ರೋಣ:ರಾಷ್ಟ್ರ ಧ್ವಜವನ್ನ ಕಸದಂತೆ ನೆಲದ ಮೇಲೆ ಎಸೆದ ಪಿಡಿಒ..!

By Kannadaprabha News  |  First Published Oct 1, 2020, 1:14 PM IST

ರಾಷ್ಟ್ರ ಬಾವುಟಕ್ಕೆ ಅವಮಾನ ಮಾಡಿರುವ ಗ್ರಾಪಂ ಪಿಡಿಒ ಹಂಚಿನಾಳ ಮತ್ತು ಅಲ್ಲಿನ ಸಿಬ್ಬಂದಿ| ಈ ಕುರಿತು ಯಾರಾದರೂ ಲಿಖಿತ ದೂರ ನೀಡಿದಲ್ಲಿ ಪಿಡಿಒ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದು ಎಂಬ ಭರವಸೆ ನೀಡಿದ ತಾಪಂ ಇಒ ಸಂತೋಷ ಪಾಟೀಲ| ರಾಷ್ಟ್ರ ಬಾವುಟಕ್ಕೆ ಮಾಡಿದ ಅವಮಾನ ಮತ್ತು ಅಧಿಕಾರಿಗಳ ವರ್ತನೆ ವ್ಯಾಪಕ ಖಂಡನೆ| 


ರೋಣ(ಅ.01): ರಾಷ್ಟ್ರ ಬಾವುಟಕ್ಕೆ ದೇಶದಲ್ಲಿಯೇ ಅತ್ಯಂತ ಗೌರವಯುತ ಸ್ಥಾನಮಾನವಿದ್ದು, ಆದರೆ ತಾಲೂಕಿನ ಯಾವಗಲ್ಲ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಷ್ಟ್ರ ಬಾವುಟವನ್ನು ಕಸ ಎಸೆದಂತೆ, ಗ್ರಾಪಂನ ಸಾಮಗ್ರಿಗಳ ಸ್ಟೋರೇಜ್‌ ಕೊಠಡಿಯ ನೆಲದ ಮೇಲೆ ಎಸೆದಿದ್ದು ಅತ್ಯಂತ ಖಂಡನೀಯವಾಗಿದೆ. ಕೂಡಲೇ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ಯಾವಗಲ್ಲ ಗ್ರಾಮದ ಯುವಕರು ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ರಾಷ್ಟ್ರ ಬಾವುಟವನ್ನು ಕಸದಂತೆ ನೆಲದ ಮೇಲೆ ಎಸೆದಿರುವ ಕುರಿತು ಗ್ರಾಪಂ ಪಿಡಿಒ ದೇವರಡ್ಡಿ ಹಂಚಿನಾಳ ಅವರ ಗಮನಕ್ಕೆ ತಂದಿದ್ದು, ನಾನು ಕೆಲಸದ ನಿಮಿತ್ಯ ಬೇರಡೆ ತೆರಳಿದ್ದು, ಕೂಡಲೇ ನಮ್ಮ ಸಿಬ್ಬಂದಿಯನ್ನು ಸಂಪರ್ಕಿಸಿ ಯಾಕೆ ಹೀಗಾಗಿದೆ? ಏನಾಗಿದೆ ಎಂಬುದನ್ನು ವಿಚಾರಿಸುತ್ತೆನೆ ಎಂಬ ಹಾರಿಕೆ ಉತ್ತರ ನೀಡಿದರೇ ಹೊರತು, ಯಾವುದೇ ರೀತಿಯ ಗಂಭೀರತೆ ಕಾಣುತ್ತಿಲ್ಲ ಎಂದು ಯುವಕರು ಪಿಡಿಒ ವಿರುದ್ಧ ಹರಿಹಾಯ್ದರು.

Latest Videos

undefined

ಗದಗ: ಕಪ್ಪತಗುಡ್ಡ ವ್ಯಾಪ್ತಿಯಲ್ಲಿನ 14 ಕಲ್ಲು ಕ್ವಾರಿ ಸ್ಥಗಿತಕ್ಕೆ ನೊಟೀಸ್‌

ರಾಷ್ಟ್ರ ಬಾವುಟಕ್ಕೆ ಅವಮಾನ ಮಾಡಿರುವ ಗ್ರಾಪಂ ಪಿಡಿಒ ಹಂಚಿನಾಳ ಮತ್ತು ಅಲ್ಲಿನ ಸಿಬ್ಬಂದಿ ವರ್ತನೆ ಕುರಿತು ತಾಪಂ ಇಒ ಸಂತೋಷ ಪಾಟೀಲ ಅವರ ಗಮನಕ್ಕೆ ತರಲಾಗಿದೆ. ಈ ಕುರಿತು ಯಾರಾದರೂ ಲಿಖಿತ ದೂರ ನೀಡಿದಲ್ಲಿ ಪಿಡಿಒ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದು ಎಂಬ ಭರವಸೆ ನೀಡಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಯಾವಗಲ್ಲ ಗ್ರಾಮದ ಯುವಕರು ವಾಟ್ಸಪ್‌ ಗ್ರುಪ್‌ನಲ್ಲಿ ವೈರಲ್‌ ಮಾಡಿದ್ದಾರೆ. ರಾಷ್ಟ್ರ ಬಾವುಟಕ್ಕೆ ಮಾಡಿದ ಅವಮಾನ ಮತ್ತು ಅಧಿಕಾರಿಗಳ ವರ್ತನೆ ಕುರಿತು ತಾಲೂಕಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರಾಷ್ಟ್ರ ಬಾವುಟಕ್ಕೆ ಸೂಕ್ತ ಗೌರವ ನೀಡದೇ ಅವಮಾನಿಸಿದ ಯಾವಗಲ್ಲ ಗ್ರಾಪಂ ಪಿಡಿಒ ದೇವರಡ್ಡಿ ಹಂಚಿನಾಳ ಹಾಗೂ ಸಿಬ್ಬಂದಿ ಮೇಲೆ ಕೂಡಲೇ ಜಿಪಂ ಮತ್ತು ತಾಪಂ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ರೀತ ಘಟನೆ ಮತ್ತೆಲ್ಲಿಯೂ ಮರುಕಳಿದಂತಾಗಬೇಕು ಎಂಸ ಯಾವಗಲ್ಲ ಗ್ರಾಮದ ಯುವಕ ಶಿವು ನವಲಗುಂದ ಆಗ್ರಹಿಸಿದರು.
 

click me!