಾರೆ' ..
ಇದರಿಂದ ಬೇಸತ್ತ ಮಿಥುನ್ ರೈ ತಮ್ಮ ಫೇಸ್‌ಬುಕ್ ಪುಟದಲ್ಲಿ ಹ್ಯಾಷ್ ಟ್ಯಾಗ್ ಬಳಸಿ ನೇರವಾಗಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ‘ರೋಡ್ ಚಾಲೆಂಜ್’ ಪೋಸ್ಟ್ ಮಾಡಿ ಟ್ವೀಟ್ ಮೂಲಕ ಸವಾಲೆಸೆದಿದ್ದಾರೆ. ಇದನ್ನು ಹಲವರು ರೀ ಟ್ವಿಟ್ ಮಾಡಿ ಮಿಥುನ್ ರೈ ಬೆಂಬಲಿಸಿದ್ದಾರೆ.