ಉಡುಪಿ: ಸಮುದ್ರ ತೀರದಲ್ಲಿ ಕ್ಷಿಪಣಿಯಾಕಾರದ ವಸ್ತು ಪತ್ತೆ..!

Published : Sep 23, 2020, 11:26 AM ISTUpdated : Sep 23, 2020, 11:32 AM IST
ಉಡುಪಿ: ಸಮುದ್ರ ತೀರದಲ್ಲಿ ಕ್ಷಿಪಣಿಯಾಕಾರದ ವಸ್ತು ಪತ್ತೆ..!

ಸಾರಾಂಶ

ಸಮುದ್ರದಲ್ಲಿ ತೇಲಿ ಬಂದ 10 ಅಡಿ ಉದ್ದದ ಕ್ಷಿಪಣಿಯಾಕಾರದ ವಸ್ತು| ಉಡುಪಿ ಜಿಲ್ಲೆಯ ಶಿರೂರು ಸಮೀಪದ ಪಡಿಯಾರಹಿತ್ಲು ಸಮುದ್ರತೀರದಲ್ಲಿ ಪತ್ತೆ| ಈ ಬಗ್ಗೆ ಗೋವಾದ ನೌಕಾ ನೆಲೆಗೆ ಮಾಹಿತಿ ನೀಡಿದ  ಕರಾವಳಿ ಕಾವಲು ಪಡೆ|   

ಬೈಂದೂರು(ಸೆ.23): ಉಡುಪಿ ಜಿಲ್ಲೆಯ ಶಿರೂರು ಸಮೀಪದ ಪಡಿಯಾರಹಿತ್ಲು ಸಮುದ್ರತೀರದಲ್ಲಿ ಮಂಗಳವಾರ 10 ಅಡಿ ಉದ್ದದ ಕ್ಷಿಪಣಿಯಾಕಾರದ ವಸ್ತುವೊಂದು ತೇಲಿ ಬಂದು ದಂಡೆಯ ಮೇಲೆ ಬಿದ್ದಿದೆ. ಆದರೆ ಅದೇನೆಂದು ಇನ್ನೂ ಪತ್ತೆಯಾಗಿಲ್ಲ, ಈ ಬಗ್ಗೆ ಪೊಲೀಸರು ನೌಕಾಪಡೆಯ ತಜ್ಞರ ಅಭಿಪ್ರಾಯವನ್ನು ಕೇಳಿದ್ದಾರೆ. 

ಮಂಗಳವಾರ ಮುಂಜಾನೆ ಈ ಕಬ್ಬಿಣದ ಸಿಲಿಂಡರ್‌ನಂತಿರುವ ಈ ವಸ್ತುವನ್ನು ಗಮನಿಸಿದ ಸ್ಥಳೀಯರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್‌ ಮೂಲಕ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದರು. ಆದರೆ ಅದು ಸಾಕಷ್ಟು ಉದ್ದ ಮತ್ತು ಭಾರವಿದ್ದುದರಿಂದ ಸಾಧ್ಯವಾಗಲಿಲ್ಲ. 

ಉಡುಪಿಯಲ್ಲಿ ಪ್ರವಾಹ: ಜೀವದ ಹಂಗು ತೊರೆದು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸಹೋದರರು

ಹಡಗುಗಳಲ್ಲಿ ದಿಕ್ಸೂಚಿಯಂತೆ ಬಳಸುವ ಸಾಧನ ಇದಾಗಿರುವ ಸಾಧ್ಯತೆ ಇದೆ ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್‌ ಆರ್‌.ತಿಳಿಸಿದ್ದಾರೆ. ಈ ಬಗ್ಗೆ ಗೋವಾದ ನೌಕಾ ನೆಲೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 

PREV
click me!

Recommended Stories

ನಾನು ನನ್ನ ಸ್ವಂತ ಹಣದಲ್ಲೇ ರಾಜನಂತೆ ಬದುಕಿದ್ದೆ, ಆದರೆ..... ಕರ್ನಾಟಕ ಹೈಕೋರ್ಟ್ ತೀರ್ಪಿಗೆ ವಿಜಯ್ ಮಲ್ಯ ಭಾವುಕ!
ಸ್ಟಿಂಗ್ ಆಪರೇಷನ್ ಫುಲ್ ಡಿಟೇಲ್ಸ್ ಅವರ ಹತ್ರನೇ ಇರೋದಾ? ಸಿಟಿ ರವಿ ಹೇಳಿದ ಆ ನಾಯಕ ಯಾರು?