ಅಮ್ನೆಸ್ಟಿ ಬಾಗಿಲು ಬಂದ್; 'ಕಾನೂನು ಮುರಿದವರು ದೇಶದಿಂದ ಓಡಿಹೋಗ್ತಿದ್ದಾರೆ'
ಅಮ್ನೆಸ್ಟಿ ಬಾಗಿಲು ಬಂದ್; 'ಕಾನೂನು ಮುರಿಯುವವರು ದೇಶದಿಂದ ಓಡಿಹೋಗ್ತಿದ್ದಾರೆ' / ಸಂಸದ ರಾಜೀವ್ ಚಂದ್ರಶೇಖರ್/ ಎನ್‌ಜಿಒ ಹೆಸರಿನಲ್ಲಿ ಸಂಸ್ಥೇ ಮಾಡಿದ್ದೇನು/ ದೇಶದ ಎಲ್ಲ ಕಾನೂನುಗಳನ್ನು ಮುರಿದ ಸಂಸ್ಥೆ/ ಎಡಚಿಂತನೆಯ ಪರ ಸದಾ ನಿಲುವು
ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯರು, ಬಿಜೆಪಿ ರಾಷ್ಟ್ರೀಯ ವಕ್ತಾರ
ಕಾನೂನಿನ ಅಡಿಯಲ್ಲಿ ಒಂದೊಂದೆ ಅಂಶಗಳು ದಾಖಲಾಗುತ್ತಿದ್ದಂತೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ನ 'ವ್ಯವಹಾರ' ಗಳೆಲ್ಲ ನಿಧಾನಕ್ಕೆ ಬಾಗಿಲು ಹಾಕಿಕೊಳ್ಳತೊಡಗಿವೆ. ಸರ್ಕಾರ ತನ್ನ ಹಿಂದೆ ಬಿದ್ದಿದೆ, ತನಿಖೆ ತನ್ನ ಮೇಲೆ ನಡೆಯುತ್ತಿದೆ ಎಂಬುದು ಗೊತ್ತಿದ್ದರೂ, ಕಾನೂನುಗಳ ಉಲ್ಲಂಘನೆ ಮಾಡಿದ್ದರೂ ಜನರನ್ನು ಬೇರೆ ದಾರಿಗೆ ಸೆಳೆಯುವ ಯತ್ನವನ್ನು ಮಾಡಿತ್ತು.
ಕಾನೂನು ಉಲ್ಲಂಘನೆ ಮಾಡಿದ್ದು ಅಲ್ಲದೇ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದು ಇದು ಮೊದಲನೆ ಸಾರಿ ಏನಲ್ಲ. ಸರ್ಕಾರದ ಕ್ರಮವನ್ನೇ ದೂರುತ್ತ ಅದರಲ್ಲಿಯೂ ಜಾರಿ ನಿರ್ದೇಶನಾಲಯದ ವರದಿಗಳು ತನ್ನ ವಿರುದ್ಧ ಬರುತ್ತಲೇ ಒಂದಾದ ಮೇಲೆ ಒಂದು ನಾಟಕ ಶುರುಹಚ್ಚಿಕೊಂಡಿತು. ನ್ಯಾಯಾಲಯದ ಮೊರೆ ಹೋಗಿ ತನ್ನ ಮೇಲೆ ತನಿಖೆಯಾಗುವುದನ್ನು ತಡೆಯಲು ಪ್ರಯತ್ನ ಮಾಡಿ ಅಲ್ಲಿಯೂ ಮುಖಭಂಗ ಅನುಭವಿಸಿತು.
ಭಾರತದಲ್ಲಿ ಕಾನೂನೂನಿಗೆ ಆದ್ಯತೆಯೂ ಇದೆ, ಮಾನ್ಯತೆಯೂ ಇದೆ. ಎಲ್ಲ ವಿದೇಶಿ ಎನ್‌ಜಿಓಗಳೂ ಫಾರಿನ್ ಕಾಂಟ್ರಿಬ್ಯುಶನ್ ಆಕ್ಟ್(FCRA) ಅಡಿಯಲ್ಲೇ ಬರಲೇಬೇಕು. ವಿದೇಶಿ ಮೂಲದ ಎನ್‌ಜಿಒಗಳು ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುವುದು, ಯಾವುದೆ ಕಂಪನಿ, ಸಂಸ್ಥೆ ಅಥವಾ ವ್ಯಕ್ತಿ ವಿದೇಶಿ ಮೂಲದಿಂದ ಹಣ ಪಡೆದುಕೊಂಡು ಅದನ್ನು ಇಲ್ಲಿ ವಿನಿಯೋಗ ಮಾಡುವುದು ದೇಶಕ್ಕೆ ಹಾನಿಕಾರಕ ಎಂಬುದನ್ನು ಫಾರಿನ್ ಕಾಂಟ್ರಿಬ್ಯುಶನ್ ಆಕ್ಟ್ 2010 ಸ್ಪಷ್ಟವಾಗಿ ಹೇಳಿದೆ.
ದಶಕಗಳಿಂದಲೂ ಇಂಥ ಕೆಲ ಸಂಸ್ಥೆಗಳು ಚಾಳಿ ಮುಂದುವರಿದುಕೊಂಡೆ ಬಂದಿದೆ. ಈ ದೇಶದ ಕಾನೂನನ್ನು ಗೌರವಿಸುವುದು ತಮಗೆ ಸಂಬಂಧವೇ ಇಲ್ಲ ಎಂದು ಭಾವಿಸಿದಂತೆ ನಡೆದುಕೊಳ್ಳುತ್ತಿವೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಹ ಕಾನೂನಿನ ವಿರುದ್ಧವೇ ನಡೆದುಕೊಂಡಿದೆ. ಅಮ್ನೆಸ್ಟಿ ವಿಚಾರದಲ್ಲಿ ಎದ್ದಿರುವ ಪ್ರಶ್ನೆಗಳು ಬಹು ಮುಖ್ಯ ಮತ್ತು ಅಷ್ಟೆ ಗಂಭೀರ. ಇದನ್ನು ಯಾವ ವಿದೇಶಿ ಸಂಸ್ಥೆಗಾದರೂ ಕೇಳಬಹುದು. ಸೌರ್ವಭೌಮ ದೇಶದಲ್ಲಿ ಬಂದು ಕೆಲಸ ಮಾಡುವ ಸಂಸ್ಥೆ ಈ ನೆಲದ ಕಾನೂನಿಗೆ ಬದ್ಧವಾಗಿ ಇರಬೇಕು ಅಂತೆಯೇ ಕೆಲಸ ಮಾಡಬೇಕು ಎಂದು ನಿರೀಕ್ಷೆ ಮಾಡುವುದು ತಪ್ಪೆ?
ಕೃಷಿ ಮಸೂದೆ ಮಂಡನೆ; ರಾಜ್ಯಸಭಾ ಸದಸ್ಯರು ನಡೆದುಕೊಂಡ ರೀತಿಗೆ ಬೇಸರ!
ಅಮ್ನೆಸ್ಟಿ ಹಣಕಾಸು ವ್ಯವಸ್ಥೆಯ ವರದಿಗಳನ್ನು ನೋಡಿದರೆ ಬಂಡವಾಳ ಬಟಾಬಯಲಾಗುತ್ತದೆ. ಭಾರತದ ಕಾನೂನು ಮುರಿದಿದ್ದರೂ ಅದು ಹೇಗೆ ಕೆಲಸ ಮಾಡುತ್ತಿತ್ತೋ? 2000ನೇ ಇಸವಿಯ ಡಿಸೆಂಬರ್ ನಲ್ಲಿ ಫಾರಿನ್ ಕಾಂಟ್ರಿಬ್ಯುಶನ್ ಆಕ್ಟ್(FCRA) ನ ಒಂದು ಅನುಮತಿ ಪಡೆದುಕೊಂಡಿದ್ದು ಬಿಟ್ಟರೆ ಮತ್ತೇನು ಇಲ್ಲ. 2010 ರ ವರೆಗೆ ರಿನಿವಲ್ ಅಥವಾ ರಿವ್ಯೂ ಯಾವುದನ್ನು ಮಾಡಿಕೊಂಡಿಲ್ಲ. ಇಂಥ ಸಂಸ್ಥೆಗಳು ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ರಿವ್ಯೂ ಪಡೆದುಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಅಮ್ನೆಸ್ಟಿ ಇದು ಯಾವುದನ್ನು ಮಾಡಿಲ್ಲ.
ಇಷ್ಟೆಲ್ಲ ಕಾನೂನು ಮುರಿದಿದ್ದರೂ ವಿದೇಶಿ ಮೂಲದಿಂದ ಸಾಕಷ್ಟು ಹಣ ಪಡೆದುಕೊಳ್ಳುತ್ತಲೆ ಇದೆ. ಹಲವಾರು ಸಂಸ್ಥೆಗಳಿಂದ ಅಂದರೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಫೌಂಡೇಶನ್ (AIF), ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (AIIPL), ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಟ್ರಸ್ಟ್, ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸೌತ್ ಏಷಿಯಾ ಫೌಂಡೇಶನ್ ಳಿಂದ ವಿವಿಧ ಹೆಸರಿನಲ್ಲಿ ದೇಣಿಗೆ ಪಡೆದುಕೊಂಡಿದೆ.
ಕೊರೋನಾ ನಿರ್ವಹಣೆ; ವಿಪಕ್ಷಗಳಿಗೆ ರಾಜೀವ್ ಅಂಕಿ ಅಂಶಗಳ ಪಾಠ
ಅಮ್ನೆಸ್ಟಿ ಬಗ್ಗೆ ಇರುವ ವಿಚಾರಗಳೆಲ್ಲ ಸ್ಪಷ್ಟವಾಗಿವೆ. ಗೃಹ ಇಲಾಖೆ ನಿಮಗೆ ಇಲ್ಲಿ ಮಾನ್ಯತೆ ಇಲ್ಲ ಎಂದು ವರ್ಷಗಳಿಂದ ಹೇಳುತ್ತಿದ್ದರೂ ಅಕ್ರಮವಾಗಿ ಹೊರದೇಶಗಳಿಂದ ಫಂಡ್ ಪಡೆದುಕೊಂಡಿದೆ. ಲಾಭದಾಯಕವಲ್ಲ, ಸ್ವಯಂ ಸೇವಾ ಸಂಸ್ಥೆ ಎಂದು ಹೇಳಿಕೊಂಡು ವಂಚನೆ ಮಾಡಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ಹಲವು ಸಾರಿ ತಿಳಿಸಿದೆ.
ಅಮ್ನೆಸ್ಟಿ ಬಾಗಿಲು ಹಾಕುತ್ತಿರುವುದು ಭಾರತದ ಕಾನೂನಿನ ಭದ್ರತೆಗೆ ಹಿಡಿದ ಒಂದು ಕನ್ನಡಿ. ಭಾರತದ ಕಾನೂನಿನ ಶಕ್ತಿಯೇ ಅಂಥದ್ದು. ಹಣಕಾಸಿನ ವಿಚಾರಗಳು ಮಾತ್ರ ಅಲ್ಲ ಅನೇಕ ಸಂಗತಿಗಳಲ್ಲಿ ಸಂಸ್ಥೆ ಕಾನೂನು ಮುರಿದಿದೆ. ತನ್ನ ನೈತಿಕತೆಯನ್ನು ಸಂಸ್ಥೆ ಕಳೆದುಕೊಂಡಿದೆ ಎಂದು ಪತ್ರಿಕೆಯಲ್ಲಿಯೂ ಉಲ್ಲೇಖ ಮಾಡಲಾಗಿತ್ತು. ತಾರತಮ್ಯ ನೀತಿ, ಓಲೈಕೆ ಮಾಡುವ ವಿಚಾರಗಳು 2019 ರಲ್ಲಿ ಚರ್ಚೆಯಾಗಿದ್ದವು.
ಸಿಎಎ ವಿರುದ್ಧದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿಯೂ ಅಮ್ನೆಸ್ಟಿಯ ಹೆಸರು ಕೇಳಿ ಬಂದಿತ್ತು. ಸಿಎಎ ಕಾನೂನು ಮುಸ್ಲಿಮರ ವಿರುದ್ಧವಾಗಿದೆ ಎಂದು ಸಂಸ್ಥೆಯೇ ಪ್ರಚಾರ ಮಾಡಿತ್ತು. ಹಿಂದೂ ಸಿದ್ಧಾಂತಗಳಿಗೆ ವಿರುದ್ಧವಾಗಿ ಕಾರಣವಿಲ್ಲದೆ ವಿರೋಧ ಮಾಡಿದ್ದಕ್ಕೆ ದಾಖಲೆಗಳು ಇವೆ. ಬಿಜೆಪಿ ಮತ್ತು ಹಿಂದೂ ನಂಬಿಕೆಗಳ ಮೇಲೆ ಕಾರಣವಿಲ್ಲದೆ ಅಪಪ್ರಚಾರ ಮಾಡಿದ್ದು ಇದೆ.
ಮಾನವ ಹಕ್ಕು ರಕ್ಷಣೆ ಎಂಬ ಹೆಸರಿನಲ್ಲಿ ಸಮಾಜದಲ್ಲಿ ಹಿಂಸಾತ್ಮಕ ಶಕ್ತಿಗಳಿಗೆ ಉತ್ತೇಜನ ನೀಡಿಕೊಂಡೆ ಬಂದಿತ್ತು. ಶೀತಲ ಸಮರದ ಕಾಲದಿಂದ ಅಮ್ನೆಸ್ಟಿಯದ್ದೂ ಒಂದೇ ಇತಿಹಾಸ. ರಾಜಕಾರಣದದ ಉದ್ದೇಶ ಇಟ್ಟುಕೊಂಡೆ ಕೆಲಸ ಮಾಡಿದ್ದನ್ನು ಕಂಡಿದ್ದೇವೆ. ಎಡ ಚಿಂತನೆಗಳ ಪರವಾಗಿ ಪಾಶ್ಚಾತ್ಯ ದೇಶಗಳಲ್ಲಿ 2000 ಇಸವಿವರೆಗೆ ಕೆಲಸ ಮಾಡಿಕೊಂಡು ಬಂದಿದ್ದನ್ನು ಕಂಡಿದ್ದೇವೆ. ಎಡಚಿಂತನೆಗಳು ಇದ್ದವರೆ ಸಂಸ್ಥೆಯನ್ನು ಒಂದೆಲ್ಲಾ ಒಂದು ರೀತಿ ಮುನ್ನಡೆಸಿದ್ದಾರೆ.
2010 ರಲ್ಲಿ ಜವಹರಲಾಲ್ ನೆಹರಿ ಮರಿ ಮೊಮ್ಮಗಳು ನಯನ್ ತಾರಾ ಸಹಗಲ್ ಪುತ್ರಿ ಗೀತಾ ಸಹಗಲ್ ಸಹ ಇಸ್ಲಾಮಿಕ್ ವಿಚಾರಕ್ಕೆ ಸಂಬಂಧಸಿ ಅಮ್ನೆಸ್ಟಿಯನ್ನು ತೊರೆಯುತ್ತಾರೆ. ಮಾನವ ಹಕ್ಕು ಹೆಸರಿನಲ್ಲಿ ಎಡಚಿಂತನೆ, ಉಗ್ರವಾದಿಗಳ ಗುಂಪು, ನಕ್ಸಲೈಟ್ ಗಳ ಗುಂಪುಗಳ ಜತೆ ಅಮ್ನೆಸ್ಟಿ ಗುರುತಿಸಿಕೊಂಡೆ ಬಂದಿತ್ತು.
ಅಮ್ನೆಸ್ಟಿ ಇಂಡಿಯಾ ಭಾರತದಲ್ಲಿ ಬಾಗಿಲು ಹಾಕುತ್ತಿದೆ. ಎನ್‌ಜಿಒ ಎಂದುಕೊಂಡು ಭಾರತದ ಪ್ರವೇಶ ಪಡೆದರೆ ಅದೊಂದು ಪ್ರೀ ಪಾಸ್ ಎಂದು ಭಾವಿಸಿಕೊಂಡಂತಹ ಸಂಸ್ಥೆಗಳಿಗೆ ಇದೊಂದು ಪಾಠ.