ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರ ಜಾತ್ರಾ ಮಹೋತ್ಸವ ಆಚರಿಸಲು ಸಿದ್ದತೆ ಕೈಗೊಳ್ಳಲು ಸಚಿವ ವಿ.ಸೋಮಣ್ಣ ಸೂಚಿಸಿದರು.
ಚಾಮರಾಜನಗರ (ಸೆ.13): ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರ ಜಾತ್ರಾ ಮಹೋತ್ಸವ ಆಚರಿಸಲು ಸಿದ್ದತೆ ಕೈಗೊಳ್ಳಲು ಸಚಿವ ವಿ.ಸೋಮಣ್ಣ ಸೂಚಿಸಿದರು. ಬೆಟ್ಟದ ನಾಗಮಲೆ ಭವನ ಸಭಾಂಗಣದಲ್ಲಿ ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರ ಜಾತ್ರಾ ಕಾರ್ಯಕ್ರಮಗಳ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಗಳೊಂದಿಗೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಸಲು ಸಿದ್ಧತಾ ಪ್ರಕ್ರಿಯೆ ಕೈಗೊಳ್ಳಬೇಕೆಂದು ತಿಳಿಸಿದರು.
ಸ್ನಾನಗೃಹ ಆಧುನೀಕರಣಗೊಳಿಸಿ: ಭಕ್ತಾದಿಗಳಿಗೆ ಕುಡಿವ ನೀರಿನ ವ್ಯವಸ್ಥೆ,ಶುದ್ಧ ಕುಡಿವ ನೀರಿನ ಘಟಕಗಳಲ್ಲಿಯೂ ನೀರು ಲಭ್ಯವಾಗಬೇಕು. ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೂ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು. ಭಕ್ತಾಗಳಿಗೆ ಸ್ನಾನಗೃಹಗಳಲ್ಲಿ 24*7 ಅವಧಿ ನೀರು ಪೂರೈಸಬೇಕು. ಸ್ನಾನಗೃಹಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು,ಅವಶ್ಯವಿರುವೆಡೆ ಶಾಮಿಯಾನ ಅಳವಡಿಸಬೇಕು. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಜಾತ್ರೆಗಳಿಗೆ ಭಕ್ತಾಗಳು ಬರಲು ಕೆ.ಎಸ್.ಆರ್.ಟಿ.ಸಿ ಬಸ್ ನಿಯೋಜಿಸಬೇಕು. ಬಸ್ ನಿಲುಗಡೆಗೆ ಹೆಚ್ಚುವರಿ ಸ್ಥಳ ನಿಗದಿಪಡಿಸಬೇಕು. ಖಾಸಗಿ ವಾಹನಗಳಿಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರಬೇಕು.
undefined
ಧೈರ್ಯವಿದ್ದರೆ ಕಾಂಗ್ರೆಸ್ ಅವಧಿ ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಿ: ಆರ್.ಧ್ರುವನಾರಾಯಣ
ಸಂಚಾರ ದಟ್ಟಣೆಯಾಗದಂತೆ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಗಮನಿಸಬೇಕು. ಜಾತ್ರಾ ದಿನಗಳಲ್ಲಿ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಆರೋಗ್ಯ ಇಲಾಖೆ, ಜಾತ್ರೆ ವೇಳೆ ಹೆಚ್ಚಿನ ವೈದರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು. ಅಂಬುಲೆನ್ಸ್ ಸಹ ಲಭ್ಯವಿರಬೇಕು. ಆರೋಗ್ಯ ತಪಾಸಣಾ ಕೇಂದ್ರ, ಅಗತ್ಯ ಔಷಧಗಳು, ಇತರೆ ಆರೋಗ್ಯ ಸಂಬಂಧಿ ಸೌಲಭ್ಯಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಸ್ವಚ್ಚತೆಗೆ ಆದ್ಯತೆ ಇರಲಿ: ಪ್ಲಾಸ್ಟಿಕ್ ನಿಯಂತ್ರಣ, ನೈರ್ಮಲ್ಯ ಜಾಗೃತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತಾಗಳಿಗೆ ಕುಡಿವ ನೀರಿನ ವ್ಯವಸ್ಥೆ, ಇತರೆ ವ್ಯವಸ್ಥೆಗಳಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಜಾತ್ರಾ ವೇಳೆ ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು. ಭಕ್ತಾಧಿಗಳ ವಾಸ್ತವ್ಯಕ್ಕೆ ವಸತಿ ನಿರ್ವಹಣೆ ಉತ್ತಮವಾಗಿರಬೇಕು, ಕೊಠಡಿ, ಡಾರ್ಮಿಟರಿಗಳಲ್ಲಿ ಸ್ವಚ್ಚತೆ ಕಾಪಾಡಬೇಕು, ಹೆಚ್ಚುವರಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಸಚಿವರು ತಿಳಿಸಿದರು.
ಜಾತ್ರೆ ಸಮಯದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಆಗಬೇಕು. ಆಯಕಟ್ಟಿನ ಸ್ಥಳಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೊಲೀಸರ ನಿಯೋಜಿಸಬೇಕು. ಅಬಕಾರಿ ಇಲಾಖೆ ಮದ್ಯ ಸಾಗಣೆ ತಡೆಗಟ್ಟುವ ಉದ್ದೇಶದಿಂದ ತಾಳಬೆಟ್ಟದಿಂದ ಪಾಲಾರ್‌ವರೆಗೆ ತಪಾಸಣೆ ಮಾಡಬೇಕು. ತಾಳಬೆಟ್ಟದ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾ ಕೇಂದ್ರ ತೆರೆಯಬೇಕು ಎಂದು ಸಚಿವರು ತಿಳಿಸಿದರು.
ಶಾಸಕರಾದ ಎನ್. ಮಹೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್,ಪ್ರಾಧಿಕಾರದ ಕಾರ್ಯದರ್ಶಿ ಎಸ್. ಕಾತ್ಯಾಯಿನಿದೇವಿ, ಜಿ.ಪಂ. ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್, ಎಎಸ್ಪಿ ಸುಂದರರಾಜು, ಕೆಎಸ್‌ಆರ್‌ಟಿಸಿ ಡಿಸಿ ಶ್ರೀನಿವಾಸ್, ಆರ್‌ಟಿಒ ಸುಧಾಮಣಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್‌ಕುಮಾರ್, ಎಸಿಎಫ್ ಭಾಗ್ಯಲಕ್ಷಿತ್ರ್ಮೕ, ಲೋಕೋಪಯೋಗಿ ಇಲಾಖೆಯ ಇಇ ವಿನಯ್‌ಕುಮಾರ್, ಡಿವೈಎಸ್‌ಪಿ ನಾಗರಾಜು, ಹನೂರು ತಹಶೀಲ್ದಾರ್ ಆನಂದಯ್ಯ, ತಾಲೂಕು ಆರೋಗ್ಯಾಕಾರಿ ಡಾ. ಪ್ರಕಾಶ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತಿರುಪತಿ, ಧರ್ಮಸ್ಧಳ ಮಾದರಿ ವ್ಯವಸ್ಧೆಗೆ ಸೂಚನೆ: ಮಹದೇಶ್ವರ ಬೆಟ್ಟಕ್ಕೆ ರಾಜ್ಯ, ಹೊರ ರಾಜ್ಯದಿಂದ ಬರುವ ಭಕ್ತರಿಗೂ ಉತ್ತಮ ಸೇವೆ ಒದಗಿಸಲು ಪ್ರತಿಯೊಬ್ಬ ಅಧಿಕಾರಿ ಶ್ರಮಿಸಬೇಕು ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಮಲೆಮಹದೇಶ್ವರ ಬೆಟ್ಟಪ್ರಾಧಿಕಾರದ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ತಿರುಪತಿ ಮಾದರಿಯಲ್ಲಿ ಬೆಟ್ಟದಲ್ಲೂ ಸ್ವಚ್ಚತೆ, ಶಿಸ್ತು ಕಾಪಾಡುವತ್ತ ಅಧಿಕಾರಿಗಳು ಮುಂದಾಗಬೇಕು, ಮಲೆಮಹದೇಶ್ವರ ಬೆಟ್ಟಕ್ಕಿಂತಲೂ ನೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಹೋಗುತ್ತಾರೆ. ಆದರೆ, ಎಲ್ಲಿಯೂ ಅನೈರ್ಮಲ್ಯ, ಅಶಿಸ್ತು ಕಂಡು ಬರುವುದಿಲ್ಲ.
ಅಸಿಸ್ಟೆಂಟ್ ಮ್ಯಾನೇಜರ್‌ನಿಂದಲೇ ಬ್ಯಾಂಕಿಗೆ ಕನ್ನ: 2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್!
ಎಲ್ಲವೂ ಕ್ರಮಬದ್ಧವಾಗಿ ನಡೆಯುತ್ತದೆ. ಅದನ್ನು ಬೆಟ್ಟದಲ್ಲಿಯೂ ಅಳವಡಿಸಿಕೊಳ್ಳಬೇಕು. ಪ್ರಾಧಿಕಾರ ಉದ್ದೇಶವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು. ದಾಸೋಹ ಭವನದಲ್ಲಿ ಭಕ್ತಾಧಿಗಳಿಗೆ ಗುಣಮಟ್ಟದ ಪ್ರಸಾದ ಸಿಗುತ್ತಿಲ್ಲ. ಧರ್ಮಸ್ಧಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ದೆ ಜೊತೆಗೆ ಚರ್ಚಿಸಿದ್ದು, ಅಧಿಕಾರಿಗಳನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಮಾದಪ್ಪನ ನಂಬಿ ಬರುವ ಬಡ ಭಕ್ತನಿಗೂ ಸಹ ಉತ್ತಮ ಸೇವೆ ಮತ್ತು ಪ್ರಸಾದ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.