ಆತ ಬಡ ರೈತ. ಕೈ ತುಂಬಾ ಸಾಲ ಸೂಲ ಮಾಡ್ಕೊಂಡು ಟೊಮ್ಯಾಟೋ ಬೆಳೆ ಹಾಕಿದ್ದ. ಇನ್ನೇನು ಬೆಳೆ ಕೈ ಹಿಡಿಯಿತು ಮಾಡಿದ್ದ ಸಾಲವನ್ನ ತೀರಿಸೋಣ ಎಂದು ಕನಸು ಕಾಣುತ್ತಿದ್ದ ಅನ್ನದಾತ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಆ.03): ಆತ ಬಡ ರೈತ. ಕೈ ತುಂಬಾ ಸಾಲ ಸೂಲ ಮಾಡ್ಕೊಂಡು ಟೊಮ್ಯಾಟೋ ಬೆಳೆ ಹಾಕಿದ್ದ. ಇನ್ನೇನು ಬೆಳೆ ಕೈ ಹಿಡಿಯಿತು ಮಾಡಿದ್ದ ಸಾಲವನ್ನ ತೀರಿಸೋಣ ಎಂದು ಕನಸು ಕಾಣುತ್ತಿದ್ದ ಅನ್ನದಾತ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಒಂದುವರೆ ಎಕರೆಯಲ್ಲಿ ಬೆಳೆದ ಟೊಮ್ಯಾಟೋ ಬೆಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮಣ್ಣು ಪಾಲಾಗಿದೆ.
undefined
ಕಣ್ಣಾಡಿಸಿದ ಕಡೆಯಲ್ಲಾ ಟೊಮ್ಯಾಟೋ ಗಿಡಗಳದ್ದೆ ಕಲರವ. ಎತ್ತ ನೋಡಿದ್ರು ಬೆಳೆದು ನಿಂತಿರುವ ಟೊಮ್ಯಾಟೋ. ಇನ್ನೇನು ಒಂದು ವಾರ ಕಳೆದಿದ್ರೆ ಬೆಳೆದ ಟೊಮ್ಯಾಟೋವನ್ನ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದಿತ್ತು. ಅಷ್ಟರಲ್ಲಾಗಲೇ ಕಿರಾತಕರ ಕಣ್ಣು ಬೆಳೆದು ನಿಂತ ಟೊಮ್ಯಾಟೋ ಗಿಡದ ಮೇಲೆ ಬಿದ್ದಿದೆ. ಬರೋಬ್ಭರಿ ಒಂದುವರೆ ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಟಮ್ಯಾಟೋ ಗಿಡವನ್ನ ಬೇರು ಸಮೇತ ಕಿತ್ತಾಕಲಾಗಿದೆ. ಇದರಿಂದ ಕಂಗಾಲಾದ ರೈತ ಈಗ ಕಣ್ಣೀರು ಹಾಕುತ್ತಾ ಗೊಳಾಡುವಂತ ಪರಿಸ್ಥಿತಿ ಎದುರಾಗಿದೆ.
ಸೌಜನ್ಯ ಕೊಲೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಹೆಸರು ಕೆಡಿಸುವ ಹುನ್ನಾರ: ಸಿದ್ದಸೇನ ಮುನಿಮಹಾರಾಜ
ಅಂದಹಾಗೆ ಈ ಘಟನೆ ನಡೆದಿದ್ದು ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ. ಹೌದು! ರೈತ ಮಂಜುನಾಥ್ ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಳೆ ಇರುವ ಕಾರಣ ತನ್ನ ಒಂದುವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆ ಹಾಕಿದ್ರು. ತನ್ನ ಅಕ್ಕನ ಬಳಿ ಚಿನ್ನಾಭರಣ ಪಡೆದು ಬ್ಯಾಂಕ್ ನಲ್ಲಿ ಅಡಮಾನವಿಟ್ಟು ಜೊತೆಗೆ ಕೈ ಸಾಲ ಮಾಡಿಕೊಂಡು ಬೆಳೆ ಹಾಕಿದ್ರು ಇನ್ನೇನು ಬೆಳೆ ಕೈಗೆ ಬಂತು ಮಾಡಿದ್ದ ಸಾಲವನ್ನ ತೀರಿಸಬಹುದೆಂಬ ಆಸೆಯಲ್ಲಿ ಇದ್ರು. ಆದ್ರೆ ರಾತ್ರೋ ರಾತ್ರಿ ಜಮೀನಿಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಒಂದುವರೆ ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನ ಬೇರು ಸಮೇತ ಕಿತ್ತಾಕಿದ್ದಾರೆ.
ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು: ಆರಗ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಇತ್ತ ಶ್ವಾನ ದಳವನ್ನ ತಂದು ಕೃತ್ಯ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಅದೇನೆ ಹೇಳಿ ಸಾಲ ಸೂಲ ಮಾಡಿಕೊಂಡು ಬೆಳೆ ಬೆಳೆದಿದ್ದ ರೈತನ ಬದುಕಂತು ಈಗ ಮೂರಾ ಬಟ್ಟೆಯಾಗಿದೆ. ಕೃತ್ಯವೆಸಗಿದ ದುಷ್ಕರ್ಮಿಗಳ ವಿರುದ್ದ ಸೂಕ್ತ ಕ್ರಮ ಕೈ ಗೊಳ್ಳುವಂತೆ ರೈತರು ಒತ್ತಾಯಿಸುತ್ತಿದ್ದಾರೆ.