ಸಿಎಂ ಟ್ರ್ಯಾಕ್‌ಗೆ ಮರ​ಳಿ​ದ್ದಾ​ರೆ, ಹೈಕ್ಲಾಸಾಗಿ ಬೌಲಿಂಗ್‌ ಬ್ಯಾಟಿಂಗ್‌ ಮಾಡ್ತಿದ್ದಾರೆ: ಸಚಿವ ಸೋಮಣ್ಣ

Published : May 11, 2022, 06:07 AM ISTUpdated : May 11, 2022, 06:21 AM IST
ಸಿಎಂ ಟ್ರ್ಯಾಕ್‌ಗೆ ಮರ​ಳಿ​ದ್ದಾ​ರೆ, ಹೈಕ್ಲಾಸಾಗಿ ಬೌಲಿಂಗ್‌ ಬ್ಯಾಟಿಂಗ್‌ ಮಾಡ್ತಿದ್ದಾರೆ: ಸಚಿವ ಸೋಮಣ್ಣ

ಸಾರಾಂಶ

*  ರಾಜ್ಯ ವಿಧಾ​ನ​ಸಭಾ ಚುನಾ​ವಣೆ ನಿಗದಿತ ಸಮಯದಲ್ಲೇ ನಡೆ​ಯ​ಲಿ​ದೆ *  ಸಚಿವ ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ಮುಖ್ಯ​ಮಂತ್ರಿ ಪರಮಾಧಿಕಾರ *   ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಗೆ ಬರ್ತಾರೋ, ಎಲ್ಲಿಗೆ ಹೋಗುತ್ತಾರೋ ಗೊತ್ತಾಗುವುದಿಲ್ಲ 

ಚಿತ್ರದುರ್ಗ(ಮೇ.11):  ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ(Basavaraj Bommai) ಅವ​ರೀಗ ಮೈನ್‌ ಟ್ರ್ಯಾಕ್‌ಗೆ ಬಂದಿದ್ದಾರೆ. ಹೈಕ್ಲಾಸಾಗಿ ಬೌಲಿಂಗ್‌, ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮುಂದಿನ ಚುನಾ​ವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆ​ಸ​ಲಾ​ಗು​ವುದು ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ಹೇಳಿದರು. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ವಿಧಾ​ನ​ಸಭಾ ಚುನಾ​ವಣೆ(Karnataka Assembly Election) ನಿಗದಿತ ಸಮಯದಲ್ಲೇ ನಡೆ​ಯ​ಲಿ​ದೆ. ಸಚಿವ ಸಂಪುಟ(Cabinet Expansion) sಪುನರ್‌ ರಚನೆ ಅಥವಾ ವಿಸ್ತರಣೆ ಮುಖ್ಯ​ಮಂತ್ರಿ ಪರಮಾಧಿಕಾರ. ಈ ಸಂಬಂಧ ಅವರೇ ಸೂಕ್ತ ತೀರ್ಮಾನ ತೆಗೆ​ದು​ಕೊ​ಳ್ಳ​ಲಿ​ದ್ದಾ​ರೆ ಎಂದು ಹೇಳಿ​ದ​ರು. ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಗೆ ಬರ್ತಾರೋ, ಎಲ್ಲಿಗೆ ಹೋಗುತ್ತಾರೋ ಗೊತ್ತಾಗುವುದಿಲ್ಲ. ಅವರವರ ಅಡ್ಜಸ್ಟ್‌ಮೆಂಟ್‌ ಎಲ್ಲಿರುತ್ತೋ ಅಲ್ಲಿಗೆ ಹೋಗ್ತಾರೆ ಎಂದು ಸೋಮಣ್ಣ ಹೇಳಿದರು.

ಶಾಸಕ ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸಚಿವ ವಿ.ಸೋಮಣ್ಣ

ರಾಜ್ಯದಲ್ಲಿ ಆರು ಲಕ್ಷ ಮನೆ ನಿರ್ಮಾಣಕ್ಕೆ ಸಿಎಂ ಗುರಿ

ಚಳ್ಳಕೆರೆ:  ನಗರ ಹಾಗೂ ಗ್ರಾಮೀಣ ಪ್ರದೇಶದ ಸೂರಿಲ್ಲದ ಕಡುಬಡವರಿಗೆ ಆರು ಲಕ್ಷ ಮನೆಗಳ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರಿ ನೀಡಿದ್ದಾರೆಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಚಳ್ಳಕೆರೆ ನಗರದ ಕೆಎಚ್‌ಬಿ ಲೇಔಟನಲ್ಲಿ ಮಂಗಳವಾರ ವಸತಿ ಇಲಾಖೆ, ರಾಜೀವ್‌ ಗಾಂಧಿ ವಸತಿ ನಿಗಮ ಹಾಗೂ ಚಳ್ಳಕೆರೆ ನಗರ ಸಭೆ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ(ನಗರದ) ಎಎಚ…ಪಿ ಘಟಕದಡಿ ಜಿ+2 ಮಾದರಿಯ 1008 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೊಳಚೆ ಅಭಿವೃದ್ಧಿ ಮಂಡಳಿಯಿಂದ ರಾಜ್ಯದಲ್ಲಿ(Karnataka) 1.80 ಲಕ್ಷ ಮನೆ ನಿರ್ಮಾಣ ಮಾಡಿ 40 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಈಗಾಗಲೇ 4 ಲಕ್ಷ ಮನೆಗಳನ್ನು ನಗರ ಪ್ರದೇಶದಲ್ಲಿ ಹಾಗೂ 1 ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.

ರಾಜೀವ್‌ ಗಾಂಧಿ ವಸತಿ ನಿಗಮದಿಂದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಸರ್ಕಾರದಿಂದ ಮಂಜೂರು ಮಾಡಿದ ಮನೆಗಳನ್ನು ಅಡಮಾನ ಹಾಗೂ ಭೋಗ್ಯಕ್ಕೆ ಪಡೆಯುವ ಪದ್ಧತಿಯನ್ನು ತಡೆಯಲಾಗಿದೆ. ಮನೆಗಳನ್ನು ಮಹಿಳಾ ಫಲಾನುಭವಿಗಳ ಹೆಸರಿಗೆ ನೀಡಲಾಗುತ್ತಿದೆ. ಮನೆಗಳಿಗೆ ನೀಡುತ್ತಿರುವ ಅನುದಾನ ಮೊತ್ತ ಹೆಚ್ಚಳಕ್ಕೆ ಕೇಂದ್ರ ಸಚಿವರಿಂದ ಜೊತೆ ಚರ್ಚಿಸಲಾಗುವುದು. ಗ್ರಾಮೀಣ ಭಾಗದಲ್ಲಿ ವಸತಿಯೋಜನೆ ಫಲಾನುಭವಿಗಳ ಆಯ್ಕೆಗೆ ಆದಾಯ ಮಿತಿಯನ್ನು 37 ಸಾವಿರ ರುಪಾಯಿಗಳಿಂದ 1.20 ಲಕ್ಷಕ್ಕೆ ಹಾಗೂ ನಗರ ಪ್ರದೇಶದಲ್ಲಿ 87 ಸಾವಿರ ಇದ್ದ ಆದಾಯ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.

ಅಲೆಮಾರಿಗಳಿಗೆ 3500 ಮನೆಗಳ ಮಂಜೂರು

ಕಾಡುಗೊಲ್ಲರು, ಸುಡಗಾಡು ಸಿದ್ದರು ಸೇರಿದಂತೆ ಹಿಂದುಳಿದ ವರ್ಗಗಳಿಗೆ ದೇವರಾಜ ಅರಸು ನಿಗಮದಿಂದ ಮನೆ ನೀಡಲಾಗುತ್ತಿದೆ. ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ 3500 ಮನೆಗಳ ಮಂಜೂರು ಮಾಡಲಾಗಿದೆ. ಚಳ್ಳಕೆರೆ ನಗರದಲ್ಲಿ ಒಟ್ಟು 48 ಎಕರೆ ಪ್ರದೇಶದಲ್ಲಿ 63 ಕೋಟಿ ವೆಚ್ಚದಲ್ಲಿ ಜಿ+2 ಮಾದರಿಯ 1008 ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಸೋಮಣ್ಣ ಹೇಳಿದರು.

ನಗರ ಸಭೆ ಸದಸ್ಯರು ಉತ್ತಮ ಗುಣಮಟ್ಟದ ಮನೆಗಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು. ನೂತನವಾಗಿ ನಿರ್ಮಿಸಲಾಗುತ್ತಿರುವ ವಸತಿ ಸಂಕೀರ್ಣ ಪ್ರದೇಶಕ್ಕೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಹೆಸರನ್ನು ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

PMAY: ಕರ್ನಾಟಕದಲ್ಲಿ ವಸತಿ ಯೋಜನೆ ಶರವೇಗದಲ್ಲಿ ಜಾರಿ: ಸೋಮಣ್ಣ

ಈಗಾಗಲೇ ಮಂಜೂರು ಆಗಿರುವ 198 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ನಿಗದಿತ ಕಾಲಮತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಜಿ+2 ಮಾದರಿಯಲ್ಲಿ ಹಮಾಲರಿಗೂ ಕೂಡ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಶಾಸಕ ರಘುಮೂರ್ತಿ ಮಾತನಾಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6500 ನಿವೇಶನ ರಹಿತ ಕುಟುಂಬಗಳಿವೆ. ಇವರಿಗೆ ವಸತಿ(Sites) ಮಂಜೂರು ಮಾಡಬೇಕು. ಮಂಜೂರು ಮಾಡಿದ ಆಶ್ರಯ ಮನೆಗಳಲ್ಲಿ ಪರಿಶಿಷ್ಟಜಾತಿ ಹಾಗೂ ಪಂಗಡದವರಿಗೆ ಗುರಿ ಹೆಚ್ಚಳ ಮಾಡಬೇಕು ಎಂದರು.

ನಗರ ಸಭೆ ಅಧ್ಯಕ್ಷ ಸುಮ ಅಂಜನಪ್ಪ, ಉಪಾಧ್ಯಕ್ಷೆ ಮಂಜುಳ ಪ್ರಸನ್ನ ಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರನಾಯಕ, ಜಿಲ್ಲಾಧಿಕಾರಿ ಕವಿತಾ.ಎಸ್‌. ಮನ್ನಿಕೇರಿ, ನಗರ ಸಭೆ ಆಯುಕ್ತೆ ಲೀಲಾವತಿ, ತಹಸೀಲ್ದಾರ್‌ ರಘುಮೂರ್ತಿ ಉಪಸ್ಥಿತರಿದ್ದರು.
 

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!