ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವ| ಸೆಪ್ಟಂಬರ್ 26 ರಂದು ಬೆಳಗ್ಗೆ 8.31ಕ್ಕೆ ಸಲ್ಲುವ ತುಲಾಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4ರಂದು ಬೆಳಗ್ಗೆ 10.33ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.14ರಂದು ಬೆಳಗ್ಗೆ 11.45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು ನಡೆಯಲಿದೆ|
ಮಡಿಕೇರಿ(ಸೆ.23): ಅಕ್ಟೋಬರ್ 17ರಂದು ಬೆಳಗ್ಗೆ 7.03ಕ್ಕೆ ಕನ್ಯಾ ಲಗ್ನ ಮೂಹೂರ್ತದಲ್ಲಿ ಕಾವೇರಿ ತೀರ್ಥೋದ್ಭವ ಜರುಗಲಿದೆ.
ಸೆಪ್ಟಂಬರ್ 26 ರಂದು ಬೆಳಗ್ಗೆ 8.31ಕ್ಕೆ ಸಲ್ಲುವ ತುಲಾಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4ರಂದು ಬೆಳಗ್ಗೆ 10.33ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.14ರಂದು ಬೆಳಗ್ಗೆ 11.45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು ನಡೆಯಲಿದೆ.
‘ವಿಧಾನ ಪರಿಷತ್‌ಗೆ ಯೋಗೇಶ್ವರ್ ನಾಮನಿರ್ದೇಶನ ಕಾನೂನುಬಾಹಿರ’
ಅಂದೇ ಸಂಜೆ 5 ಗಂಟೆ 15 ನಿಮಿಷಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವುದು, ಅ.17ರಂದು ಶನಿವಾರ ಬೆಳಗ್ಗೆ 7.03 ನಿಮಿಷಕ್ಕೆ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀರ್ಥೋದ್ಭವ ನಡೆಯಲಿದೆ ಎಂದು ಶ್ರೀ ತಲಕಾವೇರಿ- ಭಾಗಮಂಡಲ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ.